ಬಂದೇ ಬಂತು ಪ್ರೇಮಿಗಳ ದಿನ


Team Udayavani, Feb 14, 2017, 11:50 AM IST

valentine-day.jpg

ಬೆಂಗಳೂರು: ಇಂದು ಪ್ರೇಮಿಗಳ ದಿನ. ಗಿಫ್ಟ್ ಸೆಂಟರ್‌ಗಳು, ಪಾರ್ಕ್‌ ಹೋಟೆಲ್‌ಗ‌ಳಲ್ಲಿ ಪ್ರೇಮಿಗಳ ಕಲರವ. ಯಾರೇ ವಿರೋಸಲೀ ಅಥವಾ ಯಾರೇ ಬೆಂಬಲಿ­ಸಲೀ, ತಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಎಲ್ಲೆಂದರಲ್ಲಿ ಯಾರ ಕೈಗೂ ಸಿಗದೆ ಸ್ವತ್ಛಂದವಾಗಿ ಹಾರಾಡುವ ಹೆಬ್ಬಯಕೆ ಪ್ರೇಮಿಗಳದ್ದು.

ಧರ್ಮ, ಜಾತಿಯ ಹೆಸರಿನಲ್ಲಿ,  ಪಾಶ್ಚಾತ್ಯ ಸಂಸ್ಕೃತಿ ಎಂದು  ವ್ಯಾಲೆಂಟೈನ್ಸ್‌ ಡೇಗೆ ಕೆಲವರು ವಿರೋಸು­ತ್ತಿರಬಹುದು, ಈ ಆಚರಣೆಯಲ್ಲಿ ತೊಡಗುವವರು ಕಂಡಲ್ಲಿ ಗತಿ ಕಾಣಿಸುತ್ತೇವೆ ಎಂದು ಮತ್ತೂಂದಷ್ಟು ಮಂದಿ ಬೆದರಿಕೆಯನ್ನೂ ಹಾಕಿದರಬಹುದು, ವ್ಯಾಲೆಂಟೇನ್ಸ್‌ ಡೇ ವಿರೋಸುವವರನ್ನು ವಿರೋ­ಸ­ಲೆಂದು, ಪ್ರೇಮಿಗಳನ್ನು ಬೆಂಬಲಿಸಲು ಇನ್ನೊಂದಷ್ಟು ಮಂದಿ ಹುಟ್ಟಿಕೊಂಡಿರಬಹುದು. ಈ ಇಬ್ಬರ ನಡುವೆ ಸಿಕ್ಕಿಹಾಕಿಕೊಳ್ಳದೆ, ಪ್ರೇಮಿಗಳು ತಮ್ಮೊಲವಿನ ಪ್ರೇಮಿಗೆ ಪ್ರೀತಿ ನಿವೇದನೆ ಮಾಡಲು ಪ್ರಾಶಸ್ತ್ಯ ದಿನ. 

ಜಾತಿ- ಧರ್ಮ, ಮೇಲು-ಕೀಳು, ಬಡವ-­ಶ್ರೀಮಂತ ಎಂಬ ಕೊಂಡಿಕಳಚಿ, ಪ್ರೇಮ ನಿವೇದನೆ­ಗೆಂದೇ ಹಲವು ದಿನ ತಯಾರಿ ನಡೆಸಿದವರು ಅವಕಾಶಕ್ಕಾಗಿ ಕಾಯುವ ಗಳಿಗೆ ಬಂದಿದೆ. ಪ್ರೇಮದ ಪ್ರತೀಕವಾದ ಗುಲಾಬಿ ಹೂವುಗಳ ಬೆಲೆ ಜರ್ರನೇ ಮೇಲೇರಿದ್ದು, ಒಂದೆರೆಡು ರೂಪಾಯಿಗೆ ಸಿಗುತ್ತಿದ್ದ ಕೆಂಗುಲಾಬಿ ಹೂವಿನ ಬೆಲೆ 10ರೂ. ಮೀರಿದೆ. ಹೂವು ಮಾರಾಟಗಾರರು ಫೆ.14ಕ್ಕೆಂದೇ ತಮ್ಮ ಎಂದಿನ ಬೇಡಿಕೆಗಿಂತ ಸ್ವಲ್ಪ ಜಾಸ್ತಿಯೇ ಗುಲಾಬಿ ಹೂವು ಖರೀದಿ ಮಾಡಿದ್ದಾರೆ.

ಪ್ರೇಮಿಗಳ ದಿನವೆಂದರೇ ಕೇವಲ ಪ್ರೇಮ ನಿವೇದನೆ ಮಾಡುವವರು, ಹೊಸ ಸಂಗಾತಿಯ ಹುಡುಕಾಟದಲ್ಲಿ ತೊಡಗಿರುವವರು ಮಾತ್ರ ಆಚರಿಸುತ್ತಿದ್ದ ದಿನಗಳು ಕಳೆದಿದ್ದು, ದಂಪತಿಗಳು ಕೂಡ ಈ ದಿನದಲ್ಲಿ ತನ್ನ ಪತಿ, ಪತ್ನಿಗೆ ಉಡುಗೊರೆ ಕೊಡುವುದು, ಅವರಿಗಾಗಿ ಸಮಯ ಮೀಸಲಿಡುತ್ತಿದ್ದಾರೆ. ಗಿಫ್ಟ್ಗಳು ನೀಡುವುದು ಕೂಡ ಇಂದಿನ ವಿಶೇಷ. ಗಿಫ್ಟ್ ಸೆಂಟರ್‌ಗಳಲ್ಲಿ ಗ್ರೀಟಿಂಗ್‌ ಕಾರ್ಡ್‌ ಸೇರಿದಂತೆ ವಿವಿಧ ಹುಡುಗೊರೆಗಳಿಂದ ಗಿಫ್ಟ್ ಸೆಂಟರ್‌ಗಳು ತುಂಬಿವೆ. 

ತಾಜ್‌ಮಹಲ್‌ ವೆರೈಟಿ: ಪ್ರೇಮಿಗಳ ದಿನಕ್ಕಾಗಿ ಬೆಂಗಳೂರಿನಿಂದ ಹೊರ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಫ‌ಸ್ಟ್‌ರೆಡ್‌ ಗುಲಾಬಿ ತನ್ನ ಹಿಂದಿನ ಜನಪ್ರಿಯತೆ ಕಳೆದುಕೊಂಡಿದೆ. ಇದೀಗ ಆ ಸ್ಥಾನವನ್ನು ತಾಜ್‌ಮಹಲ್‌ ಹೆಸರಿನ ಗುಲಾಬಿ ಆಕ್ರಮಿಸಿಕೊಂಡಿದೆ. ಕೆಲವೇ ವರ್ಷಗಳ ಹಿಂದೆ ಬಂದ ತಾಜ್‌ಮಹಲ್‌ ಹೂ, ವಿದೇಶಿ ಪ್ರೇಮಿಗಳ ಮನ ಗೆದ್ದಿದೆ.

ಕೀನ್ಯ, ಇಥಿಯೋಪಿಯಾಗಳು ಗುಲಾಬಿ ಬೆಳೆಯಲ್ಲಿ ಮುಂಚೂಣಿಯಲ್ಲಿದ್ದರೂ, ಕರ್ನಾಟಕದ ಅದರಲ್ಲೂ ಬೆಂಗಳೂರು ಸುತ್ತಮುತ್ತ ಪಾಲಿಹೌಸ್‌ಗಳಲ್ಲಿ ಬೆಳೆಸಿದ ಗುಲಾಬಿ ಹೂವುಗಳು ಹೆಚ್ಚು ಗುಣಮಟ್ಟ ಹೊಂದಿವೆ. ಆದ್ದರಿಂದ ಗುಲಾಬಿ ಹೂವುಗಳಿಗೆ ಬೇಡಿಕೆ ಇದ್ದು, ಈಗಾಗಲೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಗಾಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ ಎನ್ನುತ್ತಾರೆ ಸೌತ್‌ ಇಂಡಿಯಾ ಫ್ಲೋರಿಕಲ್ಚರ್‌ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ್‌ ರಾವ್‌.

ಸಂತಸಕ್ಕೊಂದು ಸಭೆ: ಲವ್‌ ಇಂಡಿಯಾ ಫೋರಂ ಪ್ರೇಮಿಗಳ ದಿನದ ಅಂಗವಾಗಿ ಚಿತ್ರಕಲಾ ಪರಿಷತ್‌ನಲ್ಲಿ ಸೌಹಾರ್ದತೆ ಉದ್ದೇಶದಿಂದ ವೆಲೆಟೈನ್ಸ್‌ ದಿನ ಆಚರಿಸುತ್ತಿದೆ. ಅಂತರ್ಧರ್ಮಿಯ ವಿವಾಹಿತರನ್ನು ಒಂದು ಗೂಡಿಸಿ “ಪ್ರೀತಿನೇ ನಮ್ಮ ಜಾತಿ – ಪ್ರೇಮಾನೇ ನಮ್ಮ ದೇಶ’ ಎಂಬ ಘೋಷ ವಾಕ್ಯದಲ್ಲಿ ಪ್ರೇಮ ಎಲ್ಲ ಧರ್ಮ ಮೀರಿದ್ದೆಂದು ಸಂಭ್ರಮಿಸಲು ಫೋರಂ ಅವಕಾಶ ನೀಡಿದೆ. ಹಾಡು, ನೃತ್ಯ, ಪುಸ್ತಕ ಪ್ರದರ್ಶನ, ಊಟ, ಸಂಭಾಷಣೆ. ಸೌಹಾರ್ದಯುತ ಮಾತು ಅಲ್ಲಿರಲಿದೆ. ಪ್ರೇಮಿಗಳಿಂದಲೇ ಸೌಹಾರ್ದತೆ ಸಾಧ್ಯವೆನ್ನುವ ಸಂತಸ ಕೂಟ ಮಂಗಳವಾರ ಸಂಜೆ 5.30ಕ್ಕೆ ಆರಂಭಗೊಳ್ಳಲಿದೆ. 

ಪ್ರೇಮಿಗಳಿಗೆ ಭದ್ರತೆ: ಪ್ರೇಮಿಗಳ ದಿನದಂದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಗರದ ಪಾರ್ಕ್‌ಗಳು ಸೇರಿದಂತೆ ಆಯಾಕಟ್ಟಿನ ಜಾಗಗಳಲ್ಲಿ ಪೊಲೀಸ್‌ ಬಂದೋಬಸ್ತ್ ಇದೆ. ಕಬ್ಬನ್‌ಪಾರ್ಕ್‌, ಲಾಲ್‌ಬಾಗ್‌ನಲ್ಲಿಯೂ ಅಲ್ಲಿನ ಸಿಬ್ಬಂದಿಗಳು ಕಣYವಲು ನಡೆಸಲಿದ್ದಾರೆ.

ಕಬ್ಬನ್‌ಪಾರ್ಕ್‌ನಲ್ಲಿ  ಪ್ರೇಮಿಗಳ ವಿವಾಹ
ವಿಶಿಷ್ಟ ಪ್ರತಿಭಟನೆಗಳ ಹರಿಕಾರ, ವಾಟಾಳ್‌ ನಾಗರಾಜ್‌ ಅವರು ಈಗಾಗಲೇ ಪ್ರೇಮಿಗಳ ವಿವಾಹದ ಆಹ್ವಾನ ಪತ್ರಿಕೆಗಳನ್ನು ಎಲ್ಲೆಡೆ ಹಂಚಿದ್ದು, ಫೆ.14ರಂದು ಬೆಳಗ್ಗೆ 11ಕ್ಕೆ ಕಬ್ಬನ್‌ಪಾರ್ಕ್‌ನ ಟೆನ್ನಿಸ್‌ ಕ್ಲಬ್‌ ಬಳಿ “ಕೆಂಪಿ-ಕೆಂಪ’ನಿಗೆ ವಿವಾಹ ಮಾಡಲಿದ್ದಾರೆ. ಜತೆಗೆ ಪ್ರೇಮಗೀತೆಗಳು, ಗಟ್ಟಿಮೇಳ, ಪ್ರೇಮಿಗಳಿಗೆ ಗುಲಾಬಿ ಹೂಗಳನ್ನು ವಿತರಿಸುವುದು ಮಾತ್ರವಲ್ಲ ಬೆಳ್ಳಿ ರಥದ ಮೆರವಣಿಗೆಯನ್ನು ಪ್ರಮುಖ ರಸ್ತೆಗಳಲ್ಲಿ ನಡೆಸಲಿದ್ದಾರೆ. ರಸ್ತೆಯುದ್ದಕ್ಕೂ ಪ್ರೇಮಿಗಳ ಪರ ತಾವಿದ್ದೇವೆಂದು ಗುಲಾಬಿ ನೀಡಲಿದ್ದಾರೆ. 

ಟಾಪ್ ನ್ಯೂಸ್

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

18-wonderla

Bengaluru: ವಂಡರ್‌ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ ಫ್ರೀ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

14-bng

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ree

Karnataka;ಕನ್ನಡಕ್ಕೆ ಪ್ರಥಮ ಆದ್ಯತೆ, ಕನ್ನಡವೇ ಆಡಳಿತ ಭಾಷೆ ಆಗಬೇಕು: ಸಿದ್ದರಾಮಯ್ಯ

DK SHI NEW

CM ಬದಲಾವಣೆ ಚರ್ಚೆಯೇ ಇಲ್ಲ,ದಿಲ್ಲಿಗೆ ಭೇಟಿ ನೀಡುವ ಪ್ರಸಂಗವೂ ಉದ್ಭವಿಸಿಲ್ಲ:ಡಿಕೆಶಿ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.