ಹೊಸ ವಲಸೆ ವಿರೋಧಿ ನೀತಿ ಶೀಘ್ರ
Team Udayavani, Feb 12, 2017, 3:45 AM IST
ವಾಷಿಂಗ್ಟನ್: ವಲಸೆ ವಿರೋಧಿ ನೀತಿಗೆ ಕೋರ್ಟ್ ತಡೆಯಾಜ್ಞೆ ವಿಧಿಸಿರುವ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ್ಯಾಯ ಮಾರ್ಗಕ್ಕೆ ಮೊರೆ ಹೋಗಿದ್ದಾರೆ. ಮುಂದಿನ ವಾರದಲ್ಲಿಯೇ ಅವರು ನೂತನ ವಲಸೆ ವಿರೋಧಿ ನೀತಿ ಜಾರಲು ಮುಂದಾಗಿದ್ದಾರೆ!
ಈ ಬಗ್ಗೆ ಸ್ವತಃ ಹೇಳಿಕೊಂಡಿರುವ ಟ್ರಂಪ್, “ಕಾನೂನು ಜೊತೆಗಿನ ಸಮರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಸಾಕಷ್ಟು ಆಯ್ಕೆಗಳು ನಮ್ಮ ಮುಂದಿವೆ. ಹೊಸ ನೀತಿಯನ್ನು ಮುಂದಿನ ವಾರವೇ ಜಾರಿಗೊಳಿಸುತ್ತಿದ್ದೇವೆ. ಅಮೆರಿಕ ರಕ್ಷಣೆಗಾಗಿ ನಾವು ವೇಗದ ಕಾರ್ಯತಂತ್ರ ರೂಪಿಸಲೇಬೇಕಾಗಿದೆ’ ಎಂದು ಹೇಳಿದ್ದಾರೆ. “9ನೇ ಸಕೀìಟ್ ಕೋರ್ಟ್ ತಡೆಯಾಜ್ಞೆ ಕುರಿತು ಮಂಗಳವಾರ ಏನು ತೀರ್ಪು ನೀಡುತ್ತದೋ ನೋಡಿಕೊಂಡು ಮುಂದಡಿ ಇಡುತ್ತೇವೆ’ ಎಂದು ಹೇಳಿದ್ದಾರೆ.
ಯುಕೆ ಸಂಸತ್ ಹಿಂಜರಿಕೆ: ನ್ಯಾಯಾಂಗವನ್ನು ಎದುರು ಹಾಕಿಕೊಂಡಿರುವ ಟ್ರಂಪ್ ಅವರನ್ನು ಸಂಸತ್ತಿನಲ್ಲಿ ಸ್ವಾಗತಿಸದೇ ಇರಲು ಹಲವು ಯುಕೆ ಸಂಸದರು ನಿರ್ಧರಿಸಿದ್ದಾರೆ. ಹೌಸ್ ಆಫ್ ಕಾಮನ್‌ನ ಸ್ಪೀಕರ್ ಜಾನ್ ಬಿಕ್ರೋ ಈ ಕುರಿತು ಪ್ರತಿಕ್ರಿಯಿಸಿದ್ದು, “ಟ್ರಂಪ್ ಆದೇಶಿಸಿರುವ ವಲಸೆ ನೀತಿ ಖಂಡಿಸಿ ಬ್ರಿಟನ್ನಿನಲ್ಲಿ 18 ಲಕ್ಷ ಮಂದಿ ಸಹಿ ಹಾಕಿದ್ದಾರೆ. ಯುಕೆ ಸಂಸತ್ತಿನಲ್ಲಿ ಟ್ರಂಪ್ ಅವರನ್ನು ಸ್ವಾಗತಿಸದೇ ಇರಲು 110 ಸಂಸದರು ನಿರ್ಧರಿಸಿದ್ದಾರೆೆ’ ಎಂದು ಹೇಳಿದ್ದಾರೆ. ಸೆಪ್ಟೆಂಬರ್- ಅಕ್ಟೋಬರ್ ನಡುವೆ ಟ್ರಂಪ್ ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದಾರೆ.
ಕೆನಡಾಕ್ಕೆ ಸ್ವಾಗತ: ಅಮೆರಿಕದ ಈ ನೀತಿ ಈಗ ಕೆನಡಾಕ್ಕೆ ಪ್ಲಸ್ ಆಗಿದೆ. ವಾಂಕೋವರ್ ಮೇಯರ್ ಗ್ರೆಗೋರ್ ರಾಬರ್ಟ್‌ಸನ್, “ಸ್ಯಾನ್‌ಫ್ರಾನ್ಸಿಸ್ಕೋದಿಂದ ವಾಂಕೋವರ್‌ಗೆ ವಿಮಾನದಲ್ಲಿ ಒಂದೂವರೆ ತಾಸು ಪ್ರಯಾಣ. ಕೆಲಸ ಕಳೆದುಕೊಳ್ಳುವ ಪ್ರತಿಭಾವಂತರನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.