ದಾವಣಗೆರೆಯಲ್ಲಿ ಚೌಕ ಗೆದ್ದರಂತೂ ಇಡೀ ರಾಜ್ಯದಲ್ಲೇ ಗೆದ್ದಂತೆ


Team Udayavani, Feb 14, 2017, 12:59 PM IST

dvg3.jpg

ದಾವಣಗೆರೆ: ಕನ್ನಡ ಚಲನಚಿತ್ರ ರಂಗದ ದಂತಕಥೆ ದ್ವಾರಕೀಶ್‌ ಬ್ಯಾನರ್‌ನ 50ನೇ ಚಿತ್ರ ಚೌಕಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಚಿತ್ರದ ಗೆಲುವಿಗೆ ಕಾರಣವಾಗಿರುವ ಜನರಿಗೆ ಕೃತಜ್ಞತೆ ತಿಳಿಸುವುದಕ್ಕಾಗಿ ಚೌಕ ದಿಗ್ವಿಜಯ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದ ನಿರ್ಮಾಪಕ, ದ್ವಾರಕೀಶ್‌ ಪುತ್ರ ಯೋಗೇಶ್‌ ತಿಳಿಸಿದರು.

ಚೌಕಕ್ಕೆ ಸಾಕಷ್ಟು ಹಣ ತೊಡಗಿಸಲಾಗಿದೆ. ಈವರೆಗೆ ಹಾಕಿದ ಬಂಡವಾಳ ವಾಪಾಸ್ಸು ಬಂದಿಲ್ಲ. ಆದರೂ, ಚಿತ್ರಕ್ಕೆ ದೊರಕಿರುವ ಬೆಂಬಲದಿಂದ ಹಣ ವಾಪಾಸ್ಸು ಬಂದೇ ಬರುವ ವಿಶ್ವಾಸ ಇದೆ. ಹಣಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ಜನರ ಪೀತಿ, ಅಭಿಮಾನದ ಫಲವಾಗಿ ನಮ್ಮ ಬ್ಯಾನರ್‌ನ 50ನೇ ಚಿತ್ರ ಗೆದ್ದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದರು. 

ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕಡೆ ಚಿತ್ರ ಚೆನ್ನಾಗಿ ಓಡಿದರೆ ಆ ಚಿತ್ರ ಗೆದ್ದಂತೆ. ಇನ್ನು ಕರ್ನಾಟಕದ ಹೃದಯ ಭಾಗ ದಾವಣಗೆರೆಯಲ್ಲಿ ಚಿತ್ರ ಗೆದ್ದರಂತೂ ಇಡೀ ರಾಜ್ಯದಲ್ಲೇ ಗೆದ್ದಂತೆ. ಈ ಭಾಗದ ಜನರು ಕನ್ನಡ ಚಿತ್ರಕ್ಕೆ ನೀಡುವಂಥಹ ಪ್ರೋತ್ಸಾಹ, ಆಶೀರ್ವಾದ ಮರೆಯಲಿಕ್ಕಾಗದು. ಆಪ್ತಮಿತ್ರ ಚಿತ್ರ ಮೊದಲಿಗೆ ಗೆದ್ದಿದ್ದೇ ದಾವಣಗೆರೆಯಲ್ಲಿ ಎಂದು ಸ್ಮರಿಸಿದರು. 

ಚೌಕ ತಂಡವನ್ನಿಟ್ಟಿಕೊಂಡು ಇನ್ನೊಂದು ಚಿತ್ರ ಮಾಡುವ ಬಯಕೆ ಇದೆ. ಪ್ರೇಮ್‌, ದಿಗಂತ್‌, ಪ್ರಜ್ವಲ್‌ ಹಾಗೂ ಚಿತ್ರದ ನಿರ್ದೇಶಕ ತರುಣ್‌ ಬೇರೆ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಾಜೆಕ್ಟ್ ಮುಗಿದ ನಂತರ ಮುಂದಿನ ಚಿತ್ರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹಿಂದೆಲ್ಲ ಕನ್ನಡ ಚಿತ್ರದ ಗುರಿ 50, 100 ದಿನ ಇತ್ತು. ಈಗ ವರ್ಷಕ್ಕೆ 120-150 ಚಿತ್ರ ನಿರ್ಮಾಣವಾಗುತ್ತಿವೆ.

ಹಾಕಿದಂತಹ ಬಂಡವಾಳ 2-3 ದಿನಗಳಲ್ಲಿ ವಾಪಾಸ್ಸು ಬರುತ್ತದೆ. ಹಣ ವಾಪಾಸ್ಸಾಗುವುದು ಮುಖ್ಯವಾಗಿರುವಾಗ ಚಿತ್ರ ಓಡುವುದರತ್ತ ಅಷ್ಟಾಗಿ ಗಮನ ನೀಡುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಚಿತ್ರದ ನಿರ್ದೇಶಕ ತರುಣ್‌ ಸುಧೀರ್‌ ಮಾತನಾಡಿ, ಮೇಯರ್‌ ಮುತ್ತಣ್ಣ, ವಿಷ್ಣುವರ್ಧನ ಇತರೆ ಚಿತ್ರ ಮಾಡಿರುವಂತಹ ದ್ವಾರಕೀಶ್‌ ಬ್ಯಾನರ್‌ನಡಿ ಚಿತ್ರ ಮಾಡುವಾಗ ನಿಜಕ್ಕೂ ದೊಡ್ಡ ಜವಾಬ್ದಾರಿ ಇತ್ತು.

ಒಂದು ವರ್ಷ ಕಷ್ಟಪಟ್ಟು ಮಾಡಿದ್ದೇವೆ. ಈಗ ಚಿತ್ರ ಗೆದ್ದಿದೆ. ಚಿತ್ರದ ಗೆಲುವಿಗೆ ಕಾರಣವಾಗಿರುವ ಜನರಿಗೆ ಧನ್ಯವಾದ ಹೇಳಿ, ಅವರ ಅಭಿಪ್ರಾಯ ತಿಳಿದುಕೊಳ್ಳಲು ಈ ಪ್ರವಾಸ. ದರ್ಶನ್‌ ಅವರಂತಹವರು ಒಂದೇ ಮಾತಿಗೆ ಈ ಚಿತ್ರದಲ್ಲಿ ನಟಿಸಲಿಕ್ಕೆ ಒಪ್ಪಿಕೊಂಡಿದ್ದರು. ಮಲ್ಟಿ ನಾಯಕರ ಚಿತ್ರ ಸದಾ ಬರುತ್ತಿವೆ. ಪುನೀತ್‌, ಸುದೀಪ್‌, ದರ್ಶನ್‌ ಎಲ್ಲರೂ ಒಂದೇ ಚಿತ್ರದಲ್ಲಿ ನಟಿಸುವುದೇ ಇಲ್ಲ ಎನ್ನುವುದಿಲ್ಲ, ಅವರಿಗೆ ಬೇಕಾದ ಕಥೆ ಮುಖ್ಯ.

ದರ್ಶನ್‌ ಅವರ 50ನೇ ಚಿತ್ರ ನಿರ್ದೇಶಿಸುತ್ತಿರುವುದಾಗಿ ಅವರು ತಿಳಿಸಿದರು. ನಾಯಕ ನಟರಾದ ಪ್ರೇಮ್‌, ದಿಗಂತ್‌, ಪ್ರಜ್ವಲ್‌ ದೇವರಾಜ್‌, ಚಿತ್ರದ ಗೆಲುವಿಗೆ ಕಾರಣರಾದ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುವುದಕ್ಕಾಗಿ ಅವರ ಬಳಿಗೆ ಬಂದಿದ್ದೇವೆ. ಚೌಕ ಚಿತ್ರ ಎಲ್ಲ ಕಡೆ ಭರ್ಜರಿ ಓಪನಿಂಗ್‌ ಪಡೆದುಕೊಂಡಿದೆ. ಕಥೆಯೇ ಚಿತ್ರದ ಗೆಲುವಿಗೆ ಮುಖ್ಯ ಕಾರಣ. ಚಿತ್ರ ತಂಡದ ಶ್ರಮಕ್ಕೆ ಒಳ್ಳೆಯ ಫಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅಶೋಕ ಚಿತ್ರಮಂದಿರದ ಮಾಲೀಕ ಲಕ್ಷ್ಮೀಕಾಂತ್‌ರೆಡ್ಡಿ ಇದ್ದರು.  

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ನನ್ನಅಳಿಯನನ್ನು ಬಿಟ್ಟು ಬಿಟ್ಟಿದ್ದರೆ ದರ್ಶನ್‌ ಗೆ….: ರೇಣುಕಾಸ್ವಾಮಿ ಮಾವa

Davanagere; ನನ್ನಅಳಿಯನನ್ನು ಬಿಟ್ಟು ಬಿಟ್ಟಿದ್ದರೆ ದರ್ಶನ್‌ ಗೆ….: ರೇಣುಕಾಸ್ವಾಮಿ ಮಾವ

6-

Nyamathi ಪಟ್ಟಣದ ಹಲವೆಡೆ ಸರಣಿ ಕಳ್ಳತನ; ನಾಲ್ವರಲ್ಲಿ ಇಬ್ಬರು ಆರೋಪಿಗಳ ಬಂಧನ, ಸ್ವತ್ತು ವಶ

BC-Patil

Congress ವಿಪಕ್ಷದಲ್ಲಿದ್ದಾಗ ಕೋವಿಡ್ ಹಗರಣ ಬಗ್ಗೆ ಸುಮ್ಮನಿದ್ದಿದ್ದೇಕೆ?: ಬಿ.ಸಿ.ಪಾಟೀಲ್‌

Protest against Aadhaar link to agricultural pump set: Kodihalli Chandrasekhar

ಕೃಷಿ ಪಂಪ್ ಸೆಟ್ ಗೆ ಆಧಾರ‌ ಲಿಂಕ್ ಖಂಡಿಸಿ ಸೆ. 4ರಂದು ಪ್ರತಿಭಟನೆ: ಕೋಡಿಹಳ್ಳಿ ಚಂದ್ರಶೇಖರ್‌

Davanagere; Governor’s post should be abolished: CPI

Davanagere; ರಾಜ್ಯಪಾಲ ಹುದ್ದೆಯನ್ನೇ ರದ್ದು ಮಾಡಬೇಕು: ಸಿಪಿಐ ಆಗ್ರಹ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.