ತುಳುನಾಡಿನ ವಯಲಿನ್ ಪ್ರತಿಭೆ ರಾಜೇಶ್ ಕುಂಭಕೋಡು
Team Udayavani, Feb 18, 2017, 7:26 AM IST
ಹಿತ್ತಲ ಗಿಡ ಮದ್ದಲ್ಲ ಅನ್ನುವ ಗಾದೆ ಮಾತೊಂದಿದೆ. ತನ್ನೂರಿನಲ್ಲಿ ಗುರುತಿಸಲ್ಪಡದೇ ದೂರದ ಚೆನ್ನೈ ಮಹಾನಗರದಲ್ಲಿ ಕುಳಿತು ಸಂಗೀತ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡುತ್ತಿರುವ ವಯಲಿನ್ ವಾದಕ ರಾಜೇಶ್ ಕುಂಭಕೋಡು ಅವರು ಈ ಮಾತಿಗೆ ಸಾಕ್ಷಿ ಎಂದರೆ ತಪ್ಪಾಗಲಾರದು. ವಯಲಿನ್ ಕಲಿಯುವ ಏಕೈಕ ಗುರಿಯೊಂದಿಗೆ ಬರಿಗೈಯಲ್ಲಿ ಚೆನ್ನೈಗೆ ತೆರಳಿದ ಇವರನ್ನು ಸಂಗೀತ ಮಾತೆ ಕೈ ಹಿಡಿದು ಆಸರೆ ನೀಡಿದ್ದಾಳೆ. ಇವರ ಬೆರಳುಗಳ ಮಾಂತ್ರಿಕ ಸ್ಪರ್ಶದಿಂದ ನಾಲ್ಕು ತಂತಿಗಳು ಮಾತನಾಡುತ್ತವೆ, ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತವೆ, ಗಾನಲೋಕದಲ್ಲಿ ಮೈಮರೆಸಿ ಗಂಧರ್ವ ಲೋಕಕ್ಕೆ ಕರೆದೊಯ್ಯುತ್ತವೆ. ವಯಲಿನ್ ತಂತಿಗಳನ್ನು ಮೀಟುತ್ತಾ ನಾದ ಹೊಮ್ಮಿಸುವ ಸಂಗೀತದ ಕಲೆ ಇವರಿಗೆ ಸಿದ್ಧಿಸಿದೆ. ಆದರೆ ಇವರ ಪ್ರತಿಭೆ ಹುಟ್ಟೂರಿನಲ್ಲಿ ಬೆಳಕಿಗೆ ಬರಲೇ ಇಲ್ಲ, ಅದಕ್ಕೆ ಸರಿಯಾದ ವೇದಿಕೆ ಹಾಗೂ ಮನ್ನಣೆಯೂ ಹುಟ್ಟೂರಿನಲ್ಲಿ ಸಿಕ್ಕಿಲ್ಲವೆನ್ನುವುದು ವಿಷಾದನೀಯ.
ಸುಳ್ಯದ ಭಜನಾ ಮಂದಿರದಲ್ಲಿ ಕಾಸರಗೋಡಿನ ವಾಸುದೇವ ಆಚಾರ್ಯರ ಬಳಿ ವಯಲಿನ್ ಕಲಿಕೆ ಆರಂಭಿಸಿದ ಇವರು ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ಉದ್ದೇಶದಿಂದ ತಮಿಳುನಾಡಿನ ಖ್ಯಾತ ವಯಲಿನ್ ವಾದಕಿ, ಸಂಗೀತ ಕಲಾನಿಧಿ, ಕಲೈಮಾಮಣಿ, ಪದ್ಮಶ್ರೀ ಎ. ಕನ್ಯಾಕುಮಾರಿಯವರ ಶಿಷ್ಯರಾಗಿ ಕಲಿಕೆ ಮುಂದುವರಿಸುವ ಬಯಕೆ ಹೊಂದಿದ್ದರು. ತನ್ನ ಮನೋಭಿಲಾಷೆಯನ್ನು ಆತ್ಮೀಯರಾದ ಸುಳ್ಯದ ಪುರೋಹಿತ ನಟರಾಜ್ ಶರ್ಮರಲ್ಲಿ ಹೇಳಿಕೊಂಡಾಗ, ಕನ್ಯಾಕುಮಾರಿಯವರನ್ನು ಸಂಪರ್ಕಿಸಿ ಅವರ ಶಿಷ್ಯರಾಗಿ ಚೆನ್ನೈಯಲ್ಲಿ ನೆಲೆಸುವುದಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನೂ ಅವರು ಮಾಡಿಕೊಟ್ಟಿದ್ದರು. ಆ ಬಳಿಕ ತನ್ನ ಸಾಧನಾ ಪಥದಲ್ಲಿ ಹಿಂದಿರುಗಿ ನೋಡದ ರಾಜೇಶ್ ಸಂಗೀತ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆಯುತ್ತಾ ಬಂದಿದ್ದಾರೆ. ಇದೀಗ ಹೆಸರಾಂತ ಕಲಾವಿದರ ಕಛೇರಿಗಳಲ್ಲಿ ಪಕ್ಕವಾದ್ಯ ಕಲಾವಿದನಾಗಿ ವಯಲಿನ್ ನುಡಿಸುವುದರ ಜತೆಗೆ ನೂರಾರು ಮಂದಿ ಶಿಷ್ಯ ವರ್ಗಕ್ಕೆ ವಯಲಿನ್ ತರಗತಿ ನಡೆಸಿಕೊಡುತ್ತಿ¨ªಾರೆ. ಪ್ರಸ್ತುತ ಚೆನ್ನೈಯಲ್ಲಿ 60 ಮಂದಿ ವಿದ್ಯಾರ್ಥಿಗಳು ಇವರಿಂದ ವಯಲಿನ್ ತರಬೇತಿ ಪಡೆಯುತ್ತಿ¨ªಾರೆ. ಚೆನ್ನೈ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಕೂಡ ತಮ್ಮ ಶಿಷ್ಯರÇÉೊಬ್ಬರು ಅನ್ನುವ ಹೆಗ್ಗಳಿಕೆ ಇವರದ್ದು! ಇದರ ಜತೆಗೆ ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕವೂ ತರಗತಿ ನಡೆಸಿಕೊಡುತ್ತಿ¨ªಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ 10 ಮಂದಿ, ಅಬುಧಾಬಿಯ ಮೂವರು, ಸ್ವಿಟ್ಜರ್ಲೆಂಡ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳು ಅಂತರ್ಜಾಲದ ಮೂಲಕ ಇವರಿಂದ ವಯಲಿನ್ ಕಲಿಯುತ್ತಿದ್ದು ಇವರ ಪೈಕಿ ಇಬ್ಬರು ಶಿಷ್ಯರು ಅಮೆರಿಕದ ಕ್ಲೀವ್ ಲ್ಯಾಂಡ್ ಸಂಗೀತ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಹಾಗೂ ಇನ್ನೊಬ್ಬ ವಿದ್ಯಾರ್ಥಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಮೂವರು ವಿದ್ಯಾರ್ಥಿಗಳು ಕೇಂದ್ರ ಸರಕಾರದಿಂದ ಸಿಸಿಆರ್‌ಟಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಗಳಿಸಿರುತ್ತಾರೆ. ಚೆನ್ನೈಯ ವಿದ್ಯಾರ್ಥಿಗಳು ಕೂಡ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ. ಅಂತರ್ಜಾಲ ತರಗತಿಗೆ ಮತ್ತಷ್ಟು ಬೇಡಿಕೆ ಬರುತ್ತಿದ್ದು ಸಮಯದ ಅಭಾವದಿಂದ ಎಲ್ಲರ ಬೇಡಿಕೆಗಳನ್ನು ರಾಜೇಶ್ ಅವರಿಗೆ ಪೂರೈಸಲಾಗುತ್ತಿಲ್ಲ.
ಈ ತನಕ ರಾಜೇಶ್ ಚೆನ್ನೈ, ತಿರುಪತಿ, ಹೈದರಾಬಾದ್, ಬೆಂಗಳೂರು, ಮುಂಬೈ ಮೊದಲಾದ ಕಡೆ ಹಲವಾರು ಪ್ರಮುಖ ಕಲಾವಿದರಿಗೆ ಸಾಥಿಯಾಗಿ, ಗಣ್ಯರ ಸಮ್ಮುಖದಲ್ಲಿ ವಯಲಿನ್ ನುಡಿಸಿದ್ದಾರೆ. ಮಾತ್ರವಲ್ಲದೆ ಮುಂದಿನ ಎಪ್ರಿಲ್ ತಿಂಗಳಲ್ಲಿ ಕಛೇರಿ ನಿಮಿತ್ತ ಅಬುಧಾಬಿಗೂ ತೆರಳಲಿ¨ªಾರೆ. ಸರಿಸುಮಾರು ಹತ್ತು ವರ್ಷಗಳ ಹಿಂದೆ ತನ್ನ ಮನೆಯಲ್ಲಿ, ತನ್ನೂರಿನ ದೇಗುಲಗಳಲ್ಲಿ ಕ್ಯಾಸೆಟ್ ಅಥವಾ ಸಿಡಿಗಳ ಮೂಲಕ ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಅವರ ಹಾಡುಗಳನ್ನು ಕೇಳಿ ಮೈಮರೆಯುತ್ತಿದ್ದ ಯುವಕ ಇಂದು ಅದೇ ವಿದ್ಯಾಭೂಷಣರ ಸಂಗೀತ ಕಛೇರಿಗೆ ವಯಲಿನ್ ವಾದಕರಾಗಿ ಸಹಕರಿಸುತ್ತಾ ಅವರ ಜತೆಗೆ ವೇದಿಕೆ ಹಂಚಿಕೊಂಡು ಅವರಿಂದಲೇ ಬೆನ್ನುತಟ್ಟಿಸಿಕೊಳ್ಳುತ್ತಿ¨ªಾರೆ! ಅಂದು ರೇಡಿಯೋದಲ್ಲಿ ಕನ್ಯಾಕುಮಾರಿಯವರ ವಯಲಿನ್ ಕಛೇರಿಯನ್ನು ಆಲಿಸುತ್ತಾ ಕನಸು ಕಾಣುತ್ತಿದ್ದ ಇವರು ಇಂದು ಅದೇ ಕನ್ಯಾಕುಮಾರಿಯವರ ಶಿಷ್ಯರಾಗಿ ಜನಮನ್ನಣೆ ಗಳಿಸಿ ಎತ್ತರಕ್ಕೇರಿ¨ªಾರೆ! ಕಲಾತಪಸ್ಸು, ಸಾಧನೆ ಅಂದರೆ ಇದೇ ತಾನೇ?
ಸಂಗೀತ ಸಾಧನೆಗೆ ಸಂದ ಗೌರವ
ಇವರ ಸಂಗೀತ ಸಾಧನೆಯನ್ನು ಮೆಚ್ಚಿ ಆಲ್ ಇಂಡಿಯಾ ರೇಡಿಯೋದಿಂದ ಬಿ ಗ್ರೇಡ್ ಮಾನ್ಯತೆ ಸಿಕ್ಕಿದೆ, ಕಂಚಿ ಕಾಮಕೋಟಿ ಪೀಠದಿಂದ ಆಸ್ಥಾನ ವಿದ್ವಾನ್ ಗೌರವ ಲಭಿಸಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರಿನಲ್ಲಿ ನಡೆದ ಕೊಂಕಣಿ ಯುವಜನೋತ್ಸವ ಸಮಾರಂಭದಲ್ಲಿ ವಿಶೇಷವಾಗಿ ಸಮ್ಮಾನಿತರಾಗಿ¨ªಾರೆ.
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಂಭಕೋಡು ಗೋಪಾಲಕೃಷ್ಣ ನಾಯಕ್ ಮತ್ತು ವಿಜಯಾ ದಂಪತಿಯ ಪುತ್ರರಾಗಿರುವ ಈ ಸಂಗೀತ ಸಾಧಕನ ವಿಶೇಷ ಪ್ರತಿಭೆ ಇನ್ನಷ್ಟು ಬೆಳೆಯಲಿ.
ಉದಯ ಭಾಸ್ಕರ್, ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.