ಜಾತೀಯತೆಗೆ ಮದ್ದು ನೀಡಿದ್ದು ವಚನ ಸಾಹಿತ್ಯ


Team Udayavani, Feb 13, 2017, 1:20 PM IST

dvg7.jpg

ಹರಪನಹಳ್ಳಿ: ಶತಶತಮಾನಗಳಿಂದ ಮನಸ್ಸಿಗೆ ಅಂಟಿದ ಜಾತೀಯತೆ ಎಂಬ ಮೌಡ್ಯಕ್ಕೆ ಮದ್ದು ನೀಡಿದ ವಚನ ಸಾಹಿತ್ಯ ಸಾರ್ವಕಾಲಕ್ಕೂ ಶ್ರೇಷ್ಠವಾದ ಸಾಹಿತ್ಯವಾಗಿದೆ ಎಂದು ಉಪನ್ಯಾಸಕ, ಸಾಹಿತಿ ಪೂಜಾರ್‌ ದುರುಗೇಶ್‌ ಹೇಳಿದರು. 

ತಾಲೂಕಿನ ಗೊವೇರಹಳ್ಳಿ ಗ್ರಾಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ವಿಭಾಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶ್ವವಿದ್ಯಾಲಯ ಮಟ್ಟದ 2ನೇ ಅಂತರ್‌ ಕಾಲೇಜು ಶಿಬಿರದಲ್ಲಿ ವಚನದಲ್ಲಿ ವೈಚಾರಿಕತೆ ಕುರಿತು ಅವರು ಉಪನ್ಯಾಸ ನೀಡಿದರು. 

ಭಾರತೀಯ ಸಂಸ್ಕೃತಿ ಜೀವಂತವಾಗಿರುವುದು ಹಳ್ಳಿಗಳಲ್ಲಿ. ಬಹುಮುಖ ಸಂಸ್ಕೃತಿಯಲ್ಲಿ ಏಕತೆ ಹೊಂದಿರುವ ನಾಡಿನಲ್ಲಿ ಹಿಂದಿಗಿಂತಲೂ ಈಚೇಗೆ ಜಾತೀಯತೆ ಹೆಚ್ಚು ಪ್ರಖರವಾಗುತ್ತಿದೆ. ಅಧುನಿಕ ಯುಗದಲ್ಲಿಯೂ ಜಾತಿ ಪದ್ಧತಿ ವಿವಿಧ ಆಯಾಮಗಳಲ್ಲಿ ವಿನೂತನ ರೂಪ ಪಡೆದುಕೊಂಡು ಜೀವಂತಿಕೆ ಪಡೆದಿರುವುದು ವಿಷಾದನೀಯ ಎಂದರು. 

ಮನುಷ್ಯನನ್ನು ಜಾತಿಯಿಂದ ಗುರುತಿಸಲ್ಪಡುವ ರಾಷ್ಟ್ರವೆಂದರೆ ಆದು ಭಾರತ ದೇಶ ಮಾತ್ರ. ಜಾತಿಯಿಂದ ಗುರುತಿಸುವ ಬದಲಾಗಿ ನೀತಿಯಿಂದ ಮನುಷ್ಯನನ್ನು ಗುರುತಿಸಬೇಕಾಗುತ್ತದೆ. ಜಾತಿ ವಿನಾಶಕ್ಕಾಗಿ ಶ್ರಮಿಸಿದ ಚಿಂತಕರನ್ನು ಇಂದು ಜಾತಿಯ ಸಂಕೋಲೆಯಲ್ಲಿ ಬಂಧಿಸಲ್ಪಟ್ಟಿರುವುದು ದುರಂತದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ಬುದ್ಧ, ಬಸವ, ಅಂಬೇಡ್ಕರ್‌ ಅಂತಹ ದಾರ್ಶನಿಕರು ಆದರ್ಶವಾಗಬೇಕಿದೆ. ಪ್ರಗತಿಪರ ಚಿಂತನೆಗಳು ಮಕ್ಕಳಲ್ಲಿ ಬೆಳೆಯಬೇಕಾಗಿದೆ. ಮಕ್ಕಳಿಗೆ ಅಂಕ ಆಧಾರಿತ ಶಿಕ್ಷಣದ ಬದಲಾಗಿ ಜೀವನ ಪಾಠ ಕಲಿಸುವಂತಹ ಶಿಕ್ಷಣ ದೊರೆಯಬೇಕು. ಬುದ್ದ, ಬಸವ, ಅಂಬೇಡ್ಕರ್‌ ಅಂತಹ ಅನೇಕ ದಾರ್ಶನಿಕರು ಜಾತಿ ವಿನಾಶಕ್ಕಾಗಿ ತಮ್ಮ ಜೀವನುದ್ದಕ್ಕೂ ಹೋರಾಟ ನಡೆಸಿದ್ದಾರೆ.

ಇಂತವರ ಆದರ್ಶಗಳನ್ನು ಮಕ್ಕಳು ಮೈಗೂಡಿಸಿಕೊಂಡು ಸಮಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆಯಬೇಕು ಎಂದರು. ಪ್ರಗತಿಪರ ಸಂಘಟನೆ ಮುಖಂಡ ಎನ್‌.ಸಿ. ಈಶ್ವರನಾಯ್ಕ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಗೆದ್ದವರು ಬರೆದ ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದಾರೆ. ನಾವುಗಳು ಸೋತವರ ಇತಿಹಾಸ ಅಧ್ಯಯನ ಮಾಡಿದಾಗ ಮಾತ್ರ ವಾಸ್ತವ ಸ್ಥಿತಿ ತಿಳಿದುಕೊಳ್ಳಬಹುದು.

ಸಾವಿತ್ರಿ ಬಾಫುಲೆ, ಜ್ಯೋತಿ ಬಾಫುಲೆ, ಸಾಹು ಮಹಾರಾಜ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌ ಇಂತಹ ಅನೇಕರು ದೇಶದ ಶೋಷಿತ ಸಮುದಾಯಗಳ ಪರ ತಮ್ಮ ಜೀವನವನ್ನೆ ಮುಡಿಪಾಗಿಟ್ಟು ಹೋರಾಡಿದವರಿಗೆ ಇಂದಿನ ಪುಸ್ತಕಗಳಲ್ಲಿ ಜಾಗವಿಲ್ಲ. ಹಿಂದಿನ ಪುರಾಣ ಕಥೆಗಳ ಬದಲಾಗಿ ಸಮಾಜ ಸುಧಾರಕರ ಇತಿಹಾಸ ಪರಿಚಯಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಗ್ರಾಪಂ ಅಧ್ಯಕ್ಷೆ ಪುಷ್ಪಾ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. 

ಟಿ. ಜಗದೀಶ್‌, ಎಂ. ಹುಚ್ಚಪ್ಪ, ಬಸವರಾಜಪ್ಪ, ರೇಣುಕಮ್ಮ, ಚಂದ್ರಪ್ಪ, ಎಚ್‌. ದುರುಗಪ್ಪ, ಪ್ರಾಚಾರ್ಯ ನಾಗರಾಜ ಸಣ್ಣಕ್ಕಿ, ಪ್ರಾಧ್ಯಾಪಕರಾದ ಎಂ. ವಿಜಯಕುಮಾರ್‌, ಎಚ್‌. ಕೊಟ್ರೇಶ್‌, ಎಂ. ಮಂಜುನಾಥ್‌, ಎನ್ನೆಸ್ಸೆಸ್‌ ಅಧಿಧಿಕಾರಿ ಎಂ. ಭೀಮಪ್ಪ, ಡಿ.ಟಿ. ರಜತಗಿರಿ, ಸತೀಶ್‌, ಎಚ್‌.ಎಸ್‌. ವೆಂಕಟೇಶ್‌, ಎ.ಡಿ. ಬಸವರಾಜ್‌, ಗಿರೀಶ್‌ ಮತ್ತಿತರರು ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

sringeri-new

Sringeri: ಇಂದು ಸುವರ್ಣ ಭಾರತೀ ಮಹೋತ್ಸವ “ಸ್ತೋತ್ರ ತ್ರಿವೇಣಿ ಮಹಾಸಮರ್ಪಣೆ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

davanage

ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ

1-davn

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.