ಸರಬ್‌ಜಿತ್ ಕೊಲೆ ಕೇಸ್ :ಪಾಕ್ ಜೈಲು ಅಧಿಕಾರಿಗೆ ಅರೆಸ್ಟ್ ವಾರೆಂಟ್
Team Udayavani, Feb 15, 2017, 12:02 PM IST
ಲಾಹೋರ್ : 2013ರಲ್ಲಿ ಪಾಕ್ ಜೈಲಿನಲ್ಲಿ ನಡೆದಿದ್ದ ಭಾರತೀಯ ಪ್ರಜೆ ಸರಬ್‌ಜಿತ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ತನ್ನ ಮುಂದೆ ಹಾಜರಾಗಲು ವಿಫಲರಾದ ಉನ್ನತ ಜೈಲು ಅಧಿಕಾರಿಯೋರ್ವರ ವಿರುದ್ಧ ಪಾಕ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಪಾಕಿಸ್ಥಾನದ ಕೋಟ್ ಲಖಪತ್ ಜೈಲಿನಲ್ಲಿ ಸರಬ್‌ಜಿತ್ ಸಿಂಗ್‌ನನ್ನು ಇಬ್ಬರು ಸಹ ಕೈದಿಗಳು ಹೊಡೆದು ಕೊಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಪದೇ ಪದೇ ಸಮನ್ಸ್ ಜಾರಿ ಮಾಡಿದ ಹೊರತಾಗಿಯೂ ಬಂಧೀಖಾನೆಯ ಡೆಪ್ಯುಟಿ ಸುಪರಿಂಟೆಂಡೆಂಟ್ ಕೋರ್ಟಿಗೆ ಖುದ್ದಾಗಿ ಹಾಜರಾಗಿರಲಿಲ್ಲ.
ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರು ಫೆ.17ರಂದು ಜೈಲು ಅಧಿಕಾರಿಯಾಗಿರುವ ಡಿವೈಎಸ್‌ಪಿ ಕೋರ್ಟಿನಲ್ಲಿ ಹಾಜರಾಗುವಂತೆ ನೋಡಿಕೊಳ್ಳಬೇಕೆಂದು ಲಾಹೋರ್ ಪೊಲೀಸ್ ಮುಖ್ಯಸ್ಥರಿಗೆ ನೊಟೀಸ್ ಜಾರಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಕರಾಳ ದಿನಾಚರಣೆ ನಡೆಸಿದ ಎಂಇಎಸ್ ನವರ ವಿರುದ್ಧ ಪ್ರಕರಣ ದಾಖಲು
Modi,BSY ಬಗ್ಗೆ ಮಾತನಾಡುವ ಮೊದಲು ಎಚ್ಚರಿಕೆ ಇರಲಿ: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಕಿಡಿ
UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.