ಮನಸು ತಟ್ಟಿತು ಮಲ್ಲಿಗೆಯ ಹಾಡುಗಳು!


Team Udayavani, Feb 18, 2017, 11:48 AM IST

Manasu-Mallige.jpg

“ಪ್ರೇಮಿಗಳ ದಿನದಂದು  ಪ್ರೇಮಿಗಳಿಗೋಸ್ಕರ…’  ಹೀಗೊಂದು ವಾಕ್ಯದೊಂದಿಗೆ ಆ ಸಿನಿಮಾದ ಕಲರ್‌ಫ‌ುಲ್‌ ಪೋಸ್ಟರ್‌ವೊಂದನ್ನು ಹಾಕಿ ಜಾಹಿರಾತು ಕೊಡಲಾಗಿತ್ತು. ಎಲ್ಲರೂ ವ್ಯಾಲೆಂಟೈನ್ಸ್‌ ದಿನ ಆ ಸಿನಿಮಾ ರಿಲೀಸ್‌ ಆಗಬಹುದು ಅಂತಾನೇ ಭಾವಿಸಿದ್ದರು. ಆದರೆ, ಅದು ಹಾಗಾಗಲಿಲ್ಲ. ಪ್ರೇಮಿಗಳ ದಿನ ಬಂತು. ಆದರೆ, ಅಂದು ಆ ಸಿನಿಮಾ ರಿಲೀಸ್‌ ಆಗಲಿಲ್ಲ. ಬದದಲಾಗಿ ಆ ಚಿತ್ರದ ಹಾಡುಗಳು ಹೊರ ಬಂದವು, ಅದರೊಂದಿಗೆ ಪ್ರೀತಿ ಬೆಸೆಯುವಂತಹ ಮತ್ತು ಭಾವನಾತ್ಮಕ ಕೆಲ ಸನ್ನಿವೇಶವಿರುವ ಟ್ರೇಲರ್‌ ಹೊರಬಂತು.

ಆ ಚಿತ್ರದ ಹಾಡು ಕೇಳಿದವರು, ಟ್ರೇಲರ್‌ ನೋಡಿದವರು ಖುಷಿಗೊಂಡರು. ಜೋರು ಚಪ್ಪಾಳೆ ತಟ್ಟಿದರು, ಶಿಳ್ಳೆ ಹಾಕಿದರು, ಒನ್ಸ್‌ಮೋರ್‌ ಅಂದರು… ಇಷ್ಟಕ್ಕೆಲ್ಲಾ ಕಾರಣವಾದದ್ದು “ಮನಸು ಮಲ್ಲಿಗೆ’ ಚಿತ್ರ. ಸಾಮಾನ್ಯ ಚಿತ್ರವಾಗಿದ್ದರೆ, ಇದರ ಬಗ್ಗೆ ಇಷ್ಟೊಂದು ಹೇಳುವ ಅಗತ್ಯವಿರಲಿಲ್ಲ. “ಮನಸು ಮಲ್ಲಿಗೆ’ ಎಲ್ಲರಿಗೂ ತಿಳಿದಿರುವಂತೆ, ಭಾರತ ಚಿತ್ರರಂಗದಲ್ಲೇ ದಾಖಲೆ ಬರೆದ ಮರಾಠಿ ಭಾಷೆಯ “ಸೈರಾತ್‌’ ಸಿನಿಮಾದ ರಿಮೇಕ್‌.

ಎಸ್‌.ನಾರಾಯಣ್‌ ನಿರ್ದೇಶನದ ಈ ಚಿತ್ರಕ್ಕೆ ರಾಕ್‌ಲೈನ್‌ ವೆಂಕಟೇಶ್‌ ಮತ್ತು ಜೀ ಸ್ಟುಡಿಯೋಸ್‌ನ ಆಕಾಶ್‌ ಚಾವ್ಲಾ ನಿರ್ಮಾಪಕರು. ಇನ್ನು, ಈ ಚಿತ್ರಕ್ಕೆ ಮೂಲ ಚಿತ್ರದಲ್ಲಿ ನಟಿಸಿದ್ದ ರಿಂಕು ರಾಜ್‌ಗುರು ನಾಯಕಿ. ಖಳನಟ ಸತ್ಯಪ್ರಕಾಶ್‌ ಅವರ ಪುತ್ರ ನಿಶಾಂತ್‌ ನಾಯಕ. ಪ್ರೇಮಿಗಳ ದಿನದಂದು ಅದ್ಧೂರಿಯಾಗಿಯೇ ಈ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲಾಯಿತು. “ಪ್ರಮಿಗಳ ದಿನ’ದಂದೇ ಆಡಿಯೋ ರಿಲೀಸ್‌ ಮಾಡಬೇಕು ಅಂತ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮುಹೂರ್ತ ದಿನ ಹೇಳಿದ್ದರಂತೆ.

ಅದರಂತೆ, ನಾರಾಯಣ್‌ ಪಕ್ಕಾ ಪ್ಲಾನ್‌ ಮಾಡಿಕೊಂಡು ಅದೇ ದಿನ ಆಡಿಯೋ ಸಿಡಿ ಹೊರತಂದರು. ಸಚಿವ ಎಂ.ಬಿ.ಪಾಟೀಲ್‌, ಶಾಸಕ ಮುನಿರತ್ನ, ಜೀ ಸ್ಟುಡಿಯೋಸ್‌ನ ಅಶೋಕ್‌ ಚಾವ್ಲಾ, ಖಳನಟ ಸತ್ಯಪ್ರಕಾಶ್‌, ಸೇರಿದಂತೆ ಸಿನಿಮಾರಂಗದ ಹಲವು ಗಣ್ಯರು ಆಡಿಯೋ ಸಿಡಿ ಬಿಡುಗಡೆಗೆ ಸಾಕ್ಷಿಯಾದರು. ಅಂದು ಯಾರೂ ಕೂಡ ಹೆಚ್ಚು ಮಾತನಾಡಲಿಲ್ಲ. ಸಿನಿಮಾದ ಹಾಡು, ಟ್ರೇಲರ್‌ ನೋಡಿ, “ಈ ಚಿತ್ರಕ್ಕೆ ಗೆಲ್ಲುವ ಎಲ್ಲಾ ಲಕ್ಷಣಗಳೂ ಇವೆ’ ಎಂದಷ್ಟೇ ಬಂದವರು ಶುಭಹಾರೈಸಿದ್ದು ವಿಶೇಷ.

ನಾರಾಯಣ್‌ ಅಂದು ಎಂದಿಗಿಂತ ಲವಲವಿಕೆಯಲ್ಲಿದ್ದರು. ಅದಕ್ಕೆ ಕಾರಣ, ಲವ್ವರ್ ಡೇ ಅನ್ನೋದು ಒಂದು ಕಾರಣವಾದರೆ, ಅದೇ ದಿನ ಚಿತ್ರದ ಆಡಿಯೋ ಸಿಡಿ ಹೊರಬಂದಿದೆ ಅನ್ನೋದು ಇನ್ನೊಂದು ಕಾರಣ. ಎಲ್ಲಕ್ಕಿಂತಲೂ ಹೆಚ್ಚಾಗಿ ಅವರು ತುಂಬಾ ನಿರೀಕ್ಷೆ ಇಟ್ಟು ಮಾಡಿರುವ ಸಿನಿಮಾ, ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಎಂಬುದು. ಅದೇನೆ ಇರಲಿ, ಅಂದು “ಮನಸು ಮಲ್ಲಿಗೆ’ಯ ಹಾಡು ನೋಡಿದವರ ಮೊಗದಲ್ಲಿ ಖುಷಿಗೆ ಪಾರವೇ ಇರಲಿಲ್ಲ. ನಾಯಕಿ ರಿಂಕು ರಾಜ್‌ಗುರು ಆಗಮಿಸಿದ್ದರೆ, ಆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ಬರುತ್ತಿತ್ತು.

ಆದರೆ, ಅವರ ಗೈರುಹಾಜರಿಯಲ್ಲೇ ಕಾರ್ಯಕ್ರಮ ನಡೆದೋಯ್ತು. ಅಂದು ಕವಿರಾಜ್‌, ಪ್ರೇಮಾಚಂದ್ರು, ಸೂರಪ್ಪಬಾಬು, ಛಾಯಾಗ್ರಾಹಕ ಮನೋಹರ್‌ ಜೋಷಿ, ಪ್ರಸನ್ನ ಚಿತ್ರಮಂದಿರ ಮಾಲೀಕ ಆನಂದ್‌ ಇತರರು ಇದ್ದರು. ಇದಕ್ಕೂ ಮುನ್ನ, ನಾರಾಯಣ್‌ ದಂಪತಿ ಅಲ್ಲಿದ ದೇವರಿಗೆ ಪೂಜೆ ನೆರವೇರಿಸಿದರು. ನಾರಾಯಣ್‌ ಎಲ್ಲರಿಗೂ ಸಿಹಿ ಹಂಚಿದರು. ಕಾರ್ಯಕ್ರಮದ ಕ್ಲೈಮ್ಯಾಕ್ಸ್‌ಗೆ ಸತ್ಯಪ್ರಕಾಶ್‌ ನಿರ್ದೇಶಕ ಮತ್ತು ನಿರ್ಮಾಪಕರನ್ನು ಪ್ರೀತಿಯಿಂದ ಅಭಿನಂದಿಸುವ ಹೊತ್ತಿಗೆ ಆ ಆಡಿಯೋ ಸಿಡಿ ಕಾರ್ಯಕ್ರಮಕ್ಕೆ ತೆರೆಬಿತ್ತು.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bigg

BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..

Komal Kumar’s Yala kunni ready to release

Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ

Arjun Sarja announces new film Seetha Payana

Seetha Payana: ಅರ್ಜುನ್‌ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್‌ ಹೀರೋ

Chethan Kumar: ನಟ ಚೇತನ್‌ ವಿರುದ್ಧದ ವಾರಂಟ್‌ ಹಿಂಪಡೆದ ಕೋರ್ಟ್ ‌

Chethan Kumar: ನಟ ಚೇತನ್‌ ವಿರುದ್ಧದ ವಾರಂಟ್‌ ಹಿಂಪಡೆದ ಕೋರ್ಟ್ ‌

2

Actor Darshan: ಅ.22ಕ್ಕೆ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.