ಆಡೆನ್‌ ಕಾವ್ಯದ ಅರಿವು 


Team Udayavani, Feb 12, 2017, 3:45 AM IST

auden.jpg

ಶಾಲಾಕಾಲೇಜು ಶಿಕ್ಷಣ ಕಾಲದಲ್ಲಿ ನಾವು ಪಾಠಪಟ್ಟಿಯ ಆಚೀಚೆ ನೋಡುವುದು ಅಪರೂಪ. ಪಾಠಪಟ್ಟಿಯಲ್ಲಿದ್ದ ಪಠ್ಯಗಳನ್ನೂ ಇಡಿಯಾಗಿ ಓದಿರುವುದಿಲ್ಲ. ಪರೀಕ್ಷೆಯಲ್ಲಿನ ನಿರೀಕ್ಷಿತ ಪ್ರಶ್ನೆಗಳನ್ನು ಊಹಿಸಿಕೊಂಡೇ ಅಧ್ಯಾಪಕರಿಂದ ಪಾಠವೂ, ವಿದ್ಯಾರ್ಥಿಗಳಿಂದ ತಯಾರಿಯೂ ಸಾಗುತ್ತಿರುತ್ತದೆ. ನನ್ನ ಸನ್ನಿವೇಶವೂ ಅದೇ ಆಗಿತ್ತು. ನನ್ನ ಎಂ.ಎ.ಯ ಆಧುನಿಕ ಇಂಗ್ಲಿಷ್‌ ಕಾವ್ಯ ಟಿ. ಎಸ್‌. ಎಲಿಯಟ್‌ಗಿಂತ ಮುಂದಕ್ಕೆ ಹೋಗಿರಲಿಲ್ಲ. ಸ್ನಾತಕೋತ್ತರ ಪದವಿ ಗಿಟ್ಟಿಸಿಕೊಂಡ ನಂತರವೇ ನಾನು ಈ ಮಿತಿಯನ್ನು ಮೀರಲು ಯತ್ನಿಸಿದ್ದು. ಹಾಗೆ ನಾನು ನನ್ನದಾಗಿಸಿಕೊಂಡ ಕವಿಗಳಲ್ಲಿ ಡಬ್ಲೂ. ಎಚ್‌. ಆಡೆನ್‌ (1907-1973) ಕೂಡ ಒಬ್ಬ. ಅರುವತ್ತರ ದಶಕದಲ್ಲಿ ಆಡೆನ್‌ನ ಹೆಸರು ಕೇಳಿದ ವಿದ್ಯಾರ್ಥಿಗಳು ಹೆಚ್ಚು ಮಂದಿ ಇದ್ದಿರಲಾರರು; ಇಂದು ಬಹುಶಃ ಇಂಗ್ಲಿಷ್‌ ಎಂ.ಎ. ವಿದ್ಯಾರ್ಥಿಗಳೆಲ್ಲ ಅವನ ಕೆಲವು ಕವಿತೆಗಳನ್ನಾದರೂ ಅಭ್ಯಾಸ ಮಾಡಿರುತ್ತಾರೆ. ಇಂಗ್ಲೆಂಡಿನ ಯೋರ್ಕ್‌ನಲ್ಲಿ ಹುಟ್ಟಿ, ಬರ್ಮಿಂಗ್‌ಹಮ್‌ನಲ್ಲಿ ಬೆಳೆದು, ಆಕ್ಸ್‌ಫ‌ರ್ಡ್‌ನಲ್ಲಿ ಓದಿದ ಆಡೆನ್‌ ಕೆಲವು ಕಾಲ ಯುರೋಪಿನ ಕೆಲವೆಡೆ ಇಂಗ್ಲಿಷ್‌ ಕಲಿಸುತ್ತಿದ್ದು 1939ರಲ್ಲಿ ಅಮೆರಿಕೆಗೆ ವಲಸೆ ಹೋಗಿ, 1946ರಲ್ಲಿ ಅಮೆರಿಕನ್‌ ನಾಗರಿಕತೆಯನ್ನು ಪಡೆಯುತ್ತಾನೆ. ಇದು ಅವನ ಜೀವನದ ಒಂದು ದೊಡ್ಡ ತಿರುವಾದರೆ, ಆಂಗ್ಲಿಕನ್‌ ಚರ್ಚ್‌ ವಾತಾವರಣದಲ್ಲಿ ಬೆಳೆದು, ಯೌವನದಲ್ಲಿ ಎಡಪಂಥಕ್ಕೆ ವಾಲಿದ್ದವನು 1948ರಲ್ಲಿ ಪುನಃ ಆಂಗ್ಲಿಕನ್‌ ಚರ್ಚಿಗೆ ಮರಳಿದುದು ಇನ್ನೊಂದು ತಿರುವು. 

    ಆಡೆನ್‌ ಹಲವಾರು ಒಳ್ಳೆಯ ದೊಡ್ಡ ಸಣ್ಣ ಕವಿತೆಗಳನ್ನು ಬರೆದಿ¨ªಾನೆ. ಅವನ ಆಸಕ್ತಿ, ಅನುಭವ, ಭಾಷಾ ಪರಿಣತಿ ಅಸಾಧಾರಣವಾದವು. ಆಡೆನ್‌ ಮಾದರಿಗೆ ಉದಾಹರಣೆಯಾಗಿ Musee des Beaseux Arts ಎನ್ನು°ವುದೊಂದು ಜನಪ್ರಿಯ ಕವಿತೆಯನ್ನು ತೆಗೆದುಕೊಳ್ಳಬಹುದು. ಡಿಸೆಂಬರ್‌ 1938ರಲ್ಲಿ ಕವಿ ಬ್ರಸೆಲ್ಸ್‌ನಲ್ಲಿ¨ªಾಗ (ಬೆಲ್ಜಿಯಂನ ರಾಜಧಾನಿ) ಬರೆದುದು. ಕವಿತೆಯ ಫ್ರೆಂಚ್‌ ಶೀರ್ಷಿಕೆಯ ಅರ್ಥ ಲಲಿತಕಲಾ ಮ್ಯೂಸಿಯಂ ಎಂಬುದಾಗಿ. ಅಲ್ಲಿನ ವರ್ಣಚಿತ್ರವೊಂದರ ಸ್ಫೂರ್ತಿಯಿಂದ ಬರೆದ ಕವಿತೆ ಇದು. ಇಕಾರಸ್‌ನ ಪತನ ಎಂಬ ಹೆಸರಿನ ಈ ಚಿತ್ರವನ್ನು ರಚಿಸಿದವನು 16ನೆಯ ಶತಮಾನದ ಡಚ್‌ ಕಲಾವಿದ ಬ್ರೂಗೆಲ್‌. ಇದರಲ್ಲಿ ಗ್ರೀಕ್‌ ಪುರಾಣ ಕತೆಯ ಇಕಾರಸ್‌ ಅರಗಿನ ರೆಂಕೆಗಳನ್ನು ಕಟ್ಟಿಕೊಂಡು, ತಂದೆ ಡೆಡಾಲಸ್‌ನ ಸೂಚನೆಗೆ ವಿರುದ್ಧವಾಗಿ, ಸೂರ್ಯನ ಅತಿ ಹತ್ತಿರಕ್ಕೆ ಹಾರಿದ ಕಾರಣ ಸಮುದ್ರಕ್ಕೆ ಬಿದ್ದು ಸಾಯುವುದರ ಚಿತ್ರಣ ಇದೆ. ಜೊತೆಗೆ ಯಾವುದೋ ಉದ್ದೇಶದಿಂದ ಸಾಗುವ ಒಂದು ನೌಕೆ ಮತ್ತು ಈಚೆ ನೆಲದಲ್ಲಿ ಹೊಲ ಉಳುವ ರೈತನ ಚಿತ್ರಗಳೂ ಇವೆ. ಬ್ರೂಗೆಲ್‌ ಈ ಮೂರೂ ಚಿತ್ರಗಳನ್ನು ಒಟ್ಟಿಗೇ ಕೊಡುವ ಉದ್ದೇಶ ಏನಿರಬಹುದು? ಆಡೆನ್‌ನ ಪ್ರಕಾರ:
About suffering they were never wrong, 
The Old Masters; how well, they understood 
Its human position; how it takes place 
While someone else is eating or opening a window or just walking dully along;    

  ಹಳೆ ಚಿತ್ರಕಲಾವಿದರಿಗೆ ಗೊತ್ತಿತ್ತು ಸಂಕಟದ ಮಾನುಷ ಸ್ಥಿತಿ: ಹೇಗೆ ಅದು ಸಂಭವಿಸುತ್ತಿರುವಾಗಲೇ ಇತರ ವಿದ್ಯಮಾನಗಳು ನಡೆಯುತ್ತ ಇರುತ್ತವೆ ಎನ್ನುವುದು; ಎಂಥಾ ದುರಂತದಲ್ಲೂ ತಿನ್ನುವುದು, ಕಿಟಿಕಿ ತೆರೆಯುವುದು ಅಥವಾ ಸುಮ್ಮನೇ ಹೆಜ್ಜೆ ಹಾಕುವುದು ಸಾಗುತ್ತಲೇ ಇರುತ್ತವೆ! ಯಾರು ಯಾವುದಕ್ಕೋಸ್ಕರವೂ ಕಾಯುವುದಿಲ್ಲ.

Gare du Midi ಎಂಬ ಹೆಸರಿನ ಬರೇ ಎಂಟು ಸಾಲುಗಳದೊಂದು ಕವಿತೆಯಿದೆ; ಇದೂ ಬ್ರಸೆಲ್ಸ್‌ಗೆ ಸಂಬಂಧಿಸಿದ್ದು, ಫ್ರೆಂಚ್‌ ಶೀರ್ಷಿಕೆ. (ಬೆಲ್ಜಿಯಮಿನಲ್ಲಿ ಡಚ್‌ ಮತ್ತು ಫ್ರೆಂಚ್‌ ಎರಡೂ ಭಾಷೆಗಳು ಸಲ್ಲುತ್ತವೆ.) ಇದೊಂದು ಬಹು ದೊಡ್ಡ ರೈಲು ನಿಲ್ದಾಣ; ಬ್ರಸೆಲ್ಸ್‌-ಸೌತ್‌ ಎಂದೂ ಕರೆಯುತ್ತಾರೆ. ಈ ಕವಿತೆಯಲ್ಲಿ ದಕ್ಷಿಣ ದಿಶೆಯಿಂದ ಸಾಮಾನ್ಯವಾದ ಟ್ರೇನೊಂದು ಬಂದು ನಿಲ್ಲುತ್ತದೆ; ಗೇಟಿನ ಬಳಿ ನಿಬಿಡವಾದ ಜನ. ಟ್ರೇನಿನಿಂದ ಇಳಿದ ವ್ಯಕ್ತಿಯೊಬ್ಬ ಹೊರ ಬರುತ್ತಾನೆ. ಅವನನ್ನು ಸ್ವೀಕರಿಸುವುದಕ್ಕೆ ಯಾವ ಅಧಿಕಾರಿಗಳೂ ಬಂದಿಲ್ಲ. ಬ್ರಿàಫ್ಕೇಸನ್ನು ಎದೆಗೆ ಅವಚಿಕೊಂಡು ಅವನು ನಗರದ ಕಡೆಗೆ ಹೆಜ್ಜೆ ಹಾಕುತ್ತಾನೆ. ಅವನ ಬಾಯಿ ಏನೋ ಒಂದು ತರ ಇದೆ, ಗಾಬರಿ ಮತ್ತು ದಯೆ ಮೂಡಿಸುವಂಥದು. ಇದರÇÉೇನು ವಿಶೇಷ ಎಂದು ಕೇಳಬಹುದು. ಕೊನೆಯ ಎರಡು ಸಾಲುಗಳನ್ನು ಗಮನಿಸಿ:

Clutching a little case,
He walks out briskly to infect a city
Whose terrible future may have just arrived.

ಯಾರೀ ಮನುಷ್ಯ? ಮೂವತ್ತನೇ ದಶಕದ ಯುರೊಪ್‌ ಇದು: ಈತನೊಬ್ಬ ಡಿಪ್ಲೊಮ್ಯಾಟ್‌ ಇರಬಹುದು, ಕ್ರಾಂತಿಕಾರಿ ಇರಬಹುದು, ಅನಾರ್ಕಿಸ್ಟ್‌ ಇರಬಹುದು, ಗುಪ್ತಚರ ಇರಬಹುದು; ಜಿnfಛಿcಠಿ ಎಂಬ ಪದ ನೋಡಿ: ಸಾಂಕ್ರಾಮಿಕ ರೋಗ ಹರಡಿಸುವ ಅರ್ಥದಲ್ಲಿ, ಬಹುಶಃ ಒಂದು ರೂಪಕವಾಗಿಯೇ ಅದಕ್ಕೆ ಅರ್ಥವ್ಯಾಪ್ತಿ ಬರುವುದು. ಆದರೆ ಅದು ಯಾವುದರ ರೂಪಕ ಎನ್ನುವುದು ತೆರೆದ ಪ್ರಶ್ನೆ.

    ಆಡೆನ್‌ ಒಬ್ಬ ಕವಿಯಲ್ಲದೆ, ಕಾದಂಬರಿಕಾರನಲ್ಲ. ಆದರೆ ಅವನು The Novelist ಎಂಬ ಉತ್ಕೃಷ್ಟ ಕವಿತೆಯೊಂದನ್ನು ಬರೆದಿ¨ªಾನೆ! ಆಡೆನ್‌ ಇಲ್ಲಿ ಕವಿ ಮತ್ತು ಕಾದಂಬರಿಕಾರನ ನಡುವಿನ ವ್ಯತ್ಯಾಸವನ್ನು ಸ್ವಾರಸ್ಯಕರವಾಗಿ ಗುರುತಿಸಿ¨ªಾನೆ; ಸ್ವತಃ ಕವಿಯಾಗಿದ್ದರೂ ಕಾದಂಬರಿಕಾರರ ಕುರಿತು ತನಗಿರುವ ಗೌರವವನ್ನು ಆತ ಮರೆಸಿಲ್ಲ. ಮೂಲದಲ್ಲಿ ಸಾನೆಟ್‌ ರೂಪದಲ್ಲಿರುವ ಈ ಕವಿತೆಯ ಮುಕ್ತ ಭಾಷಾಂತರ ಹೀಗಿದೆ: 

ಸಮವಸ್ತ್ರದ ಹಾಗೆ ಪ್ರತಿಭೆಯೊಳಗೆ ಸೇರಿದ್ದು, ಪ್ರತಿಯೊಬ್ಬ ಕವಿಯ
ದರ್ಜೆ ಎಲ್ಲರಿಗೂ ಗೊತ್ತು;
ಗುಡುಗುಮಳೆಯಂತೆ ನಮ್ಮನ್ನವರು ಅಪ್ರತಿಭರನ್ನಾಗಿ ಮಾಡಬಲ್ಲರು,
ಅಥವಾ ಎಳವೆಯÇÉೇ ಸಾಯಬಲ್ಲರು ಇಲ್ಲವೇ ಒಬ್ಬಂಟಿಯಾಗಿ ಇರಬಲ್ಲರು
ಅನೇಕ ವರ್ಷ. ಅಶ್ವಾರೋಹಿಗಳಂತೆ ಮುಂದಕ್ಕೆ ಹಾಯಬಲ್ಲರು. ಆದರೆ 
ಈತನಿ¨ªಾನಲ್ಲ ಇವನು ತನ್ನ ಕೌಮಾರ್ಯ ಪ್ರತಿಭೆಯಿಂದ ಹೊರಬರಲು
ಬನ್ನಪಡಬೇಕು, ಹೇಗೆ ಸರಳವಾಗಿರುವುದು, ಹೇಗೆ ಎಡವಟ್ಟಾಗಿರುವುದು
ಎನ್ನುವುದನ್ನು ಕಲಿಯಬೇಕು, ಯಾರೂ ತಿರುಗಿನೋಡದವನೊಬ್ಬ
ಹೇಗೆ ಆಗಿರುವುದೆನ್ನುವುದನ್ನು. 
ಯಾಕೆಂದರೆ ತನ್ನ ಅತಿ ಸಣ್ಣ ಆಸೆಯನ್ನೂ ಸಾಧಿಸುವುದಕ್ಕೆ ಅವನು ಬೇಸರದ
ಮೊತ್ತವಾಗಿರಬೇಕು, ಜನಸಾಮಾನ್ಯರ ಪ್ರೀತಿಯ ದೂರುಗಳಿಗೆ
ಗುರಿಯಾಗಿ, ಷರೀಫ‌ರ ನಡುವೆ
ಷರೀಫ‌ನಾಗಿ, ಕೊಳಕರ ನಡುವೆ ಕೊಳಕನಾಗಿ,
ಮತ್ತು ತನ್ನ ದುರ್ಬಲ ವ್ಯಕ್ತಿತ್ವದಲ್ಲಿ, ಸಾಧ್ಯವಿದ್ದರೆ, ಮನುಷ್ಯನ 
ಎÇÉಾ ತಪ್ಪುಗಳನ್ನೂ ಪೆದ್ದನಂತೆ ಸಹಿಸಬೇಕು. 

ಕಾದಂಬರಿಕಾರನ ಈ ಒಳಗೊಳ್ಳುವಿಕೆ, ಸಹನಾಗುಣ, ಎಲ್ಲರೊಡನೆ ಅವರಂತಾಗಿರುವುದು ಇವೆಲ್ಲವೂ ಆಡೆನ್‌ ಮೆಚ್ಚುವ ಸಂಗತಿಗಳು; ಯೋಚಿಸಿ ನೋಡಿದರೆ ಎಲ್ಲರೂ ಮೆಚ್ಚಬೇಕಾದ್ದು. ಕವಿಯ ಗುಣಗಳು ಬೇರೆಯೇ. ಈ ರೀತಿ ಕವಿ ಮತ್ತು ಕಾದಂಬರಿಕಾರರ ವ್ಯತ್ಯಾಸಗಳನ್ನು ಆಡೆನ್‌ನಂತೆ ಗುರುತಿಸಿದವರು ಬೇರಿಲ್ಲ. 

    ತನ್ನ ಕಾಲಕ್ಕೆ ಸಲ್ಲುತ್ತಲೇ ಆಡೆನ್‌ ಹೇಗೆ ಸರ್ವಕಾಲಕ್ಕೂ ಸಲ್ಲುವವ ಎನ್ನುವುದಕ್ಕೆ ಅವನ Epitaph on a Tyrant  (ಸರ್ವಾಧಿಕಾರಿಯೊಬ್ಬನ ಗೋರಿ ಬರಹ) ಎಂಬ ಈ ಚಿಕ್ಕ ಕವಿತೆಯನ್ನು ನೋಡಬಹುದು: 
Perfection, of a kind, was what he was after,
And the poetry he invented was easy to understand;
He knew human folly like the back of his hand,
And was greatly interested in armies and fleets;
When he laughed, respectable senators burst with laughter,
And when he cried the little children died in the streets.
    ಆಡನ್‌ ನಾಲ್ಕು ನೂರಕ್ಕಿಂತಲೂ ಹೆಚ್ಚು ಸಣ್ಣದೊಡ್ಡ ಕವಿತೆಗಳನ್ನು ಬರೆದವ; ಅಲ್ಲದೆ ಕಾವ್ಯದಂಥ ನೀಳYವಿತೆಗಳನ್ನೂ ರಚಿಸಿ¨ªಾನೆ. ಟಿ. ಎಸ್‌. ಎಲಿಯಟ್‌ಗೆ ಅವನ ಕವಿತೆಗಳು ಹಿಡಿಸಿದುವು, ಹಾಗೂ ತಾನು ನೋಡಿಕೊಳ್ಳುತ್ತಿದ್ದ ಫೇಬರ್‌ ಏಂಡ್‌ ಫೇಬರ್‌ ಪ್ರಕಾಶನ ಸಂಸ್ಥೆಯ ಮೂಲಕ ಅವನು ಆಡನ್‌ಗೆ ಪ್ರಕಟಣೆಯ ಪ್ರೋತ್ಸಾಹವನ್ನೂ ನೀಡಿದ. ಎಲಿಯಟ್‌ ಆಧುನಿಕ ಇಂಗ್ಲಿಷ್‌ ಕಾವ್ಯದ ಉತ್ತುಂಗದಲ್ಲಿದ್ದರೆ, ಆಡೆನ್‌ ಆಧುನಿಕೋತ್ತರ ಯುಗದ ನಿರೀಕ್ಷೆಯಲ್ಲಿದ್ದವನು ಎನ್ನಬೇಕಾಗುತ್ತದೆ. ಆದ್ದರಿಂದ ಆಡೆನ್‌ ಕಾವ್ಯದ ಅರಿವು ನಮ್ಮ ಕಾವ್ಯಾನುಭವದ ವಿಸ್ತರಣೆಯೂ ಆಗುತ್ತದೆ.

– ಕೆ. ವಿ. ತಿರುಮಲೇಶ್‌

ಟಾಪ್ ನ್ಯೂಸ್

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Jaipur: 13 ಮಂದಿಯನ್ನು ಬಲಿ ಪಡೆದ ದುರಂತದಲ್ಲಿ LPG ಟ್ಯಾಂಕರ್ ಚಾಲಕ ಬದುಕುಳಿದಿದ್ದೇ ರೋಚಕ

ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release Date: ಸೂಪರ್‌ ಹಿಟ್‌ ʼಭೈರತಿ ರಣಗಲ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು

Yearender 2024:ಸುಶೀಲ್‌ ಕುಮಾರ್‌ ಮೋದಿ To ಬಾಬಾ-2024ರಲ್ಲಿ ವಿಧಿವಶರಾದ ರಾಜಕೀಯ ಮುಖಂಡರು

Tollywood: ಸಂಧ್ಯಾ ಥಿಯೇಟರ್‌ ಕಾಲ್ತುಳಿತ ಪ್ರಕರಣ; ಅಲ್ಲು ಅರ್ಜುನ್‌ ಬೌನ್ಸರ್‌ ಬಂಧನ

Tollywood: ಸಂಧ್ಯಾ ಥಿಯೇಟರ್‌ ಕಾಲ್ತುಳಿತ ಪ್ರಕರಣ; ಅಲ್ಲು ಅರ್ಜುನ್‌ ಬೌನ್ಸರ್‌ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.