ನಿರಂತರ ಓದಿನಿಂದ ವ್ಯಕ್ತಿತ್ವ ವಿಕಾಸ
Team Udayavani, Feb 13, 2017, 2:38 PM IST
ಧಾರವಾಡ: ವಿಭಿನ್ನ ಕ್ಷೇತ್ರಗಳ ಪುಸ್ತಕಗಳನ್ನು ಇಷ್ಟಪಟ್ಟು ಓದು ಹಾಗೂ ಆ ನಿರಂತರ ಓದಿನಿಂದ ವ್ಯಕ್ತಿತ್ವ ವಿಕಾಸ ಸಾಧ್ಯವಾಗುತ್ತದೆ ಎಂದು ಶಿವಮೊಗ್ಗೆಯ ಕಿಶೋರ ಸಾಹಿತಿ, ಅಂಕಣಕಾರರಾದ 7ನೆಯ ತರಗತಿಯ ವಿದ್ಯಾರ್ಥಿ ಅಂತಃಕರಣ ಹೇಳಿದರು.
ಸಮೀಪದ ಬೆಳ್ಳಿಗಟ್ಟಿ ಗ್ರಾಮದಲ್ಲಿ ಬೆಲ್ಲದ ಶಿಕ್ಷಣ ಮತ್ತು ಕೃಷಿ ಅಭಿವೃದ್ಧಿ ಪ್ರತಿಷ್ಠಾನ ರವಿವಾರ ಹಮ್ಮಿಕೊಂಡಿದ್ದ ಹಳ್ಳಿಗಾಡಿನ ಸರಕಾರಿ ಶಾಲಾ ಮಕ್ಕಳ ವಿಕಾಸ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಜ್ಜಿ, ಅಪ್ಪ, ಅಮ್ಮ, ದೊಡ್ಡಮ್ಮ ಸೇರಿ ಎಲ್ಲರೂ ನೀಡಿದ ಮುಕ್ತವಾದ ಪ್ರೀತಿಯ ಮಾರ್ಗದರ್ಶನ ನನ್ನೊಳಗೆ ಒಂದು ವಿಶಿಷ್ಟ ಆಸಕ್ತಿಯ ಬರವಣಿಗೆಯನ್ನು ರೂಢಿಸಿತು.
ಯು.ಕೆ.ಜಿ. ಇದ್ದಾಗಲೇ ಸಣ್ಣ ಕತೆ ಬರೆಯಲು ಶುರುವಿಟ್ಟುಕೊಂಡಿರುವ ನನ್ನಿಂದ ಈ ತನಕ 11 ಕೃತಿಗಳು ಓದುಗರ ಕೈಸೇರಿವೆ ಎಂದರು. ಪ್ರತಿಯೊಬ್ಬರೂ ಒಂದೊಂದು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ನನಗೆ ಕ್ರಿಕೆಟ್ ಅಂದರೆ ಬಹಳ ಇಷ್ಟ. ಕ್ರಿಕೆಟ್ ಕುರಿತು ನನ್ನ ಬಳಿ ಎಲ್ಲ ದಾಖಲೆಗಳಿವೆ.
ಆಟಗಾರನಾಗಿ ಇಲ್ಲವೇ ಕೋಚ್ ಆಗಿ ಅಥವಾ ಟಿವಿ ಕ್ರಿಕೆಟ್ ಕಾಮೆಂಟ್ರೇಟರ್ ಆಗಿ ಕಾರ್ಯನಿರ್ವಹಿಸುವ ಹಂಬಲ ಹೊಂದಿದ್ದೇನೆ ಎಂದರು. ಬೆಲ್ಲದ ಶಿಕ್ಷಣ ಮತ್ತು ಕೃಷಿ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಇಂದು ಅಖಂಡ ವಿಶ್ವ ಒಂದೇ ಮನೆಯಾಗಿದೆ. ಅದು ಎಲ್ಲರಿಗೂ ಹತ್ತಿರಗೊಂಡಿದೆ.
ದೇಶದ ಆಸ್ತಿಯಾಗಿರುವ ಮಕ್ಕಳು ಸ್ವಾವಲಂಬಿಯಾಗಿ ಸ್ವಾಭಿಮಾನದಿಂದ ಬದುಕಬೇಕಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಹಳ್ಳಿಗಾಡಿನ ಮಕ್ಕಳೂ ಸಹ ಹೊಸ ಚಿಂತನೆಗಳ ಮೂಲಕ ಬೆಳೆಯಬೇಕೆನ್ನುವ ಆಶಯ ಈ ಶಿಬಿರದ ಹಿಂದಿದೆ ಎಂದರು.
ಮಕ್ಕಳ ಸಾಹಿತಿ ಡಾ| ಆನಂದ ಪಾಟೀಲ ಮಾತನಾಡಿ, ಮಕ್ಕಳ ದಿನ ನಿತ್ಯದ ಶಾಲೆ ಕಲಿಕೆಯಾಚೆ ಇನ್ನಷ್ಟು ಅರಿವನ್ನು ವಿಸ್ತರಿಸಿಕೊಳ್ಳಲು ಈ ಬಗೆಯ ಚಟುವಟಿಕೆಯನ್ನ ಹಮ್ಮಿಕೊಳ್ಳುತ್ತಿದ್ದು, ಬೇರೆ-ಬೇರೆ ರಂಗದಲ್ಲಿನ ಪರಿಣತರು ಮಕ್ಕಳೊಡನೆ ಸಮಯ ಹಂಚಿಕೊಳ್ಳಲಿದ್ದಾರೆ.
ಇದೊಂದು ಗ್ರಾಮೀಣ ಮಕ್ಕಳಿಗೆ ಹೊಸ ಅನುಭವವಾಗಲಿದೆ. ಇದು ಕಲಿಕೆಯ ಪಾಠವಾಗದೆ, ಉಲ್ಲಾಸದ ಸಮಯವಾಗಲಿದ್ದು, ಮಕ್ಕಳಿಗೆ ಹಿರಿಯರೊಡನೆ ಹಲವಾರು ಬಗೆಯಲ್ಲಿ ಹಂಚಿಕೊಳ್ಳಲು, ಅವರಿಂದ ಸ್ಫೂಧಿರ್ತಿಗೊಳ್ಳಲು ಸಾಧ್ಯವಾಗಲಿದೆ. ಈಗಾಗಲೆ ವಿಶೇಷವಾದ ಸಾಧನೆ ಮಾಡಿದ ಮಕ್ಕಳೂ ಇಲ್ಲಿ ಸಮಯ ಹಂಚಿಕೊಳ್ಳಲಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಇದೇ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ: ಶಾಸಕ ಶಿವಗಂಗಾ
Dharwad: ಔಡಲಹಣ್ಣು ತಿಂದು ಏಳು ಮಕ್ಕಳು ಅಸ್ವಸ್ಥ: ಜಿಲ್ಲಾಸ್ಪತ್ರೆಗೆ ದಾಖಲು
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ ಹೆಚ್ಚಾಗಿದೆ: ಪ್ರಹ್ಲಾದ್ ಜೋಶಿ
Hubli: ಅಮಿತ್ ಶಾ ಅಣಕು ಶವ ಸಂಸ್ಕಾರದ ಅಸ್ಥಿ ವಿಸರ್ಜಿಸಿ ಪ್ರತಿಭಟನೆ
Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ
MUST WATCH
ಹೊಸ ಸೇರ್ಪಡೆ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.