ತೋಟಿಮನೆ ಗಣಪತಿ ಹೆಗ್ಡೆ : ಯಕ್ಷ ಪಯಣದ ರಜತ ಸಂಭ್ರಮ


Team Udayavani, Feb 17, 2017, 5:05 PM IST

Totimane-1.jpg

ತೋಟಿ ಎರಡಕ್ಷರದ ಶಬ್ಧ, ಯಕ್ಷಗಾನದ ಪ್ರೇಕ್ಷಕರ ವಲಯದಲ್ಲಿ ಒಂಥರಾ ಆಕರ್ಷಣೆಯ ಹೆಸರು. ಯಕ್ಷಗಾನದ ಗೆಜ್ಜೆಯ ಧ್ವನಿಗೆ ರಂಗದ ರಾಜನಾಗಿ ಮೆರೆಯುತ್ತಿರುವವರು. ನಾಯಕ, ಪ್ರತಿ ನಾಯಕ ಎರಡೂ ಪಾತ್ರದಲ್ಲಿ ಮಿಂಚುವ ಅದ್ಭುತ ಕಲಾವಿದರು. ಕಳೆದ ಎರಡೂವರೆ ದಶಕಗಳಿಂದ ನಿರಂತರವಾಗಿ ಯಕ್ಷಗಾನದಲ್ಲಿ ತೊಡಗಿಕೊಂಡವರು. ಪಾತ್ರದಲ್ಲಿ ಪರಾಕಾಯ ಪ್ರವೇಶ ಮಾಡಿದಷ್ಟು ಅಬ್ಬರ, ಸಂವೇದನೆ, ಹಾವಭಾವಗಳಲ್ಲಿ ಗೆದ್ದವರು. ಎತ್ತರ ಕಾಯ, ಕಾಯಕ್ಕೆ ಸಮವಾದ ಧ್ವನಿ, ಹಾವ ಭಾವಗಳಲ್ಲಿ ತೋಟಿ ಪಾತ್ರಕ್ಕೆ ಜೀವ ತುಂಬುವವರು. ಈ ಕಾರಣದಿಂದಲೇ ತೋಟಿ ಎಂದರೆ ಬಹು ಮಂದಿಗೆ ಪ್ರೀತಿ. ತೋಟಿ ಎಂದರೆ ಯಕ್ಷಗಾನದ ಕ್ಷೇತ್ರದ ನವ ತೋಟ. ಹಲವು ಆಸಕ್ತಿಯುವ ಮಕ್ಕಳಿಗೂ ಪ್ರೀತಿಯಿಂದ ಯಕ್ಷಗಾನವನ್ನು ಕಲಿಸಿದವರು. ಆಮೂಲಕವೂ ಯಕ್ಷಗಾನ ರಂಗಕ್ಕೆ ಹೊಸ ಹೊಸ ಕೊಡುಗೆಗಳನ್ನು ಕೊಡುತ್ತಿರುವವರು. 

ತೋಟಿ ಎಂದರೆ ತೋಟಿಮನೆ. ಹೊನ್ನಾವರ ತಾಲೂಕಿನ ಹಳ್ಳಿಯ ಹುಡುಗ ಇಂದು ರಾಜ್ಯ, ಹೊರ ರಾಜ್ಯ, ವಿದೇಶದಲ್ಲೂ ಕಲಾ ಪ್ರದರ್ಶನ ನೀಡಿದವರು. ಯಕ್ಷಗಾನದಲ್ಲಿ ತನ್ನದೇ ಆದ ಛಾಪು ಮೂಡಿಸಿ ಇದೀಗ ರಜತ ರಂಗದ ಸಂಭ್ರಮದಲ್ಲಿದ್ದಾರೆ. ಇವರ ಮೇಲಿನ ಅಭಿಮಾನಿಗಳು ಒಂದಾಗಿ ಅಭಿನಂದನಾ ಗ್ರಂಥದ ಜೊತೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಬೆಳ್ಳಿಯ ಕಿರೀಟ ಕೂಡ ತೊಡಿಸಲಿದ್ದಾರೆ. ಕಲಾರಾಧನೆಯ ಮೂಲಕ ಕಲಾಸಕ್ತರ ಮನವೂ ಗೆದ್ದವರು ತೋಟಿಮನೆ ಗಣಪತಿ ಹೆಗಡೆ ಅರ್ಥಾತ್‌ ತೋಟಿ!


ಹಾಗೆ ನೋಡಿದರೆ ತೋಟಿಮನೆ ಯಕ್ಷಗಾನಕ್ಕೆ ಬಂದಿದ್ದೇ ಆಕಸ್ಮಿಕ. ಅಪ್ಪ ಅಮ್ಮ, ಅಣ್ಣನ ಮಾತು ಕೇಳಿದ್ದರೆ ಮಗ ಓದಿ ಸರಕಾರಿ ಉದ್ಯೋಗದಲ್ಲಿರಬೇಕಿತ್ತು. ಆದರೆ, ಹಡಿನಬಾಳದ ಅಜ್ಜನಮನೆಗೆ ಬರುತ್ತಿದ್ದ ಯಕ್ಷಗಾನದ ಹಿರಿಯ ಪ್ರಸಿದ್ಧ ಕಲಾವಿದರ ಒಡನಾಟ, ಯಕ್ಷಗಾನದ ಚಂಡೆಯ ಸದ್ದಿಗೇ ಮನ ಸೋತಿತ್ತು. ಓದಿಗೆ ಗೋಲಿ ಹೊಡೆದಿತ್ತು. ಮನೆವರಿಗೆ, ಬಂಧುಗಳಿಗೆ ಗೊತ್ತಾಗದಂತೆ ಬಣ್ಣ ಬಣ್ಣದಿಂದ ಜಮಗಿಸುವ ವೇಷದ ಯಕ್ಷಗಾನದ ಪ್ರದರ್ಶನ ಕದ್ದು ನೋಡಿ ಅದೇ ಅದೇ ಪಾತ್ರವನ್ನು ಯಾರಿಗೂ ಕಾಣದಂತೆ ತಾವೂ ಅಭಿನಯಿಸುತ್ತಿದ್ದರು. ದಿನಗಳು ಉರುಳಿದಂತೆ ಯಕ್ಷಗಾನದ ಮೇಲಿನ ಪ್ರೇಮ ಬೆಳೆಯಿತು, ಬಲಿಯಿತು. ಎಷ್ಟಪಾ ಅಂದರೆ, ನಾಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದರೆ ಮುನ್ನಾದಿನ ಯಕ್ಷಗಾನ ನೋಡಿ ನೇರವಾಗಿ ಹೊನ್ನಾವರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದದ್ದೂ ಇದೆ. 

ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿಯಬೇಕು ಎಂದಾಗ ಬಂಧುವಾದ ಪ್ರಸಿದ್ಧ ಭಾಗವತರಾದ ಕಪ್ಪೆಕೆರೆ ಸುಬ್ರಾಯ ಹೆಗಡೆ ಅವರು ಮಾಣಿಗೆ ಕಲಿಸಲು ಒಪ್ಪಿದರು. ಯಕ್ಷ ಪಾಠ ಮುಗಿಯುವದರೊಳಗೆ ತರಬೇತಿ ಕೇಂದ್ರವೂ ಪೂರ್ಣ ನಡೆಯಲಿಲ್ಲ. ಕೆಲ ಕಾಲ ಮನೆಯಲ್ಲೇ ಭಾಗವತರು ಹೇಳಿಕೊಟ್ಟರು. ಹೇಗಾದರೂ ಇನ್ನಷ್ಟು ಕಲಿಕೆಗೆ ಮೇಳ ಸೇರುವ ಮನಸ್ಸು ಅರಳಿತು. ಗುಂಡಬಾಳ ಎಂಬ ಊರಿನಲ್ಲಿ ವರ್ಷದ ಎಲ್ಲ ದಿನವೂ ಯಕ್ಷಗಾನ ಆಗುತ್ತದೆ. ಅಲ್ಲಿ ಯಕ್ಷ ಪ್ರಿಯ ದೇವರು. ಅಲ್ಲಿನ ಮೇಳಕ್ಕೆ ಸೇರಲು ಯೋಜಿಸಿದರು. ಆಗ ಅಲ್ಲಿ ಮಾಡಿದ್ದು ಬಾಲಗೋಪಾಲ ವೇಷ. ವರ್ಷಗಳು ಉರುಳಿದಂತೆ ಪಾತ್ರಗಳನ್ನು ಹೆಚ್ಚೆಚ್ಚು ನೀಡುತ್ತ ಬಂದರು. ಒಮ್ಮೆ ಕಪ್ಪೆಕೆರೆ ಭಾಗವತರೇ ಇಲ್ಲಿನ ಪ್ರಧಾನ ಭಾಗವತರಾಗಿ ಬಂದಾಗ ಇವರಿಗೆ ಹಗಲು ಇನ್ನಷ್ಟು ತರಬೇತಿ, ರಾತ್ರಿ ಪ್ರದರ್ಶನದಲ್ಲಿ ಪ್ರಯೋಗ ಅವಕಾಶಗಳನ್ನು ಮಾಡಿಕೊಟ್ಟರು. ಒಂದೇ ಪ್ರಸಂಗದ ಆದರೂ ದಿನಕ್ಕೊಂದು ಬೇರೆ ಬೇರೆ ಪಾತ್ರ ಕೊಟ್ಟು ಎಲ್ಲ ಪಾತ್ರಕ್ಕೂ ಸೈ ಎನ್ನುವಂತೆ ಮಾಡಿದರು. ಅಲ್ಲಿಂದ ಮುಂದೆ ತೋಟಿ ತಿರುಗಿ ನೋಡಿದ್ದೇ ಇಲ್ಲ.


ಈ ಹೊತ್ತು ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಮೇಳದಲ್ಲಿ ಪ್ರಧಾನ ವೇಷಗಾರರು. ಅತಿಥಿ ಕಲಾವಿದರೂ ಹೌದು. ಯಕ್ಷಗಾನದಲ್ಲಿ ತೋಟಿ ಕೇವಲ ವೇಷ ಮಾಡುವದರಿಂದ ಹೆಸರು ಮಾಡಿಲ್ಲ, ಬದಲಿಗೆ ಪಾತ್ರಕ್ಕೆ ಜೀವ ತುಂಬುವ ಸಜ್ಜನರಾಗಿ ಕೂಡ ಮೆಚ್ಚುಗೆಗೆ ಪಾತ್ರರಾಗಿ¨ªಾರೆ. ಒಂದು ಕಾಲಕ್ಕೆ ಸ್ತ್ರೀ ವೇಷ, ಹಾಸ್ಯ ಪಾತ್ರಗಳನ್ನೂ ಮಾಡಿದ್ದ ತೋಟಿಮನೆ ಇಂದು ನಾಯಕ, ಪ್ರತಿನಾಯಕ ಪಾತ್ರದಲ್ಲಿ ಹೆಸರು ವಾಸಿ. ಕಂಸವಧೆಯ ಕೃಷ್ಣ, ಅಕ್ರೂರ, ಕಂಸನಾಗಿ, ಸುಧನ್ವಾರ್ಜುನದ ಸುಧನ್ವ, ಅರ್ಜುನ, ಕೃಷ್ಣನಾಗಿ, ಬಸ್ಮಾಸುರ ವಧೆಯ ಈಶ್ವರ, ವಿಷ್ಣು, ಬಸ್ಮಾಸುರನಾಗಿ, ಶ್ರೀಕೃಷ್ಣ ಸಂಧಾನದ ಕೃಷ್ಣ, ಕೌರವ, ಭೀಮನಾಗಿ ಹೀಗೆ ಯಾವುದೇ ಪಾತ್ರ ಕೊಟ್ಟರೂ ಸೈ. ತೋಟಮನೆಗೆ ಖ್ಯಾತ ಕೊಟ್ಟ ಪಾತ್ರಗಳು ಹನುಮಂತನದ್ದು. ಲಂಕಾ ದಹನದ ಹನುಮಂತ ಇವರ ಇಷ್ಟದ ಪಾತ್ರ. ಹನುಮಂತ, ಬಸ್ಮಾಸುರ, ಮಾಗಧ, ಲಕ್ಷ್ಮಣ, ಕಂಸ, ಋತುಪರ್ಣನಂತಹ ಪಾತ್ರಗಳು ಹೆಸರು ಕೊಟ್ಟಿವೆ, ಕೊಡುತ್ತಿವೆ.

ಯಕ್ಷಗಾನದ ದಿಗ್ಗಜರಾದ ಶಂಭು ಹೆಗಡೆ, ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೊಂಡದಕುಳಿ ರಾಮಚಂದ್ರ ಹೆಗಡೆ, ಕೃಷ್ಣಯಾಜಿ ಬಳಕೂರು ಅವರಂತಹ ದಿಗ್ಗಜರ ಒಡನಾಟದಲ್ಲಿ ಬೆಳೆದ ತೋಟಿ  ಅವರು ಕೊಂಡದಕುಳಿ ರಾಮಚಂದ್ರ ಹೆಗಡೆ ಅವರಿಂದ ಪಾತ್ರ ಪ್ರವೇಶಿಕೆ ಕುರಿತು ಕಲಿತದ್ದು ಹೆಚ್ಚು ಎಂದೂ ವಿನಂಮ್ರವಾಗಿ ಹೇಳುತ್ತಾರೆ. ಮುಂಬಯಿ, ಹೈದರಾಬಾದ್‌, ಕೊಚ್ಚಿ, ದೆಹಲಿ ಮಾತ್ರವಲ್ಲ, ಅಬುದಬಿ, ಶಾರ್ಜಾ, ಸಿಂಗಾಪುರ, ಅಮೇರಿಕಾದಲ್ಲೂ ಯಕ್ಷಗಾನದ ಪ್ರೀತಿ ಬೆಳೆಗಿಸಿದವರು. ನಮ್ಮ ಜೊತೆ ತೋಟಿ ಜೋಡಿ ಆದರೆ ಚಲೋ ಇತ್ತು ಹ್ವಾಹ್‌ ಅನ್ನೋ ಹಿರಿಯ ಕಲಾವಿದರೂ ಇದ್ದಾರೆ. ಪಂಚಲಿಂಗ ಮೇಳದಲ್ಲಿ ತೋಟಿಮನೆ ಅವರನ್ನು ನಿರ್ಲಕ್ಷಿಸಿದ್ದ ಕಲಾವಿದರೊಬ್ಬರೇ ನಮ್ದು ತೋಟಿ ಜೋಡಿ ಮಾಡಿ ಎಂದು ಸಂಘಟಕರಲ್ಲಿ ಮನವಿ ಮಾಡಿದ್ದೂ ಇದೆ.


ಕಲಾ ಸಾಧನೆಯ ಬದುಕಿನಲ್ಲಿ ಏಳು ಬೀಳುಗಳ ಮಧ್ಯೆ ಬೆಳೆದ ತೋಟಿಮನೆ ಎಲ್ಲವನ್ನೂ ಪ್ರೀತಿಯಿಂದಲೇ ಸ್ವೀಕರಿಸುತ್ತಾರೆ. ಅನೇಕ ಸನ್ಮಾನ, ಅಭಿನಂದನೆಗಳ ಜೊತೆಗೆ ಶೇಣಿ ಗೋಪಾಲಕೃಷ್ಣರಾಯರಂತವರ ಮೆಚ್ಚುಗೆ ಧನ್ಯತೆ ಮೂಡಿಸಿದೆ ಎಂದೂ ಘಟನೆ ವಿವರಿಸುತ್ತಾರೆ. ನಾಳೆ 19ಕೆ ಮುಗ್ವಾದಲ್ಲಿ ತೋಟಿ ರಜತ ರಂಗ ಅಭಿನಂದನೆ, ಗ್ರಂಥ ಬಿಡುಗಡೆ ಆಗಲಿದೆ. 
ಮನೆ ಮಂದಿಯಿಂದ ತಪ್ಪಿಸಿಕೊಂಡು ಯಕ್ಷಗಾನ ನೋಡಿ ಆಸಕ್ತಿ ಬೆಳಸಿಕೊಂಡು ಇಷ್ಟು ಎತ್ತರಕೆ ಏರಿದ ಮಾಣಿ ಜನರಿಂದಲೇ ಅಭಿನಂದನೆಗೆ ಪಾತ್ರರಾಗುತ್ತಿದ್ದಾರೆ. ಯಕ್ಷಗಾನ ಹಾಗೂ ಜನ ಕೊಟ್ಟ ಪ್ರೀತಿ ಅದು. ಒಂದು ಅಭಿನಂದನೆ ನೀವೂ ಹೇಳಬಹುದು – 9448931362

– ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

12-google-search

Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.