ಪ್ಲೇನ್‌ ಮೇಲೆ ಮೋಹಕ ಬಾಲೆಯರ ಕ್ಯಾಟ್‌ವಾಕ್‌

Team Udayavani, Feb 17, 2017, 3:45 AM IST

dance.jpg

ಬೆಂಗಳೂರು: ನೀಲಾಗಸದಲ್ಲಿ ಹಾರಾಡುತ್ತಿದ್ದ ಲೋಹದ ಹಕ್ಕಿಯ ರೆಕ್ಕೆಯ ಮೇಲೆ ಮೋಹಕ ಯುವತಿಯರ ಮಾರ್ಜಾಲ
ನಡಿಗೆ, ನರ್ತನ ಮಾಡುತ್ತಿದ್ದರೆ, ನೋಡುಗರ ಎದೆ ಝಲ್‌ ಎನಿಸುತ್ತಿತ್ತು. ಪ್ರೇಕ್ಷಕರು ಮೂಕ ವಿಸ್ಮಿತರಾಗಿ ತದೇಕಚಿತ್ತದಿಂದ ಅವರನ್ನೇ ನೋಡುತ್ತಿದ್ದರು. ಯಲಹಂಕದಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದಲ್ಲಿ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆ ಯುತ್ತಿರುವುದು “ಸ್ಕೈ ಕ್ಯಾಟ್ಸ್‌’ ತಂಡದ ನಾನಾ ಭಂಗಿಯ ಕಸರತ್ತು.

ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ 11ನೇ ವೈಮಾನಿಕ ಪ್ರದರ್ಶನದಲ್ಲಿ ಆ್ಯನ್ನಾ, ವಿಕ್ಟೋರಿಯಾ ಸ್ಮರ್ ಮತ್ತು ಹೆಲ್ಲಾ ಸ್ಟೆನಿಫ್ ಎಂಬ ಮೂವರು ಯುವತಿಯರು 150 ಕಿ.ಮೀ.ವೇಗದಲ್ಲಿ ಆಗಸದಲ್ಲಿ ಹಾರುವ ವಿಮಾನದ ರೆಕ್ಕೆಯ ಮೇಲೆ ಮಾರ್ಜಾಲ ನಡಿಗೆ ಮಾಡುತ್ತ, ನರ್ತಿಸುತ್ತಿದ್ದರೆ, ವೀಕ್ಷಕರು ಬೆಕ್ಕಸ ಬೆರಗಾಗುತ್ತಿದ್ದರು. ಜೀವದ ಹಂಗು ತೊರೆದು ವಿಮಾನದ ಮೇಲೆ ನಿಂತು ಸ್ಟಂಟ್‌ ಮಾಡುವ ಯುವತಿಯರು ಕನಿಷ್ಠ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಬಿಟ್ಟರೆ ಮತ್ತಾವುದೇ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೆ, ಯುವತಿಯರಿಗೆ ಪೈಲಟ್‌ಗಳೇ ಎಚ್ಚರಿಕೆ ವಾಹಕರು.

ಪೈಲಟ್‌ಗಳಾದ ಜಾಕೋಬ್‌ ಹೊಲಾನ್‌ ಡೇರ್‌, ಬೆನ್‌r ಆ್ಯಂಡರÕನ್‌ ಮತ್ತು ಸುಸ್‌ ಜಾನ್‌ ಹೆಡೆನ್‌ ಕಸರತ್ತು ತಂಡಕ್ಕೆ ಸಾಥ್‌ ನೀಡಿದ್ದರು.

ವೈಮಾನಿಕ ಪ್ರದರ್ಶನದಲ್ಲಿ ಸ್ಕ್ಯಾಂಡಿನೇ ವಿನ್‌ ಸ್ಕೈ ಕ್ಯಾಟ್ಸ್‌ ತಂಡದ್ದು ಇದು ಎರಡನೇ ಪ್ರದರ್ಶನ. ಹೆಲ್ಲಾ ಸ್ಟೆನಿಫ್ಗೆ ಇದು ಎರಡನೇ ಬಾರಿಯಾದರೆ, ಆ್ಯನ್ನಾ, ವಿಕ್ಟೋರಿಯಾ ಸ್ಮರ್ಗೆ ಇದೇ ಮೊದಲ ಪ್ರದರ್ಶನ. ನರ್ತನ, ಸ್ಟಂಟ್‌ ಮೂಲಕ ಬೆರಗು ಮೂಡಿ ಸುವ ಬೆಡಗಿಯರು “ಉದಯವಾಣಿ’ ಜತೆ ತಮ್ಮ ಅನುಭವವನ್ನು ಹಂಚಿಕೊಂಡರು.

“ವಿಮಾನದ ಮೇಲೆ ನಿಂತು ಸ್ಟಂಟ್‌ ಮಾಡುವಾಗ ಕಿವಿ ಮತ್ತು ಕಣ್ಣಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಸ್ಟಂಟ್‌ ಮಾಡುವುದು ಅಭ್ಯಾಸವಾಗಿ ಬಿಟ್ಟಿದೆ. ಪೈಲಟ್‌ ಮತ್ತು ಸಹವರ್ತಿಗಳ ಜತೆ ಕೈ ಸನ್ನೆ ಮೂಲಕ ವಿಮಾನದ ಮೇಲೆ ಸ್ಟಂಟ್‌ ಮಾಡಲಾಗುತ್ತದೆ. ಮೊದ ಮೊದಲು ಕಷ್ಟ ಎನಿಸಿದರೂ ನಂತರ ಅಭ್ಯಾಸವಾಗಿದೆ.

ಯಾವುದೇ ಅಳುಕಿಲ್ಲದೆ ಸ್ಟಂಟ್‌ ಮಾಡುತ್ತೇನೆ. ಆಗಸದಲ್ಲಿ ಪ್ರದರ್ಶನ ನೀಡಲು ಸೂಕ್ತ ತರಬೇತಿ ನೀಡಲಾಗುತ್ತದೆ. ನಂತರವಷ್ಟೇ ಅವಕಾಶ ನೀಡಲಾಗುತ್ತದೆ’ ಎನ್ನುತ್ತಾರೆ ಹೆಲ್ಲಾ ಸ್ಟೆನಿಫ್.

“ವಿಮಾನದ ಮೇಲೆ ಸ್ಟಂಟ್‌, ನರ್ತನ ಮಾಡುವುದು ಸಂತಸವನ್ನುಂಟು ಮಾಡುತ್ತದೆ. ನಮ್ಮ ಸ್ಟಂಟ್‌ಗಳು ನೋಡುಗರಲ್ಲಿ ಭಯ ಹುಟ್ಟಿಸಬಹುದು. ಆದರೆ, ನಮಗೇನೂ ಅಂಜಿಕೆಯಿಲ್ಲ. ನಾನು ಇಂಡಸ್ಟ್ರಿಯಲ್‌ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡಿದ್ದೇನೆ. ಹವ್ಯಾಸಕ್ಕಾಗಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಸಾಹಸಮಯ ಕೆಲಸ ಮಾಡುವುದೆಂದರೆ ನನಗೆ ತುಂಬಾ ಇಷ್ಟ. ಹೀಗಾಗಿ ಇಂತಹ ಪ್ರದರ್ಶನದಲ್ಲಿ ಭಾಗವಹಿಸುತ್ತೇನೆ’ ಎನ್ನುತ್ತಾರೆ 22 ವರ್ಷದ ಆ್ಯನಾ.

27 ವರ್ಷದ ವಿಕ್ಟೋರಿಯಾ, “ನೃತ್ಯವೇ ನನ್ನ ವೃತ್ತಿ. ಹೀಗಾಗಿ ವಿಮಾನದ ಮೇಲೆ ನೃತ್ಯ, ಸ್ಟಂಟ್‌ ಮಾಡುವುದು ನನಗೆ ಸುಲಭ. ಕಳೆದ ಐದು ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಚೀನಾ, ರಷ್ಯಾ ಸೇರಿ ಹಲವು ರಾಷ್ಟ್ರಗಳಲ್ಲಿ ಪ್ರದರ್ಶನ ನೀಡಿದ್ದೇನೆ. ವಿಮಾನದ ಮೇಲೆ ಕಸರತ್ತು ಮಾಡುವಾಗ ತೊಂದರೆಯಾಗುವುದಿಲ್ಲ. ಯಾಕೆಂದರೆ ಸುರಕ್ಷೆಗೆ ಒತ್ತು ನೀಡುತ್ತೇವೆ. ಕೈ ಸನ್ನೆಯೇ ಇಲ್ಲಿ ಎಚ್ಚರಿಕೆ. ಸನ್ನೆಯೂ ಸಹ ಸ್ಟಂಟ್‌ ರೀತಿಯೇ ಇರುತ್ತದೆ. ಹೀಗಾಗಿ ಪ್ರೇಕ್ಷಕರಿಗೆ ಸನ್ನೆ ಏನೆಂಬುದು ಗೊತ್ತಾಗುವುದಿಲ್ಲ. ಅಲ್ಲದೆ, ಸೊಂಟಕ್ಕೆ ರೋಪ್‌ ಕಟ್ಟಿಕೊಳ್ಳಲಾಗುತ್ತದೆ’ ಎಂದರು.

ಟಾಪ್ ನ್ಯೂಸ್

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್‌ ಬಾಬಾ…ರುದ್ರಾಕ್ಷಾ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Anjani, the female tiger, passed away at Tyavarekoppa sanctuary

Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

1-naxal

NIA ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಶರಣಾದ ಆರು ನಕ್ಸಲರು

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.