ಭಾರತಕ್ಕೆ ಮತ್ತೆ ಕಾಲಿಡಲಿದೆಯೇ ಅಂಬಾಸಿಡರ್‌ ಕಾರು?


Team Udayavani, Feb 12, 2017, 3:45 AM IST

11-PTI-14.jpg

ಕೋಲ್ಕತಾ: ದೇಶದ ಜನಸಾಮಾನ್ಯ ರಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರನ್ನೂ ಹೊತ್ತು ಸಾಗಿ, ಭಾರತದ ರಸ್ತೆಯ ರಾಜ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಖ್ಯಾತ ಕಾರು “ಅಂಬಾಸಿಡರ್‌’ ಮತ್ತೂಮ್ಮೆ ಭಾರತದಲ್ಲಿ ಮೈದಳೆಯಲಿದೆಯೇ?

ಫ್ರಾನ್ಸ್‌ನ ಕಾರು ಉತ್ಪಾದನಾ ಸಂಸ್ಥೆ ಪ್ಯೂಗಟ್‌ ಅಂಬಾಸಿಡರ್‌ ಕಾರು ಬ್ರ್ಯಾಂಡ್‌ ಅನ್ನು ಖರೀದಿ ಸಿದ್ದು, ಇಂಥದ್ದೊಂದು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಪ್ಯೂಗಟ್‌ ಕಂಪೆನಿಯು ಭಾರತದ ಕಾರು ಮಾರುಕಟ್ಟೆಗೆ ಪ್ರವೇಶಿಸಲು ಯತ್ನಿಸು ತ್ತಿದ್ದು, ಅಂಬಾಸಿಡರ್‌ ಬ್ರ್ಯಾಂಡ್‌ನ‌ಲ್ಲೇ ಹೊಸ ಶ್ರೇಣಿಯ ಕಾರುಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದಕ್ಕಾಗಿಯೇ ತಮಿಳುನಾಡಿನಲ್ಲಿ ಕಾರು ಉತ್ಪಾದನಾ ಘಟಕ ಶುರು ಮಾಡಲಿದ್ದು, 700 ಕೋಟಿ ರೂ. ವೆಚ್ಚ  ಮಾಡಲಿದೆ.

80 ಕೋಟಿ ರೂ.ಗೆ ಅಂಬಾಸಿಡರ್‌ ಕಾರು ಬ್ರ್ಯಾಂಡ್‌ ಅನ್ನು ಪ್ಯೂಗಟ್‌ಗೆ ನೀಡಲು ಸಿ.ಕೆ. ಬಿರ್ಲಾ ಗ್ರೂಪ್‌ ಮಾಲಕತ್ವದ ಹಿಂದೂಸ್ಥಾನ್‌ ಮೋಟರ್ಸ್‌ ಒಪ್ಪಂದ ಮಾಡಿಕೊಂಡಿದೆ. 3 ವರ್ಷಗಳ ಹಿಂದಷ್ಟೇ ಭಾರತದಲ್ಲಿ ಅಂಬಾಸಿಡರ್‌ ಕಾರಿನ ತಯಾರಿಕೆ ಸ್ಥಗಿತಗೊಂಡಿತ್ತು.

“ಟ್ರೇಡ್‌ ಮಾರ್ಕ್‌ ಸಹಿತ ಅಂಬಾಸಿಡರ್‌ ಬ್ರ್ಯಾಂಡ್‌ನ‌ ಮಾರಾಟ ಕುರಿತು ಪ್ಯೂಗಟ್‌ ಎಸ್‌.ಎ. ಗ್ರೂಪ್‌ನೊಂದಿಗೆ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಉದ್ಯೋಗಿಗಳು ಹಾಗೂ ಸಾಲಗಾರರ ಬಾಕಿಯನ್ನು ತೀರಿಸಲು ನಾವು ಈ ಮೊತ್ತವನ್ನು ಬಳಸಿಕೊಳ್ಳಲಿದ್ದೇವೆ’ ಎಂದು ಸಿ.ಕೆ. ಬಿರ್ಲಾ ಗ್ರೂಪ್‌ ವಕ್ತಾರರು ತಿಳಿಸಿದ್ದಾರೆ.

ಹೇಗಿತ್ತು ಅಂಬಾಸಿಡರ್‌ ಹವಾ?: 70 ವರ್ಷಗಳ ಹಿಂದೆ ಹಿಂದೂಸ್ಥಾನ್‌ ಮೋಟರ್ಸ್‌ ಕಂಪೆನಿಯು ಮೋರಿಸ್‌ ಆಕ್ಸ್‌ಫ‌ರ್ಡ್‌ ಸೀರೀಸ್‌ 2 (ಲ್ಯಾಂಡ್‌ಮಾಸ್ಟರ್‌) ಅನ್ನು ಸಣ್ಣಪುಟ್ಟ ಬದಲಾವಣೆಯೊಂದಿಗೆ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿ ಅಂಬಾಸಿಡರ್‌ ಬ್ರ್ಯಾಂಡ್‌ ಅನ್ನು ಪರಿಚಯಿಸಿತು. ಅನಂತರ ಅದು ಶರವೇಗದಲ್ಲಿ ರಾಷ್ಟ್ರೀಯ ಐಕಾನ್‌ ಆಗಿ ಬದಲಾಯಿತು. ವರದಿ ಪ್ರಕಾರ, ತಯಾರಾದ ಒಟ್ಟು ಅಂಬಾಸಿಡರ್‌ ಕಾರುಗಳ ಪೈಕಿ ಶೇ.16ರಷ್ಟನ್ನು ಭಾರತ ಸರಕಾರವೇ ಖರೀದಿಸಿತ್ತು. ಒಂದು ಕಾಲದಲ್ಲಿ  ಇದು ರಾಜಕಾರಣಿಗಳು ಹಾಗೂ ಅಧಿಕಾರಿಗಳ ನೆಚ್ಚಿನ ಬ್ರ್ಯಾಂಡ್‌ ಆಗಿಬಿಟ್ಟಿತ್ತು. 

80ರ ದಶಕದವರೆಗೂ ಅಂದರೆ, ಮಾರುತಿ 800 ಪರಿಚಯವಾಗುವವರೆಗೂ ಭಾರತದ ಮೂಲೆ ಮೂಲೆಗಳ ರಸ್ತೆಗಳಲ್ಲೂ ಇದು ತನ್ನ ಹವಾ ಹಬ್ಬಿಸಿತ್ತು. 1980ರ ವೇಳೆ ವರ್ಷಕ್ಕೆ 24 ಸಾವಿರ ಕಾರುಗಳು ತಯಾರಾಗುತ್ತಿದ್ದರೆ, ಅನಂತರದ ವರ್ಷಗಳಲ್ಲಿ ಇದು ಇಳಿಕೆಯಾಗುತ್ತಾ ಸಾಗಿ, ಕೊನೇ ಹಂತದಲ್ಲಿ ಈ ಸಂಖ್ಯೆ 5ಕ್ಕಿಳಿಯಿತು. 2015ರಲ್ಲಿ ಅಂಬಾಸಿಡರ್‌ ಉತ್ಪಾದನೆ ಸ್ಥಗಿತಗೊಳಿಸುವುದಾಗಿ ಹಿಂದೂಸ್ಥಾನ್‌ ಮೋಟಾರ್ಸ್‌ ಘೋಷಿಸಿತ್ತು. ಅಲ್ಲಿಯವರೆಗೆ ಭಾರತದ ರಸ್ತೆಯನ್ನು ಆಳಿದ್ದ ಅಂಬಾಸಿಡರ್‌ ಏಕಾಏಕಿ ಅಸ್ತಂಗತವಾಯಿತು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Surjewala

Pegasus spyware ಬಗ್ಗೆ ಸುಪ್ರೀಂಕೋರ್ಟ್‌ ತನಿಖೆ ನಡೆಸಲಿ: ಸುರ್ಜೇವಾಲಾ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.