2026ರ ಫುಟ್ಬಾಲ್ ವಿಶ್ವಕಪ್‌ಗೆ 4 ದೇಶಗಳ ಆತಿಥ್ಯ?
Team Udayavani, Feb 18, 2017, 3:45 AM IST
ಲಂಡನ್: ಜಾಗತಿಕ ಫುಟ್ಬಾಲ್ ಮಂಡಳಿ ಫಿಫಾದಲ್ಲಿ ಹಲವು ರಚನಾತ್ಮಕ ಬದಲಾವಣೆ ಮಾಡಿರುವ ಹೊಸ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಮತ್ತೂಂದು ಮಹತ್ವದ ಪರಿವರ್ತನೆಗೆ ಮುಂದಾಗಿದ್ದಾರೆ.
ಇದುವರೆಗೆ ಕೇವಲ ಒಂದು ರಾಷ್ಟ್ರದ ಆತಿಥ್ಯದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ನಾಲ್ಕಾರು ದೇಶಗಳ ಸಹಯೋಗದಲ್ಲಿ ನಡೆಸಲು ಚಿಂತಿಸಿದ್ದಾರೆ. ಇದರಿಂದ ಫುಟ್ಬಾಲ್ ಜನಪ್ರಿಯತೆ ಜಾಸ್ತಿಯಾಗುತ್ತದೆ, ಹಲವು ದೇಶಗಳಲ್ಲಿ ಫುಟ್ಬಾಲ್ ಅಭಿವೃದ್ಧಿ ಮಾಡಲು ನೆರವಾಗುತ್ತದೆ ಎಂಬುದು ಅವರ ಯೋಚನೆ.ಎಲ್ಲ ಅಂದುಕೊಂಡಂತೆ ನಡೆದರೆ 2026ರ ವಿಶ್ವಕಪ್ 4 ದೇಶಗಳ ಸಹಯೋಗದಲ್ಲಿ ನಡೆಯಲಿದೆ. ಈಗಾಗಲೇ ಕೆನಡಾ, ಅಮೆರಿಕ, ಮೆಕ್ಸಿಕೊ ಇಂಥದೊಂದು ಸಾಧ್ಯತೆಯ ಬಗ್ಗೆ ಮಾತುಕತೆ ನಡೆಸಿವೆ. ಈಗಾಗಲೇ ಯೂರೋ ಕಪ್ ಹಲವು ದೇಶಗಳ ಆತಿಥ್ಯದಲ್ಲಿ ನಡೆಯುತ್ತಿರುವುದು ಗಮನಾರ್ಹ. 2020ರ ಯೂರೋ ಕಪ್ ಪಂದ್ಯಾವಳಿಯಂತೂ 13 ರಾಷ್ಟ್ರಗಳ 13 ಮೈದಾನದಲ್ಲಿ ನಡೆಯಲಿದ್ದು, ಭಾರೀ ಸದ್ದು ಮಾಡಿದೆ.
ಗಿಯಾನಿ ಅಧ್ಯಕ್ಷರಾದ ಹೊಸತರಲ್ಲೇ ಹಲವು ರಚನಾತ್ಮಕ ನಿರ್ಧಾರ ಮಾಡಿದ್ದರು. ಅವರದೇ ಮಾರ್ಗದರ್ಶನದಲ್ಲಿ ವಿಶ್ವಕಪ್‌ಗ್ಳಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಅಂದರೆ ಇದುವರೆಗೆ ಭಾಗವಹಿಸುತ್ತಿದ್ದ 32 ತಂಡಗಳ ಬದಲು 48 ತಂಡಗಳಿಗೆ ಅವಕಾಶ ನೀಡಲು ಗಿಯಾನಿ ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.