ಮಂಗಳೂರು ವಿಮಾನ ನಿಲ್ದಾಣ ಆನ್‌ಲೈನ್ ಕಸ್ಟಮ್ಸ್ ಗೈಡ್‌ಗೆ ಚಾಲನೆ
Team Udayavani, Feb 18, 2017, 3:45 AM IST
ಮಂಗಳೂರು/ಬಜಪೆ: ಜಗತ್ತಿನಾದ್ಯಂತ ಇರುವ ವಿಮಾನ ಪ್ರಯಾಣಿಕರಿಗೆ ಕಸ್ಟಮ್ಸ್ ಕಾನೂನು ನಿಯಮಾವಳಿಗಳ ಕುರಿತು ಮಾಹಿತಿ ನೀಡಲು ಅನುಕೂಲವಾಗುವಂತೆ ಆನ್‌ಲೈನ್ ಕಸ್ಟಮ್ಸ್ ಗೈಡ್ (ಮಾರ್ಗಸೂಚಿ) ಆರಂಭಿಸಲಾಗಿದ್ದು, ಅದನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಂಗಳೂರು ವಲಯದ ಚೀಫ್ ಕಸ್ಟಮ್ಸ್ ಕಮಿಷನರ್ ರಾಜೀವ್ ಭೂಷಣ್ ತಿವಾರಿ ಉದ್ಘಾಟಿಸಿದರು.
ಒಂದು ಉತ್ತಮ ಹೆಜ್ಜೆ
ಅಂತಾರಾಷ್ಟ್ರೀಯ ಪ್ರಯಾಣಿಕರು ವಿಮಾನ ಏರುವ ಮೊದಲೇ ಕಸ್ಟಮ್ಸ್ ನಿಯಮಾವಳಿಗಳ ಬಗ್ಗೆ ತಿಳಿದುಕೊಳ್ಳಲು ಇಲಾಖೆ ಈ ವ್ಯವಸ್ಥೆ ಮಾಡಿರುವುದು ಒಂದು ಉತ್ತಮ ಹೆಜ್ಜೆ. ಮಂಗಳೂರು ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳು ಗಲ್ಫ್ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುತ್ತಿರುವುದರಿಂದ ಈ ಎರಡು ವಿಮಾನ ನಿಲ್ದಾಣಗಳಿಗೆ ಹೆಚ್ಚಿನ ಮಹತ್ವವಿದೆ.
ಕಸ್ಟಮ್ಸ್ ಸುಂಕ ಪಾವತಿಗೆ ಸಂಬಂಧಿಸಿ ಪ್ರಯಾಣಿಕರು ಮತ್ತು ಕಸ್ಟಮ್ಸ್ ಅಧಿಕಾರಿಗಳ ನಡುವಣ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಡಿಜಿಟಲೈಸೇಶನ್ ಮತ್ತು ಎಲೆಕ್ಟ್ರಾನಿಕ್ ವಿಧಾನ ಅನುಸರಿಸುವಂತೆ ಕಳೆದ ಒಂದು ದಶಕದಿಂದ ನಾವು ಆಗ್ರಹಿಸುತ್ತಲೇ ಬಂದಿದ್ದೆವು ಎಂದು ರಾಜೀವ್ ಭೂಷಣ್ ತಿವಾರಿ ಹೇಳಿದರು.
ಕಸ್ಟಮ್ಸ್ ನಿಯಮಾವಳಿಗಳನ್ನು ಪ್ರಯಾಣಿಕರು ಅರ್ಥ ಮಾಡಿಕೊಂಡ ಬಗೆ, ವ್ಯವಹಾರ ಮತ್ತು ಅವರ ವರ್ತನೆಗೆ ಸಂಬಂಧಿಸಿ ಕಳೆದ ವರ್ಷ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಶೇ. 89ರಷ್ಟು ಪ್ರಯಾಣಿಕರು ಕಸ್ಟಮ್ಸ್ ಅಧಿಕಾರಿಗಳ ಸೇವೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದರು.
ಗೋದಾಮು ಕೊರತೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಗೋದಾಮುಗಳ ಕೊರತೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಗಮನಹರಿಸಿ ಅತೀ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಆರ್.ಬಿ. ತಿವಾರಿ ಹೇಳಿದರು.
ಹೊಸ ಸ್ಕ್ಯಾನರ್ ಉದ್ಘಾಟನೆ ಅತ್ಯಾಧುನಿಕ ತಂತ್ರಜ್ಞಾನದ ಸ್ಕ್ಯಾನಿಂಗ್ ಯಂತ್ರವನ್ನು ಅವರು ಈ ಸಂದರ್ಭ ಉದ್ಘಾಟಿಸಿದರು. ಪ್ರಯಾಣಿಕರ ಲಗೇಜ್‌ನಲ್ಲಿರುವ ಪ್ರತಿ ವಸ್ತುವನ್ನೂ ತೋರಿಸುವ ಸಾಮರ್ಥ್ಯ ಈ ಸ್ಕ್ಯಾನರ್‌ಹೊಂದಿದೆ.
ಜಗತ್ತಿನ ಕೆಲವೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಾತ್ರ ಇಂತಹ ಯಂತ್ರೋಪಕರಣ ಇದೆ.
10 ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆ ಮಂಗಳೂರು ವಿಮಾನ ನಿಲ್ದಾಣ 2006ರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಧಿಗೇರಿದ ಬಳಿಕ ಕಳೆದ ಹತ್ತು ವರ್ಷಧಿಗಳಲ್ಲಿ ಗಮನಾರ್ಹ ಬೆಳವಣಿಗೆ ದಾಖಲಿಸಿದೆ. ಒಂದೊಮ್ಮೆ ವಾರಧಿದಲ್ಲಿ 3 ವಿಮಾನಗಳು ಕಾರ್ಯಾಧಿಚರಿಸುತ್ತಿದ್ದ ನಿಲ್ದಾಣದಲ್ಲಿ ಈಗ 58 ವಿಮಾನಗಳು ಸೇವೆ ಒದಗಿಸುಧಿತ್ತಿವೆ. 2016-17ರಲ್ಲಿ 17 ಲಕ್ಷ ಪ್ರಯಾಧಿಧಿಣಿಕರು ವಿಮಾನದಲ್ಲಿ ಪ್ರಯಾಧಿಣಿಧಿಸಿದ್ದು, ಈ ವರ್ಷ ಅದು ಶೇ. 10ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಹೇಳಿದರು.
ಮಂಗಳೂರು ಕಸ್ಟಮ್ಸ್ ಕಮಿಷಧಿನರ್ ಡಾ| ಎಂ. ಸುಬ್ರಹ್ಮಣ್ಯಂ ಪ್ರಸ್ತಾಧಿವನೆಧಿಗೈದು, ಅಡಿಶನಲ್ ಕಮಿಷನರ್ ರೀನಾ ಶೆಟ್ಟಿ ಸ್ವಾಗತಿಸಿದರು. ಡೆಪ್ಯುಟಿ ಕಮಿಷನರ್ ಪ್ರವೀಣ್ ವಿನೋದ್ ಕಾರ್ಯಕ್ರಮ ನಿರ್ವಹಿಸಿದರು.
ವಾರಸುದಾರ ರಹಿತ ಸರಂಜಾಮು ವಿಲೇವಾರಿ ವ್ಯವಸ್ಥೆ
ಕಸ್ಟಮ್ಸ್ ಇಲಾಖೆಗೆ ಬರುವ ವಾರಸುದಾರ ರಹಿತ ಸರಂಜಾಮು ಘೋಷಣೆ (ಅನ್‌ಅಕಾಂಪನೀಡ್ ಬ್ಯಾಗೇಜ್ ಡಿಕ್ಲರೇಶನ್ಸ್) ಮಾಡಲು ಹೊಸ ವ್ಯವಸೆœಯನ್ನು ಪಣಂಬೂರಿನ ಕಸ್ಟಮ್ಸ್ ಹೌಸ್‌ನಲ್ಲಿ ಶುಕ್ರವಾರ ಸಂಜೆ ಆರಂಭಿಸಲಾಗಿದೆ. ಈ ವ್ಯವಸ್ಥೆಗೆ ಚಾಲನೆ ನೀಡುವ ಸಮಾರಂಭದಲ್ಲಿ ಕಸ್ಟಮ್ಸ್ ಕಮಿಷನರ್ ಡಾ| ಎಂ. ಸುಬ್ರಹ್ಮಣ್ಯಂ, ಎನ್‌ಎಂಪಿಟಿ ಉಪಾಧ್ಯಕ್ಷ ಸುರೇಶ್ ಪಿ. ಶಿರ್ವಾಡ್ಕರ್, ಸಿಡಬುÉÂಸಿ ಮೆನೇಜರ್ ಕೃಷ್ಣಪ್ಪ ಉಪಸ್ಥಿತರಿದ್ದರು.
ಟ್ವಿಟರ್, ಫೇಸ್‌ಬುಕ್
ಬಹುತೇಕ ಪ್ರಯಾಣಿಕರು ಬ್ಯಾಗೇಜ್ ನಿಯಮಾವಳಿಗಳ ಕುರಿತು ಎಲೆಕ್ಟ್ರಾನಿಕ್ ಮಾಧ್ಯಮದ ಮಾಹಿತಿ ಬಯಸುತ್ತಿದ್ದಾರೆ. ಈ ಆನ್‌ಲೈನ್ (ವೆಬ್ ಪೋರ್ಟಲ್) ವ್ಯವಸ್ಥೆಯಿಂದ ಪ್ರಯಾಣಿಕರ ಬೇಡಿಕೆಗಳು ಈಡೇರಲಿವೆ. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿಯೂ ನಾವು ಲಭ್ಯವಿದ್ದು, ಪ್ರತಿ 10ರಿಂದ 15 ದಿನಗಳಿಗೊಮ್ಮೆ ಪ್ರಶ್ನೆಗಳಿಗೆ ಉತ್ತರಿಸಲಾಗುವುದು ಎಂದವರು ವಿವರಿಸಿದರು.
ಕಸ್ಟಮ್ಸ್ ಇಲಾಖೆಯ ಕಾರ್ಯ ನಿರ್ವಹಣೆಯಲ್ಲಿ ಈಗ ಗಮನಾರ್ಹ ಬದಲಾವಣೆಗಳಾಗಿವೆ. ಒಂದು ಕಾಲದಲ್ಲಿ ಶೇ. 200ರಷ್ಟು ಕಸ್ಟಮ್ಸ್ ಸುಂಕ ವಿಧಿಸಲಾಗುತ್ತಿದ್ದು, ದೇಶದೊಳಗೆ ಏನನ್ನೂ ತರುವುದಕ್ಕೆ ಅಸಾಧ್ಯವಾಗಿತ್ತು. 1970 ಮತ್ತು 80ರ ದಶಕಗಳಲ್ಲಿ ಪ್ರಯಾಣಿಸಿದ ಪ್ರಯಾಣಿಕರನ್ನು ವಿಚಾರಿಸಿದರೆ ಕಸ್ಟಮ್ಸ್ ಅಧಿಕಾರಿಗಳಿಂದ ಉಂಟಾದ ಸಮಸ್ಯೆಗಳನ್ನು ಅವರು ವಿವರಿಸುತ್ತಾರೆ. ಆದರೆ ಇಂದು ಅಂತಹ ಯಾವುದೇ ದೂರುಗಳು ಇಲ್ಲವೆಂದೇ ಹೇಳಬಹುದು ಎಂದರು. ಕಸ್ಟಮ್ಸ್ ಆನ್‌ಲೈನ್ ಗೈಡ್ ವಿಳಾಸ: www.customsmangalore.gov.in/baggage
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.