ತಲಪಾಡಿಯಲ್ಲಿ ನೀಡಿದ ರಿಯಾಯಿತಿ ಉಡುಪಿ ಜಿಲ್ಲೆಗೂ ಕೊಡಿ: ಪ್ರಮೋದ್
Team Udayavani, Feb 13, 2017, 3:45 AM IST
ಉಡುಪಿ: ತಲಪಾಡಿಯಲ್ಲಿ ವಾಹನಗಳು, ಜನರಿಗೆ ನೀಡಿದ ರಿಯಾಯಿತಿಗಳನ್ನು ಹೆಜಮಾಡಿ ಮತ್ತು ಗುಂಡ್ಮಿ ಟೋಲ್‌ಗೇಟ್‌ಗಳಲ್ಲಿಯೂ ಕೊಡಲು ನವಯುಗ ಕನ್‌ಸ್ಟ್ರಕ್ಷನ್ಸ್ ಕಂಪೆನಿಗೆ ಸೂಚಿಸುವಂತೆ ಜಿಲ್ಲಾಧಿಕಾರಿ ಮತ್ತು ಎಸ್ಪಿಯವರಿಗೆ ಸಚಿವ ಪ್ರಮೋದ್ ಮಧ್ವರಾಜ್ ಸೂಚಿಸಿದ್ದಾರೆ. ತಲಪಾಡಿಯಲ್ಲಿಯೂ ನವಯುಗ ಕಂಪೆನಿಯವರೇ ಟೋಲ್ ಸಂಗ್ರಹ ಮಾಡುತ್ತಿರುವುದು. ಹೀಗಾಗಿ ಉಡುಪಿ ಜಿಲ್ಲೆಗೂ ಈ ರಿಯಾಯಿತಿಗಳನ್ನು ವಿಸ್ತರಿಸಬೇಕೆಂದು ಸಚಿವರು ತಿಳಿಸಿದ್ದಾರೆ.
ಜಿಲ್ಲಾಡಳಿತವೇ ಜವಾಬ್ದಾರಿ: ಕೋಟ
ಟೋಲ್ ಸಂಗ್ರಹ ವಿವಾದ ದಿನದಿಂದ ದಿನಕ್ಕೆ ಗೊಂದಲದ ಗೂಡಾಗುತ್ತಿರಲು ಜಿಲ್ಲಾಧಿಕಾರಿಯ ಆತುರದ ನಿರ್ಧಾರವೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ನಿಷೇಧಾಜ್ಞೆ ಜಾರಿ ಮಾಡುವ ಆವಶ್ಯಕತೆ ಏನಿತ್ತು? ಉಸ್ತುವಾರಿ ಸಚಿವರು ವರದಿ ನೀಡುವಂತೆ ಸೂಚನೆ ನೀಡಿದ್ದರೂ ವರದಿ ಸತ್ಯಾಸತ್ಯತೆ ಪರಿಶೀಲಿಸದೆ ಟೋಲ್ ಸಂಗ್ರಹಕ್ಕೆ ಮುಂದಾದುದೇಕೆ? ಪಿಡಬ್ಲೂ éಡಿ ಸಚಿವ ಮಹಾದೇವಪ್ಪ ಅವರು ಫೆ. 13ರಂದು ಬೆಂಗಳೂರಿನಲ್ಲಿ ಸಭೆ ಕರೆದು ನಿರ್ಣಯ ಕೈಗೊಳ್ಳುವ ಮುನ್ನ ಜಿಲ್ಲಾಧಿಕಾರಿಗಳು ಏಕೆ ಆದೇಶ ನೀಡಿದ್ದಾರೆ? ಶಾಂತಿ ಕದಡಿದರೆ ಜಿಲ್ಲಾಡಳಿತವೇ ಜವಾಬ್ದಾರಿ ಎಂದು ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.