5-0 ಕ್ಲೀನ್‌ಸ್ವೀಪ್ ಪರಾಕ್ರಮ: ದ. ಆಫ್ರಿಕಾ ನಂ. 1
Team Udayavani, Feb 12, 2017, 3:45 AM IST
ಸೆಂಚುರಿಯನ್: ಪ್ರವಾಸಿ ಶ್ರೀಲಂಕಾವನ್ನು 5-0 ವೈಟ್‌ವಾಶ್‌ಗೆ ತುತ್ತಾಗಿಸಿದ ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟಿನ ನಂಬರ್ ವನ್ ತಂಡವಾಗಿ ಮೂಡಿಬಂದಿದೆ. ಕಳೆದ 26 ತಿಂಗಳಿಂದ ಈ ಸ್ಥಾನ ಅಲಂಕರಿಸಿದ್ದ ಆಸ್ಟ್ರೇಲಿಯ ವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದೆ.
ಶುಕ್ರವಾರ ಇಲ್ಲಿನ “ಸೂಪರ್ ನ್ಪೋರ್ಟ್ ಪಾರ್ಕ್’ನಲ್ಲಿ ಅಹರ್ನಿಶಿಯಾಗಿ ನಡೆದ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 88 ರನ್ನುಗಳಿಂದ ಶ್ರಿಲಂಕಾವನ್ನು ಮಣಿಸಿತು. ಇದರೊಂದಿಗೆ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡಿತು. ಇದು ದ್ವಿಪಕ್ಷೀಯ ಸರಣಿಯೊಂದನ್ನು ಹರಿಣಗಳ ಪಡೆ 5-0 ಅಂತರದಿಂದ ಗೆದ್ದ 6ನೇ ದೃಷ್ಟಾಂತ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ಇದರ ಭರ್ಜರಿ ಲಾಭವೆತ್ತಿ 6 ವಿಕೆಟಿಗೆ 384 ರನ್ ಸೂರೆಗೈದಿತು. ಶ್ರೀಲಂಕಾ 8 ವಿಕೆಟಿಗೆ 296ರ ತನಕ ಬಂದು ಶರಣಾಯಿತು. ಇದು ಲಂಕಾ ವಿರುದ್ಧ ಆಫ್ರಿಕಾ ಪೇರಿಸಿದ ಸರ್ವಾಧಿಕ ಮೊತ್ತ. ಕೇಪ್‌ಟೌನ್‌ನಲ್ಲಿ ನಡೆದ 4ನೇ ಪಂದ್ಯದಲ್ಲಿ 367 ರನ್ ಗಳಿಸಿದ ದಾಖಲೆ ಮೂರೇ ದಿನದಲ್ಲಿ ಪತನಗೊಂಡಿತು.
ಆಮ್ಲ “50’ನೇ ಶತಕ !: ಈ ಪಂದ್ಯ 3 ಶತಕ ಗಳಿಗೆ ಸಾಕ್ಷಿಯಾಯಿತು. ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ 109 ರನ್ (87 ಎಸೆತ, 16 ಬೌಂಡರಿ), ಹಾಶಿಮ್ ಆಮ್ಲ 154 ರನ್ (134 ಎಸೆತ, 15 ಬೌಂಡರಿ, 5 ಸಿಕ್ಸರ್) ಹೊಡೆದರು. ಶ್ರೀಲಂಕಾದ ಗುಣರತ್ನೆ 114 ರನ್ ಬಾರಿಸಿದರು.
ಇದು ಆಮ್ಲ ಬಾರಿಸಿದ 24ನೇ ಶತಕ. ವಿಶೇಷವೆಂದರೆ, ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಮ್ಲ ಹೊಡೆದ 50ನೇ ಸೆಂಚುರಿ. 348 ಇನ್ನಿಂಗ್ಸ್ ಗಳಲ್ಲಿ ಇದು ದಾಖಲಾಯಿತು. ಅತ್ಯಂತ ಕಡಿಮೆ ಇನ್ನಿಂಗ್ಸ್ ಗಳಲ್ಲಿ 50 ಶತಕ ಪೂರೈಸಿದ ದಾಖಲೆ ಯನ್ನೂ ಆಮ್ಲ ಒಲಿಸಿಕೊಂಡರು.
ಕ್ವಿಂಟನ್ ಡಿ ಕಾಕ್ ಅವರಿಂದ ದಾಖಲಾದದ್ದು 12ನೇ ಶತಕ. ಡಿ ಕಾಕ್-ಆಮ್ಲ ಜೋಡಿಯಿಂದ ಮೊದಲ ವಿಕೆಟಿಗೆ 26.3 ಓವರ್‌ಗಳಿಂದ 187 ರನ್ ಹರಿದು ಬಂತು. ಆಫ್ರಿಕಾ ಆರಂಭಿಕರಿಬ್ಬರು ಒಂದೇ ಪಂದ್ಯದಲ್ಲಿ ಶತಕ ಬಾರಿಸಿದ 5ನೇ ಸಂದರ್ಭ ಇದಾಗಿದೆ.
ಗುಣರತ್ನೆ ಪಾಲಿಗೆ ಇದು ಚೊಚ್ಚಲ ಶತಕ ಸಂಭ್ರಮ (117 ಎಸೆತ, 14 ಬೌಂಡರಿ, 2 ಸಿಕ್ಸರ್). 82 ರನ್ನಿಗೆ 5 ವಿಕೆಟ್ ಉರುಳಿಸಿಕೊಂಡು ಲಂಕಾ ದೊಡ್ಡ ಸೋಲಿನತ್ತ ಮುಖ ಮಾಡಿದಾಗ ಗುಣರತ್ನೆ ಹೋರಾಟ ಸಂಘಟಿಸಿದರು. ಅವರಿಗೆ ಸಚಿತ ಪತಿರಣ (56) ಬೆಂಬಲ ನೀಡಿದರು.
350 ರನ್: ನೂತನ ದಾಖಲೆ
ದಕ್ಷಿಣ ಆಫ್ರಿಕಾ 350 ಪ್ಲಸ್ ರನ್ ದಾಖಲಿಸಿದ್ದು ಇದು 24ನೇ ಸಲ. ಇದು ಏಕದಿನ ಕ್ರಿಕೆಟಿನ ನೂತನ ದಾಖಲೆ. 23 ಸಲ ಈ ಸಾಧನೆ ಮಾಡಿದ ಭಾರತ 2ನೇ ಸ್ಥಾನಕ್ಕೆ ಕುಸಿಯಿತು. ಆಸ್ಟ್ರೇಲಿಯ 3ನೇ ಸ್ಥಾನದಲ್ಲಿದೆ (18).
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ-6 ವಿಕೆಟಿಗೆ 384 (ಆಮ್ಲ 154, ಡಿ ಕಾಕ್ 109, ಲಕ್ಮಲ್ 71ಕ್ಕೆ 3, ಮದುಶಂಕ 70ಕ್ಕೆ 2). ಶ್ರೀಲಂಕಾ-8 ವಿಕೆಟಿಗೆ 296 (ಗುಣರತ್ನೆ 114, ಪತಿರಣ 56, ಮಾರಿಸ್ 31ಕ್ಕೆ 4, ಪಾರ್ನೆಲ್ 51ಕ್ಕೆ 2). ಪಂದ್ಯಶ್ರೇಷ್ಠ: ಹಾಶಿಮ್ ಆಮ್ಲ. ಸರಣಿಶ್ರೇಷ್ಠ: ಫಾ ಡು ಪ್ಲೆಸಿಸ್.
ಏಕದಿನ ಟೀಮ್ ರ್‍ಯಾಂಕಿಂಗ್
1. ದಕ್ಷಿಣ ಆಫ್ರಿಕಾ (119)
2. ಆಸ್ಟ್ರೇಲಿಯ (118)
3. ನ್ಯೂಜಿಲ್ಯಾಂಡ್ (113)
4. ಭಾರತ (112)
5. ಇಂಗ್ಲೆಂಡ್ (107)
6. ಶ್ರೀಲಂಕಾ (98)
7. ಬಾಂಗ್ಲಾದೇಶ (91)
8. ಪಾಕಿಸ್ಥಾನ (89)
9. ವೆಸ್ಟ್ ಇಂಡೀಸ್ (86)
10. ಅಫ್ಘಾನಿಸ್ಥಾನ (52)
11. ಜಿಂಬಾಬ್ವೆ (48)
12. ಅಯರ್‌ಲ್ಯಾಂಡ್ (42)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 48,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.