ಹಣ ಕೊಟ್ಟರೂ ಮೇವು, ನೀರು ಸಿಗಲ್ಲ: ರೈತರ ಅಳಲು

Team Udayavani, Feb 12, 2017, 3:45 AM IST

11-bgk-2.jpg

ಬೆಂಗಳೂರು: ಹಿಂಗಾರು ಮಳೆಯಿಲ್ಲದೆ ರಾಜ್ಯದಲ್ಲಿ ಉಂಟಾಗಿರುವ ಬೆಳೆ ಹಾನಿ, ಕುಡಿಯುವ ನೀರಿನ ತೊಂದರೆ ಕುರಿತು ಅಧ್ಯಯನ ನಡೆಸಲು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡದ ಸದಸ್ಯರು ಶನಿವಾರ ಚಿತ್ರದುರ್ಗ, ಮೈಸೂರು, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿದರು.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹುಲಸಗೇರಿ ಬಳಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರು ಮನವಿ ಪತ್ರ ಸಲ್ಲಿಸಿ, ಪರಿಹಾರಕ್ಕೆ ಆಗ್ರಹಿಸಿದರು. ಈ ವೇಳೆ, ಸುದ್ದಿಗಾರರ ಜತೆ ಮಾತನಾಡಿ, ಈ ಬಾರಿ ಶೇ.93ರಷ್ಟು ಮಳೆ ಕೊರತೆ ಉಂಟಾಗಿದೆ. ಕೇವಲ ಶೇ.7ರಷ್ಟು ಮಳೆ ಬಂದಿದ್ದು, ಬಿತ್ತನೆ ಮಾಡಿದ ಬೆಳೆ ಸಂಪೂರ್ಣ ಹಾನಿಯಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಆದರೆ, ಬರದಿಂದ ಬಳಲಿದ ರಾಜ್ಯದ ರೈತರ ನೆರವಿಗೆ ಬರಬೇಕಾದ ಕೇಂದ್ರ ಸರ್ಕಾರ, ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಪರಿಹಾರ ಬೇಡ; ನೀರು ಕೊಡಿ:
ಈ ಮಧ್ಯೆ, ಅಧ್ಯಯನ ಪ್ರವಾಸದ ವೇಳೆ ಅಧಿಕಾರಿಗಳ ತಂಡಕ್ಕೆ ಬರದ ಭೀಕರತೆಯ ಸಾಕ್ಷಾತ್‌ ದರ್ಶನವಾಯಿತು. ಅಧಿಕಾರಿಗಳ ಬಳಿ ಕೆಲವೆಡೆ ರೈತರು ನೀರಿಗಾಗಿ ಬೇಡಿಕೆ ಇಟ್ಟರು. ನಮಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಪರಿಹಾರ ಬೇಡ. ನಮ್ಮ ಭೂಮಿಗೆ ಸೂಕ್ತ ನೀರಾವರಿ ಸೌಲಭ್ಯ ಕಲ್ಪಿಸಿ. ಕೆರೆಗಳಿಗೆ ನೀರು ತುಂಬಿಸಿ, ಆಗ ನಾವು ನೆಮ್ಮದಿಯ ಕೃಷಿ ಮಾಡುತ್ತೇವೆ. ಕುಡಿಯಲು ನೀರು ಪೂರೈಸಿ ಎಂದು ಮನವಿ ಮಾಡಿದರು.

ಬರ ಅಧ್ಯಯನ ತಂಡದ ಸದಸ್ಯರು ಹೋದಲ್ಲೆಲ್ಲ ಉದ್ಯೋಗದ ಸಮಸ್ಯೆ, ಕುಡಿಯುವ ನೀರಿನ ಬವಣೆ ಮುಂದಿಟ್ಟ ರೈತರು, ಜಾನುವಾರುಗಳಿಗೆ ಮೇವು, ಗೋಶಾಲೆ ತೆರೆಯಬೇಕೆಂದು ಕಣ್ಣೀರಿಟ್ಟು ಕೋರಿಕೊಂಡರು. ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದ್ದು ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಕುಡಿಯುವ ನೀರಿಗಾಗಿ ಗಂಟೆಗಟ್ಟಲೆ ಉರಿಬಿಸಿಲಿನಲ್ಲಿ ಕಾದು ನಿಂತು ಮಹಿಳೆಯರು ನೀರು ತರುವ ಪರಿಸ್ಥಿತಿ ಇದೆ. ಮಳೆ, ಇಲ್ಲದೆ ಕೃಷಿ ಮಾಡುವುದೇ ಕಷ್ಟವಾಗಿದೆ. ಹಳ್ಳಿಯಲ್ಲಿ ಹಣ ಕೊಟ್ಟರೂ ಮೇವು ಮತ್ತು ನೀರು ಸಿಗುತ್ತಿಲ್ಲ. ಹೀಗಾದರೆ ಜಾನುವಾರುಗಳನ್ನು ಸಾಕುವುದು ಹೇಗೆ ಎಂದು ಅಳಲು ತೋಡಿಕೊಂಡರು.

ಇದೇ ವೇಳೆ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ, ಜಿಲ್ಲಾಡಳಿತಗಳಿಂದ ಬರ ಪರಿಸ್ಥಿತಿ ಹಾಗೂ ತುರ್ತು ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದರು. ಬಳಿಕ, ಸುದ್ದಿಗಾರರ ಜೊತೆ ಮಾತನಾಡಿದ ಅಧಿಕಾರಿಗಳು, ವಿವಿಧ ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸುತ್ತಿದ್ದೇವೆ. ತೀವ್ರ ಬರ ಇರುವುದು ನಮ್ಮ ಗಮನಕ್ಕೆ ಬಂದಿದೆ. ಬೆಳೆ ಹಾನಿ, ನಷ್ಟದ ಕುರಿತು ವಿವರವನ್ನೂ ಪಡೆದಿದ್ದೇವೆ. ಒಂದು ವಾರದಲ್ಲಿ ಕೇಂದ್ರಕ್ಕೆ ನಮ್ಮ ಅಧ್ಯಯನ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಟಾಪ್ ನ್ಯೂಸ್

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

Vijayapura: ತಿರುಪತಿ ಲಡ್ಡು ಪಾವಿತ್ರ‍್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Theetrhalli–Sunil

Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ! 

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

Thug Life: ದುಬಾರಿ ಬೆಲೆಗೆ ಕಮಲ್‌ ಹಾಸನ್ ʼಥಗ್‌ ಲೈಫ್‌ʼ ಓಟಿಟಿ ರೈಟ್ಸ್ ಸೇಲ್

yatnal

BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

1-darshan

Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.