ಕರ್ಣಾಟಕ ಬ್ಯಾಂಕ್ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅನುಷ್ಠಾನ
Team Udayavani, Feb 18, 2017, 3:45 AM IST
ಮಂಗಳೂರು: ಕರ್ಣಾಟಕ ಬ್ಯಾಂಕ್ ವತಿಯಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಎಂಬ ಯೋಜನೆಯನ್ನು ಫೆ. 16ರಂದು ಅನುಷ್ಠಾನಿಸ ಲಾಯಿತು. ವಯೋವೃದ್ಧರಿಗೆ ಪಿಂಚ ಣಿಯ ಮೂಲಕ ನಿರಂತರ ಆದಾಯದ ಸಾಮಾಜಿಕ ಭದ್ರತೆಯನ್ನು ಒದಗಿಸಲು ಈ ಯೋಜನೆಯನ್ನು ಭಾರತ ಸರಕಾರ ರೂಪಿಸಿದೆ.
ಉದ್ಯೋಗದಲ್ಲಿರುವಾಗಲೇ ಈ ಯೋಜನೆಗೆ ಮೊತ್ತ ತುಂಬುತ್ತಾ; 60 ವರ್ಷ ವಯಸ್ಸಾದಾಗ ಪಿಂಚಣಿ
ಪಡೆಯಬಹುದಾಗಿದೆ. ಇತರ ಪಿಂಚಣಿ ಯೋಜನೆಗಳಿಗೆ ಪಾವತಿಸುತ್ತಿದ್ದರೂ, ಹೂಡಿಕೆದಾರರು ಇಲ್ಲಿ 50 ಸಾವಿರ ರೂ.
ವರೆಗೆ ತೆರಿಗೆ ವಿನಾಯಿತಿ ಪಡೆಯ ಬಹುದು. ಅಸಂಘಟಿತ ವಲಯದ ವೇತನದಾರರಿಗೆ ಕೂಡಾ ಇದು ಅನುಕೂಲಕರವಾಗಿದೆ.
ಈ ಯೋಜನೆಯ ಮೂಲಕ ಜನ ಸಾಮಾನ್ಯರಿಗೆ ವಿಶೇಷ ಸೇವೆ ಸಲ್ಲಿಸುವ ಬಗ್ಗೆ ಸಂತಸವಾಗಿದೆ ಎಂದು ಬ್ಯಾಂಕಿನ
ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್ ಅವರು ಈ ಸಂದರ್ಭ ದಲ್ಲಿ ಹೇಳಿದರು. ಈಗ ಆಯ್ದ ಶಾಖೆಗಳಲ್ಲಿದು ಲಭ್ಯವಾಗಿದ್ದು, ಹಂತಗಳಲ್ಲಿ ಎಲ್ಲಾ ಶಾಖೆಗಳಲ್ಲಿ ಲಭ್ಯವಿರುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.