ಹಣ ಗೋಲ್‌ಮಾಲ್‌: ಇಇ ವಿರುದ್ಧ ಎಫ್‌ಐಆರ್‌


Team Udayavani, Feb 13, 2017, 3:25 PM IST

gul5.jpg

ಕಲಬುರಗಿ: ಅಫಜಲಪುರ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಾಗಿದ್ದ ಪ್ರಸ್ತುತ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ (ಇಇ) ಮಹಾದೇವ ಸಿಂಧೆ ಸೇರಿದಂತೆ ಮೂವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ. 

ಅಫಜಲಪುರ ತಾಲೂಕಿನ ಭೈರಾಮಡಗಿ ಸೇರಿದಂತೆ ಇತರೆಡೆ ಕುಡಿಯುನ ನೀರಿನ ಕಾಮಗಾರಿ ಮಾಡದೇ ಹಣ ಗುಳುಂ ಮಾಡಿರುವ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಅವ್ಯವಹಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಜಲಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಾಗಿದೆ. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಲಬುರಗಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಅಂಬಲಗಿ, ನಕಲಿ ದಾಖಲೆ ಸೃಷ್ಟಿಸಿ ಹೆಚ್ಚುವರಿಯಾಗಿ 12.9 ಕೋಟಿ ರೂ. ಅವ್ಯಹಾರ ಎಸಗಿ ಸರ್ಕಾರಕ್ಕೆ ವಂಚಿಸಲಾಗಿದೆ ಎಂದು ದೂರು ನೀಡಿದ್ದಾರೆ. ಈಗಾಗಲೇ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಇಇ ಮಹಾದೇವ ಸಿಂಧೆ ಹಾಗೂ ಸಹಾಯಕ ಇಂಜಿನಿಯರ್‌ ಅಮರನಾಥ ಧೂಳೆ, ಕಿರಿಯ ಇಂಜಿನಿಯರ್‌ ಖಾಜಾ ನಿಜಾಮುದ್ದೀನ್‌ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ. 

ಉದಯವಾಣಿಯಲ್ಲಿ ತನಿಖಾ ವರದಿ: ಅಫಜಲಪುರ ತಾಲೂಕಿನ ಭೈರಾಮಡಗಿ ತಾಂಡಾಕ್ಕೆ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳದೇ 33.43 ಲಕ್ಷ ರೂ. ಗೋಲ್‌ ಮಾಲ್‌ ಮಾಡಲಾಗಿದೆ ಎಂಬುದಾಗಿ 2015ರ ಆಗಸ್ಟ್‌ 17ರ “ಉದಯವಾಣಿ’ಯಲ್ಲಿ ಮಾತ್ರ  ಸಮಗ್ರ ದಾಖಲೆಗಳೊಂದಿಗೆ ತನಿಖಾ ವರದಿ ಪ್ರಕಟವಾಗಿತ್ತು. ವರದಿ ಆಧಾರದ ಮೇಲೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಇಲಾಖೆ ತನಿಖೆಗೆ ಆದೇಶಿಸಿದ್ದರು. 

“ಉದಯವಾಣಿ’ ವರದಿ ಉಲ್ಲೇಖೀಸಿಯೇ ಸಿಇಒ ಅವರು ತನಿಖೆಗೆ ಆದೇಶಿಸಿದ್ದರು. ಇಲಾಖೆ ತನಿಖೆ ಕೈಗೊಂಡ ನಂತರ ಭೈರಾಮಡಗಿಯಲ್ಲದೇ ಇತರ ಒಂಭತ್ತು ಗ್ರಾಮಗಳ ಕುಡಿಯುನ ನೀರು ಪೂರೈಕೆ ಕಾಮಗಾರಿಗಳಲ್ಲೂ ಅವ್ಯವಹಾರ ಕಂಡು ಬಂತು. ಹೀಗಾಗಿ 2015ರ ಅಕ್ಟೋಬರ್‌ ತಿಂಗಳಿನಲ್ಲಿಯೇ ಸಹಾಯಕ ಇಂಜಿನೀಯರ್‌ ಅಮರನಾಥ ಧೂಳೆ, ಕಿರಿಯ ಇಂಜನೀಯರ್‌ ಖಾಜಾ ನಿಜಾಮುದ್ದೀನ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. 

ತದನಂತರ 2016ರ ಮಾರ್ಚ್‌ ತಿಂಗಳಿನಲ್ಲಿ ಮಹಾದೇವ ಸಿಂಧೆ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಅಧೀನ ಕಾರ್ಯದರ್ಶಿಗಳು ಸೇವೆಯಿಂದ ಅಮಾನತುಗೊಳಿಸಿದ್ದರು. ಹೀಗಾಗಿ ಸಹಾಯಕ ಕಾರ್ಯನಿರ್ವಾಹಕ (ಎಇಇ) ಹುದ್ದೆಯಿಂದ ಕಾರ್ಯಪಾಲಕ ಅಭಿಯಂತರ (ಇಇ) ಹುದ್ದೆಗೆ ಬಡ್ತಿ ಹೊಂದುವುದಕ್ಕೆ ತಾತ್ಕಾಲಿಕ ತಡೆ ಬಿದ್ದಿತ್ತು. ಕಳೆದ ಆರು ತಿಂಗಳ ಹಿಂದೆಯಷ್ಟೇ ಸಣ್ಣ ನೀರಾವರಿ ಇಲಾಖೆಗೆ ಇಇಯಾಗಿ ಕಾರ್ಯಭಾರ ವಹಿಸಲಾಗಿದೆ. ಆದರೆ ಈಗ ಮತ್ತೆ ಅಮಾನತು ಭೀತಿ ಎದುರಾಗಿದೆ. 

ಭೈರಾಮಡಗಿ ತಾಂಡಾಕ್ಕೆ ಕುಡಿಯುವ ನೀರಿನ  ಕಾಮಗಾರಿ ಕೈಗೊಳ್ಳದೇ 3.43 ಲಕ್ಷ ರೂ. ಗುಳುಂ ಮಾಡಿದ್ದಲ್ಲದೇ ಚೌಡಾಪುರ ತಾಂಡಾ, ಹಾವನೂರ ತಾಂಡಾ, ಗುಡೂರ ತಾಂಡಾ, ಚೌಡಾಪುರ  ತಾಂಡಾ, ಶಿವನಗರ ತಾಂಡಾ, ಬಡದಾಳ ತಾಂಡಾ, ಕರ್ಜಗಿ ತಾಂಡಾ, ಶಿರವಾಳ, ರೇವೂರ, ಗಾಣಗಾಪುರ, ಗೌಡಗಾಂವ, ಹೀರಾನಾಯಕ ತಾಂಡಾ, ಪಾಲ್‌ಸಿಂಗ್‌ ತಾಂಡಾಗಳಲ್ಲಿ 16 ಕುಡಿಯುವ ನೀರು ಹಾಗೂ 10 ಕಿರು ನೀರು ಸರಬರಾಜು ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ 129.79 ಲಕ್ಷ ರೂ. ಅವ್ಯವಹಾರ ಎಸಗಲಾಗಿದೆ. ಪತ್ರಿಕಾ ತನಿಖಾ ವರದಿ ಆಧರಿಸಿ ತದನಂತರ ಇಲಾಖೆ ತನಿಖಾ ತಂಡದಿಂದ ಅವ್ಯವಹಾರ ಬಯಲಿಗೆ ಬಂದಿದೆ.   

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

v

Kalaburagi; ಸೆ.17ರಂದು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ; ದಿನಾಂಕ ಅಂತಿಮಗೊಳಿಸಿ ಅಧಿಸೂಚನೆ

Kalaburagi: ಶಿಕ್ಷಕರ ಪ್ರಶಸ್ತಿ ಆಯ್ಕೆಯಲ್ಲಿ ರಾಜಕೀಯ ಕೆಸರಾಟ… ಪಟ್ಟಿಯಲ್ಲಿ ಬದಲಾವಣೆ

Kalaburagi: ಶಿಕ್ಷಕರ ಪ್ರಶಸ್ತಿ ಆಯ್ಕೆಯಲ್ಲಿ ರಾಜಕೀಯ ಕೆಸರಾಟ… ಪಟ್ಟಿಯಲ್ಲಿ ಬದಲಾವಣೆ

8-

Chittapur: ದಂಡೋತಿ ಸೇತುವೆ; ಕಿತ್ತು ಹೋದ ರಸ್ತೆ

7-

Sedam: ಕಾಗಿಣಾ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.