ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ
Team Udayavani, Feb 14, 2017, 4:18 PM IST
ಮಂಡ್ಯ: “ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಅಧಿಕಾರಿ ಗಳು ಯುದೊಪಾದಿಯಲ್ಲಿ ಕೆಲಸ ಮಾಡಬೇಕು. ಈಗ ಸೃಷ್ಟಿ ಯಾಗಿರುವ ಬರವನ್ನೇ ಸಮರ್ಥವಾಗಿ ಎದುರಿಸ ಲಾಗದಿದ್ದ ಮೇಲೆ ಇದಕ್ಕಿಂತಲೂ ಕ್ಲಿಷ್ಟ ಬರ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಎದುರಾಗಲಿದೆ. ಅದನ್ನು ಹೇಗೆ ಎದುರಿಸುವಿರಿ’.
ಇದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ ಯವರು ಅಧಿಕಾರಿಗಳ ಮುಂದಿಟ್ಟ ಪ್ರಶ್ನೆ. ಸೋಮವಾರ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣ ದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಪ್ರತಿ ದಿನವೂ ಒಂದೊಂದು ಕಡೆಯಿಂದ ಕುಡಿಯುವ ನೀರಿನ ಸಮಸ್ಯೆಯ ದೂರುಗಳು ಕೇಳಿ ಬರುತ್ತಲೇ ಇವೆ. ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯನಿರ್ವ ಹಿಸುತ್ತಿಲ್ಲ. ನಾವು ಹೇಳುವುದನ್ನೂ ಕೇಳುತ್ತಿಲ್ಲ.
ನೀವು ಸರಿಯಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿಲ್ಲ. ಒಬ್ಬೊ ಬ್ಬರು ಒಂದೊಂದು ನಿರ್ಧಾರ ಮಾಡುತ್ತಿರುವುದರಿಂದ ಸಮಸ್ಯೆ ಜೀವಂತವಾಗಿದೆ’ ಎಂದು ಅಸಮಾಧಾನದಿಂದ ತಿಳಿಸಿದರು. “ಅಧಿಕಾರಿಗಳಾದವರು ಜನರ ಬಳಿಗೆ ಹೋಗಿ ಕಷ್ಟ ಕೇಳುವುದು. ಸಮಸ್ಯೆಯನ್ನು ಅರಿತು ಪರಿಹಾರ ಸೂಚಿಸು ವುದು ನಿಮ್ಮ ಕರ್ತವ್ಯ. ಈಗ ಜಿಲ್ಲೆಯ ಎಲ್ಲಾ ಬಾಗಗಳಲ್ಲೂ ಸಮಸ್ಯೆ ಇದೆ. ಅನೇಕ ಕಡೆಗಳಲ್ಲಿ ಎರಡು ತಿಂಗಳಾದರೂ ಸಮಸ್ಯೆಗಳಿಗೆ ಸ್ಪಂದಿಸದಷ್ಟು ಉದಾಸೀನ ತೋರುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.
“ನಿಮ್ಮ ಬೇಜವಾಬ್ದಾರಿಯಿಂದ ಜನರಿಗೆ ನಾವು ಉತ್ತರಿಸ ಲಾಗುತ್ತಿಲ್ಲ. ಬಿಂದಿಗೆ ಹಿಡಿದುಕೊಂಡು ಬಂದು ನಮ್ಮ ಮುಂದೆ ಕೂರುತ್ತಾರೆ. ನಿಮ್ಮಿಂದ ಸಮಸ್ಯೆ ಪರಿಹರಿಸಲಾಗದಿದ್ದರೆ ನಮ್ಮ ನಿರ್ಧಾರಕ್ಕೆ ಬಿಡಿ. ಸಮಸ್ಯೆಯನ್ನು ಹೇಗೆ ಪರಿಹರಿಸ ಬೇಕೆಂಬುದು ನಮಗೆ ಗೊತ್ತು’ ಎಂದು ಖಡಕ್ಕಾಗಿ ಹೇಳಿದರು.
“ಕೆ.ಆರ್.ಪೇಟೆ ತಾಲೂಕಿನ ಮಂಗನ ಹೊಸಹಳ್ಳಿಯಲ್ಲಿ ಕೊಳವೆ ಬಾವಿ ನಿರ್ಮಿಸಿ 15 ದಿನಗಳಾಗಿದೆ. ಇನ್ನೂ ಪೈಪ್‌ಲೈನ್, ಮೋಟಾರ್ ಅಳವಡಿಸಿಲ್ಲ. ಇನ್ನೂ 25 ಬೋರ್‌ವೆಲ್ ಕೊರೆಯಬೇಕು ಎನ್ನುತ್ತೀರಿ. ಯಾವಾಗ ಕೊರೆಯುತ್ತೀರಿ, ಪೈಪ್‌ಲೈನ್, ಮೋಟಾರ್ ಅಳವಡಿಸಿ ನೀರು ಯಾವಾಗ ಕೊಡ್ತೀರಿ. ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿಲ್ಲದಂತೆ ಮಾತನಾಡುತ್ತಿದ್ದೀರಲ್ಲಾ’ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
“ನಾಗರಘಟ್ಟದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸ ಲಾಗುತ್ತಿದೆ ಎಂದು ಹೇಳುತ್ತಿದ್ದೀರಿ. ಆ ಊರಿನ ಜನರಿಗೆ ಸಮ ರ್ಪಕವಾಗಿ ನೀರೊದಗಿಸಲು ನಾಲ್ಕು ಟ್ಯಾಂಕರ್ ನೀರು ಬೇಕು. ನೀವು ಕೊಡ್ತಿರೋದು ಒಂದು ಟ್ಯಾಂಕರ್ ನೀರು. ಅದು ಸಾಲು ವುದೇ. ಶ್ರವಣಬೆಳಗೊಳದಿಂದ ಟ್ಯಾಂಕರ್‌ನಲ್ಲಿ ನೀರನ್ನು ತರುವ ಪರಿಸ್ಥಿತಿ ಇದೆ.
ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಆಲೋಚನೆ ಗಳನ್ನೇ ಅಧಿಕಾರಿಗಳು ಮಾಡುತ್ತಿಲ್ಲ’ ಎಂದಾಗ, “ಹತ್ತಿರ ದಿಂದಲೇ ನೀರನ್ನು ತರುವ ಬಗ್ಗೆ ಮುಂದೆ ಕ್ರಮ ವಹಿಸುತ್ತೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದಾಗ, “ನನಗೆ ನಿಮ್ಮ ಉತ್ತರ ಬೇಡ, ಕೆಲಸ ಮಾಡಿ ತೋರಿಸಿ’ ಎಂದು ನೇರವಾಗಿ ನುಡಿದರು.
“ನಾನು ಕೇವಲ ನನ್ನ ತಾಲೂಕಿನ ಸಮಸ್ಯೆಯನ್ನಷ್ಟೇ ಹೇಳುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಜಿಲ್ಲೆಯ ಯಾವುದೇ ಭಾಗದಲ್ಲಿರಲಿ. ಅದನ್ನು ಶೀಘ್ರ ಪರಿಹರಿಸುವತ್ತ ಅಧಿಕಾರಿಗಳು ಗಮನಹರಿಸ ಬೇಕು. ಎಲ್ಲದಕ್ಕೂ ದುಡ್ಡಿಲ್ಲ ಎಂದರೆ ಹೇಗೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಕೊಳವೆ ಬಾವಿ ನಿರ್ಮಿಸಿದರೂ ಒಂದು ವಾರದೊಳಗೆ ಪೈಪ್‌ಲೈನ್, ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಕೊಟ್ಟು ನೀರು ಪೂರೈಸಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಗಾಯಿತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬೋರಯ್ಯ, ಮಂಜುನಾಥ್, ಯೋಗೇಶ್ ಇತರರಿದ್ದರು.
ಟ್ಯಾಂಕರ್ ಬಿಲ್ 20 ಲಕ್ಷ ಬಿಡುಗಡೆ: ಸಿಇಒ ಶರತ್
ಮಂಡ್ಯ: ಜಿಲ್ಲೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಇದಕ್ಕಾಗಿ 20 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಆದರೂ ಏಕೆ ಬಿಲ್ ಪಾವತಿ ಆಗಿಲ್ಲ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಶರತ್ ಪ್ರಶ್ನಿಸಿದರು.
ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವವರಿಗೆ ಹಣ ಪಾವತಿಗೆ ಜಿಲ್ಲಾಧಿಕಾರಿಯವರು ತಹಶೀಲ್ದಾರ್ ಮೂಲಕ 20 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಆ ವಿಷಯ ನನಗೆ ಚೆನ್ನಾಗಿ ಗೊತ್ತಿದೆ. ಆದರೂ ಏಕೆ ಬಿಲ್ ಪಾವತಿಸಿಲ್ಲ ಎಂದಾಗ, ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರಲಿಲ್ಲ. ಕೊನೆಗೆ ಜಿಲ್ಲೆಯಲ್ಲಿ ಟ್ಯಾಂಕರ್ ಮೂಲಕ ಸರಬರಾಜು ಮಾಡಿದ ನೀರಿನ ಒಟ್ಟು ಬಿಲ್ ಎಷ್ಟಾಗಿದೆ ಎಂಬ ಮಾಹಿತಿ ಕೊಡಿ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಹಣ ಬಿಡುಗಡೆಗೆ ಶೀಘ್ರ ಕ್ರಮ ವಹಿಸುವ ಭರವಸೆ ನೀಡಿದರು.
ಬೋರ್‌ವೆಲ್ ಕೊರೆದ ಹಣ ಬಿಡುಗಡೆಯಾಗಿಲ್ಲ: ಜಿಲ್ಲೆ ಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಹೊಸದಾಗಿ ಕೊಳವೆ ಬಾವಿ ನಿರ್ಮಿಸಲಾಗಿದೆ. ಈಗ ನಿರ್ಮಿಸಿರುವ ಕೊಳವೆ ಬಾವಿಗಳಿಗೆ ಇನ್ನೂ ಹಣ ಬಿಡುಗಡೆ ಯಾಗಿಲ್ಲ. ಶಾಸಕರ ನೇತೃತ್ವದ ಟಾಸ್ಕ್ ಪೋರ್ಸ್ ಸಮಿತಿ ಹಣ ಬಿಡುಗಡೆ ಮಾಡಬೇಕು.ಅದನ್ನು ಹೊರತುಪಡಿಸಿ ಬೋರ್‌ವೆಲ್‌ಗಳನ್ನು ಕೊರೆಸುವುದಕ್ಕೆ ಜಿಲ್ಲಾ ಪಂಚಾಯಿತಿಗೆ, ಸದಸ್ಯರಿಗೆ ಅನುದಾನವಿರು ವುದಿಲ್ಲ ಎಂದು ಅಧ್ಯಕ್ಷರಿಗೆ ಸ್ಪಷ್ಟಪಡಿಸಿದರು.
ಶೀಘ್ರ ನೇಮಕ: ಜಿಲ್ಲಾ ಪಂಚಾಯಿತಿಯಲ್ಲಿ ಅಭಿವೃದ್ಧಿ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಉಪ ಕಾರ್ಯದರ್ಶಿಗಳನ್ನು ಶೀಘ್ರ ನೇಮಕವಾಗಲಿದೆ. ಆಡಳಿತಕ್ಕೆ ಸಂಬಂಧಿಸಿದ ಉಪ ಕಾರ್ಯದರ್ಶಿ ಅವರು ಇಂದೇ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಅಭಿವೃದ್ಧಿಗೆ ಸಂಬಂಧಿಸಿದ ಉಪ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಮೂಲಕ ತುಂಬುವ ಪ್ರಕ್ರಿಯೆ ನಡೆದಿದೆ. ಇನ್ನು ಮುಖ್ಯ ಯೋಜನಾಧಿಕಾರಿ ಹುದ್ದೆಗೂ ಭರ್ತಿಗೂ ಕ್ರಮ ವಹಿಸಲಾಗಿದೆ ಎಂದು ವಿವರಣೆ ನೀಡಿದರು.
ಮದ್ಯದಂಗಡಿ ವಿರುದ್ಧ ಕ್ರಮ ಕೈಗೊಳ್ಳಿ: ಪ್ರೇಮಕುಮಾರಿ
ಮಂಡ್ಯ: ಕೆ.ಆರ್.ಪೇಟೆ ತಾಲೂಕು ಕೊರಟಗೆರೆ ಗ್ರಾಮ ದಲ್ಲಿರುವ ಮದ್ಯದಂಗಡಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಕುಮಾರಿ ಸೂಚಿಸಿದರು.
ಮದ್ಯದಂಗಡಿ ನಿಯಮದ ವಾಪ್ತಿ ಅನುಗುಣವಾಗಿರದೆ ತಲೆ ಎತ್ತಿತ್ತು. ಅದನ್ನು ಸ್ಥಳಾಂತರಿಸುವ ಕೆಲಸ ಇಲಾಖೆಯಿಂದ ನಡೆದಿಲ್ಲ. ನಿಯಮದ ವ್ಯಾಪ್ತಿಗೆ ವಿರುದ್ಧವಾಗಿರುವ ಮದ್ಯದಂಗಡಿಯನ್ನು ಸ್ಥಳಾಂತರಿಸದೆ ಬಿಟ್ಟಿರುವುದೇಕೆ? ಎಂದು ಪ್ರಶ್ನಿಸಿದಾಗ, ಮದ್ಯದಂಗಡಿ ಸ್ಥಳಾಂತರಿಸುವ ಸಂಬಂಧ ರಾಜ್ಯ ಅಬಕಾರಿ ಕಾಯ್ದೆ ಮತ್ತು ನಿಯಮಗಳನ್ವಯ ಪರಿಶೀಲಿಸ ಲಾಗುತ್ತಿದೆ ಎಂದು ಅಧಿಕಾರಿ ಉತ್ತರಿಸಿದರು.
ಇದರಿಂದ ಕೋಪಗೊಂಡ ಸಿಇಒ ಬಿ.ಶರತ್, ಅಧ್ಯಕ್ಷರು ಈ ವಿಷಯವನ್ನು 2 ತಿಂಗಳ ಹಿಂದೆಯೇ ಹೇಳಿದ್ದರು. ಇನ್ನೂ ಪರಿಶೀಲಿಸಲಾಗುತ್ತಿದೆ ಎನ್ನುತ್ತಿದ್ದೀರಲ್ಲಾ.
ನಿಯಮದ ಉಲ್ಲಂಘನೆಯಾಗಿದೆ ಎಂದು ನೀವೇ ಹೇಳುತ್ತಿ ದ್ದೀರಿ. ನಿಯಮ ಗಳನ್ನು ಪರಿಶೀಲಿಸುತ್ತಿರುವುದಾಗಿಯೂ ಹೇಳುತ್ತಿದ್ದೀರಿ. ನಿಯಮ ಉಲ್ಲಂಘನೆಯಾಗಿದ್ದ ಮೇಲೆಮದ್ಯದಂಗಡಿ ನಡೆಸಲು ಅನುಮತಿ ನೀಡಿದ್ದೇಕೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಪರಿಹಾರ ಸೂಚಿಸುವಂತೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.