ಕಲೆಯೊಂದಿಗೆ ಸಾಹಿತ್ಯ ಬೆರೆತರೆ ಜೀವನ ಅರ್ಥಪೂರ್ಣ

Team Udayavani, Feb 15, 2017, 2:44 PM IST

hub5.jpg

ಧಾರವಾಡ: ಕಲೆಯೊಂದಿಗೆ ಸಾಹಿತ್ಯ ಬೆರೆತರೆ ಜೀವನ ಅರ್ಥ ಪೂರ್ಣವಾಗುವುದು ಎಂದು ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ್‌ ಹೇಳಿದರು. ನಗರದ ಆರ್ಟ್‌ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಕಲಾವಿದ ವಿ.ಡಿ. ಬಡಿಗೇರರ ಪ್ರಕೃತಿ ಕಲಾ ಸಂಭ್ರಮ ಹಾಗೂ ಜಲವರ್ಣ ಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.  

ಒಬ್ಬೊಬ್ಬ ಕವಿಗೆ ಒಂದೊಂದು ವಿಮಶಾìತ್ಮಕ ಭಾವಗಳು ಹುಟ್ಟಿಕೊಳ್ಳಲು ಸಾಧ್ಯ. ಚಿತ್ರಕಲೆ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಲಾವಿದ ಮೊದಲು ವೀಕ್ಷಿಸುವ ಗುಣಗಳನ್ನು ಬೆಳೆಸಿಕೊಂಡು ವಿವಿಧ ವರ್ಣಗಳಿಂದ ಅಭಿವ್ಯಕ್ತ ಪಡಿಸುತ್ತಾನೆ. ಅದು ಅವನ ಹೃದಯ ಭಾಷೆ.

ಹಾಗೆಯೇ ಒಬ್ಬ ಸಾಹಿತಿ ಪ್ರಕೃತಿಯ ಸೊಬಗಿನ ಸಂಭ್ರಮ ಕಾವ್ಯ, ಗದ್ಯ ಹಾಗೂ ಲೇಖನ ಮೂಲಕ ಅಭಿವ್ಯಕ್ತಿ ವ್ಯಕ್ತಪಡಿಸಲು ಶಕ್ತನಾಗುತ್ತಾನೆ. ಕಲೆಯೊಂದಿಗೆ ಸಾಹಿತ್ಯವೂ ಒಂದುಗೂಡಿದಾಗ ಅದರಲ್ಲಿರುವ ಆನಂದ, ಸುಖವೇ ಬೇರೆಯಾಗಿರುತ್ತದೆ ಎಂದರು. ಅತಿಥಿಯಾಗಿದ್ದ ಕವಿವಿ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ|ಶಿವಾನಂದ ಶೆಟ್ಟರ್‌ ಮಾತನಾಡಿ, ಇತ್ತೀಚೆಗೆ ಜಲವರ್ಣದಲ್ಲಿ ರಚಿಸುವ ಕಲಾವಿದರ ಸಂಖ್ಯೆ ಕ್ಷೀಣಿಸುತ್ತಿದೆ.

ಆದರೆ ಹಿರಿಯ ಕಲಾವಿದ ವಿ.ಡಿ. ಬಡಿಗೇರ ಎಂಬಂತ್ತರ ಹೊಸ್ತಿಲಲ್ಲಿದ್ದರೂ ಅವರ ಉತ್ಸಾಹ ಬತ್ತಿಲ್ಲ. ಇವರು ಎಲ್ಲ ಯುವ ಕಲಾವಿದರಿಗೆ ಆದರ್ಶವಾಗಿದ್ದಾರೆ ಎಂದರು. ಕಲಾವಿದ ವಿ.ಡಿ. ಬಡಿಗೇರ ಅವರು, ತಮ್ಮ 34 ಜಲವರ್ಣ ಕಲಾಕೃತಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಎಂ.ಆರ್‌. ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಈಶ್ವರ ಜೋಶಿ, ಡಾ|ವಿರೂಪಾಕ್ಷ ಬಡಿಗೇರ, ಗಂಗಾಧರ ಪತ್ತಾರ, ನವಮಿ ಬಡಿಗೇರ, ಪ್ರಾಚಾರ್ಯ ಎಸ್‌.ಕೆ. ಪತ್ತಾರ, ಬಸವರಾಜ ಕುರಿ ಇತರರು ಇದ್ದರು. ನಂತರ ಜಲವರ್ಣ ಕಲಾಕೃತಿಗಳ ಪ್ರದರ್ಶನ ಜರುಗಿತು. 

ಟಾಪ್ ನ್ಯೂಸ್

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

basavaraj

Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

mutalik (2)

B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

ShreeKanth

Meet Friends: ಧಾರವಾಡದ ಹಳೆಯ ಗೆಳೆಯರ ಭೇಟಿಯಾದ ತೆಲುಗು ನಟ ಶ್ರೀಕಾಂತ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.