ಏಕಕಾಲದಲ್ಲಿ 104 ಉಪಗ್ರಹಗಳ ಉಡಾವಣೆ; ನನಸಾಗಲಿ ಇಸ್ರೋ ಕನಸು
Team Udayavani, Feb 13, 2017, 3:45 AM IST
ಈವರೆಗೆ ವಿಶ್ವದ ಯಾವೊಂದೂ ದೇಶವೂ ಏಕಕಾಲದಲ್ಲಿ 100 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ನಿದರ್ಶನ ಇಲ್ಲ. ಸದ್ಯ ಏಕಕಾಲದಲ್ಲಿ ಗರಿಷ್ಠ ಸಂಖ್ಯೆಯ ಉಪಗ್ರಹಗಳನ್ನು ಹಾರಿಸಿದ ವಿಶ್ವದಾಖಲೆ ರಷ್ಯದ ಹೆಸರಿನಲ್ಲಿದ್ದು, 2014ರ ಜೂನ್‌ನಲ್ಲಿ ರಷ್ಯ ಸುಧಾರಿತ ಕ್ಷಿಪಣಿ ಬಳಸಿ 37 ಉಪಗ್ರಹಗಳನ್ನು ಉಡಾಯಿಸಿದ್ದೇ ಈವರೆಗಿನ ದಾಖಲೆ. ಅಮೆರಿಕದ ನಾಸಾ 29 ಉಪಗ್ರಹಗಳನ್ನು ಏಕಕಾಲದಲ್ಲಿ ನಭಕ್ಕೆ ಕಳುಹಿಸಿದುದು ಎರಡನೇ ದಾಖಲೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆಯ ಮೆಟ್ಟಿಲುಗಳನ್ನು ಹಂತಹಂತವಾಗಿ ಏರುವ ಮೂಲಕ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿರುವ ಭಾರತ ಇದೀಗ ಇನ್ನೊಂದು ಮಹತ್ಸಾಧನೆಗೆ ಸಜ್ಜಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಫೆ. 15ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಉಡಾವಣಾ ವಾಹಕ ಪಿಎಸ್‌ಎಲ್‌ವಿ-ಸಿ37 ಏಕಕಾಲದಲ್ಲಿ ಭಾರತದ ಮೂರು ಸಹಿತ ವಿವಿಧ ದೇಶಗಳ 104 ಉಪಗ್ರಹಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ನೆಗೆದೇರಲಿದೆ. ಈ ಮೂಲಕ ಭಾರತ ವಿಶ್ವ ದಾಖಲೆ ನಿರ್ಮಾಣಕ್ಕೆ ಮುಂದಾಗಿದ್ದು ಇಸ್ರೋದ ಈ ಅಮೋಘ ಪ್ರಯತ್ನಕ್ಕೆ ಇದೀಗ ದಿನಗಣನೆ ಆರಂಭಗೊಂಡಿದೆ.
ಈವರೆಗೆ ವಿಶ್ವದ ಯಾವೊಂದೂ ದೇಶವೂ ಏಕಕಾಲದಲ್ಲಿ 100 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ನಿದರ್ಶನ ಇಲ್ಲ. ಸದ್ಯ ಏಕಕಾಲದಲ್ಲಿ ಗರಿಷ್ಠ ಸಂಖ್ಯೆಯ ಉಪಗ್ರಹಗಳನ್ನು ಹಾರಿಸಿದ ವಿಶ್ವದಾಖಲೆ ರಷ್ಯದ ಹೆಸರಿನಲ್ಲಿದ್ದು, 2014ರ ಜೂನ್‌ನಲ್ಲಿ ರಷ್ಯ ಸುಧಾರಿತ ಕ್ಷಿಪಣಿ ಬಳಸಿ 37 ಉಪಗ್ರಹಗಳನ್ನು ಉಡಾಯಿಸಿದ್ದೇ ಈವರೆಗಿನ ದಾಖಲೆ. ಅಮೆರಿಕದ ನಾಸಾ 29 ಉಪಗ್ರಹಗಳನ್ನು ಏಕಕಾಲದಲ್ಲಿ ನಭಕ್ಕೆ ಕಳುಹಿಸಿದುದು ಎರಡನೇ ದಾಖಲೆ. ಕಳೆದ ವರ್ಷ ಜೂನ್‌ನಲ್ಲಿ ಇಸ್ರೋ ಪಿಎಸ್‌ಎಲ್‌ವಿ ಮೂಲಕ ಏಕಕಾಲದಲ್ಲಿ 20 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿತ್ತು. ಇದೀಗ ಭಾರತ ವಿಶ್ವದಲ್ಲಿಯೇ ಮೊದಲ ಬಾರಿಗೆ 100ಕ್ಕೂ ಅಧಿಕ ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾಯಿಸುವ ಸಾಹಸಕ್ಕೆ ಕೈಹಾಕಿದ್ದು, ಇದು ಯಶಸ್ವಿಯಾದಲ್ಲಿ ಭಾರತದ ತ್ರಿವರ್ಣ ಧ್ವಜ ಮತ್ತೂಮ್ಮೆ ಬಾಹ್ಯಾಕಾಶದಲ್ಲಿ ಹಾರಾಡಲಿದೆ.
ಫೆ. 15ರಂದು ಒಟ್ಟು 1378 ಕೆ.ಜಿ. ತೂಕವಿರುವ 104 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗುತ್ತಿದೆ. ಈ ಉಪಗ್ರಹಗಳ ಪೈಕಿ ಭಾರತದ ಮೂರು, ಅಮೆರಿಕದ 96 ಮತ್ತು ಇಸ್ರೇಲ್, ಕಜಾಕಿಸ್ಥಾನ್, ನೆದರ್‌ಲ್ಯಾಂಡ್ಸ್, ಸ್ವಿಟ್ಜರ್‌ಲ್ಯಾಂಡ್ ಮತ್ತು ಸಂಯುಕ್ತ ಅರಬ್ ಸಂಸ್ಥಾನದ ತಲಾ ಒಂದೊಂದು ಉಪಗ್ರಹಗಳು ಸೇರಿವೆ. ಕಾಟೋìಸ್ಯಾಟ್-2 ಸರಣಿಯಡಿ 714 ಕೆ.ಜಿ. ತೂಕದ ಒಂದು ಉಪಗ್ರಹ ಮತ್ತು ಎರಡು ನ್ಯಾನೋ ಉಪಗ್ರಹಗಳಾದ ತಲಾ 15 ಕೆ.ಜಿ. ತೂಕದ ಐಎನ್‌ಎಸ್-1ಎ ಮತ್ತು ಐಎನ್‌ಎಸ್ 1ಬಿಯನ್ನು ಭಾರತ ಈ ಮೆಗಾ ಉಡಾವಣೆಯಲ್ಲಿ ಬಾಹ್ಯಾಕಾಶಕ್ಕೆ ರವಾನಿಸಲಿದೆ. ಕಳೆದ ವರ್ಷದ ಅಂತ್ಯದ ವರೆಗೆ ಇಸ್ರೋ ಪಿಎಸ್‌ಎಲ್‌ವಿ ಉಡಾವಣಾ ವಾಹಕ ಬಳಸಿ 39 ಉಡ್ಡಯನಗಳನ್ನು ನಡೆಸಿದೆ. ಈ ಪೈಕಿ 37 ನಿಗದಿಯಂತೆ ಕಕ್ಷೆ ತಲುಪುವಲ್ಲಿ ಯಶಸ್ವಿಯಾಗಿದೆ, ಒಂದು ಸಂಪೂರ್ಣ ವಿಫಲವಾಗಿ ಇನ್ನೊಂದು ಭಾಗಶಃ ಯಶಸ್ಸನ್ನು ಕಾಣುವ ಮೂಲಕ ಈ ಉಡಾವಣಾ ವಾಹಕ ಶೇ. 95ರಷ್ಟು ಯಶಸ್ಸು ಕಂಡಿತ್ತು. ಇವಲ್ಲದೆ ಚಂದ್ರಯಾನ-1, ಮಂಗಳಯಾನ ಮತ್ತು ಆಸ್ಟ್ರೋಸ್ಯಾಟ್‌ನ ಉಡಾವಣೆಯಲ್ಲಿಯೂ ಪಿಎಸ್‌ಎಲ್‌ವಿಯನ್ನು ಇಸ್ರೋ ಯಶಸ್ವಿಯಾಗಿ ಬಳಸಿಕೊಂಡಿತ್ತು. ಇದೀಗ ಬುಧವಾರ ನಡೆಯಲಿರುವ ಮೆಗಾ ಉಡಾವಣೆ ಪಿಎಸ್‌ಎಲ್‌ವಿಯ 39ನೇ ಉಡ್ಡಯನ. ಈ ಉಡ್ಡಯನದ 48 ತಾಸುಗಳ ಕ್ಷಣಗಣನೆ ಸೋಮವಾರ ಆರಂಭಗೊಳ್ಳಲಿದೆ.
ಈ ಮಹತ್ಸಾಧನೆಯ ಜತೆಯಲ್ಲಿ ಭಾರತ ಇದೇ ಮೊದಲ ಬಾರಿಗೆ ಶುಕ್ರ ಗ್ರಹಕ್ಕೆ ಬಾಹ್ಯಾಕಾಶ ನೌಕೆ ಕಳುಹಿಸಿಕೊಡಲು ಸಜ್ಜಾಗಿದೆ. ಇದರ ಜತೆಯಲ್ಲಿ ಮಂಗಳಯಾನ-2 ಯೋಜನೆಯನ್ನೂ ಕೈಗೆತ್ತಿಕೊಳ್ಳಲು ಮುಂದಾಗಿದೆ. ಗುರು ಗ್ರಹದತ್ತಲೂ ದೃಷ್ಟಿ ನೆಟ್ಟಿರುವ ಇಸ್ರೋ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ-ಎಲ್ 1 ಉಪಗ್ರಹದ ಉಡಾವಣೆಗೆ ಚಿಂತನೆ ನಡೆಸಿದೆ. ಬುಧವಾರ ನಡೆಯಲಿರುವ ಇಸ್ರೋದ ಈ ಐತಿಹಾಸಿಕ ಪ್ರಯತ್ನ ಸಫಲವಾಗಿ ಭಾರತ ವಿಶ್ವದಾಖಲೆಗೆ ಭಾಜನವಾಗಲಿ ಎಂಬ ಆಶಯದ ಜತೆಯಲ್ಲಿ ಇಸ್ರೋದ ಮುಂದಿನ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಈ ಯಶಸ್ವಿ ಸಾಧನೆ ನಾಂದಿ ಹಾಡಲಿ ಮತ್ತು ಈ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿನ ಪಾರಮ್ಯವನ್ನು ಮತ್ತಷ್ಟು ಎತ್ತರಕ್ಕೇರಿಸಿಕೊಳ್ಳಲಿ ಎಂಬುದು ದೇಶದ ಜನತೆಯ ಹಾರೈಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.