ಇಲ್ಲಿ ತಿಥಿ, ಪ್ರಸ್ಥ ಎರಡೂ ಒಟ್ಟಿಗೆ ನಡೆಯಲಿದೆ…


Team Udayavani, Feb 19, 2017, 4:43 PM IST

7.jpg

ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿರುವ ಗಡ್ಡಪ್ಪ ಹಾಗೂ ಸೆಂಚುರಿಗೌಡ ಈಗ ಮತ್ತೂಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರ ಈಗಾಗಲೇ ಸದ್ದಿಲ್ಲದೆಯೇ ಶುರುವಾಗಿದೆ ಕೂಡ. ಅಂದಹಾಗೆ, ಆ ಸಿನಿಮಾಗೆ “ತಾತನ್‌ ತಿಥಿ ಮೊಮ್ಮಗನ್‌ ಪ್ರಸ್ಥ’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರಕ್ಕೆ ಕೃಷ್ಣ ಚಂದ್ರು ನಿರ್ದೇಶಕರು. ಮುಸ್ಸಂಜೆ ಮಹೇಶ್‌ ಸಿನಿಮಾದಲ್ಲಿ ಅವರ ಅಪ್ಪಟ ಶಿಷ್ಯ ಎಂದು ಗುರುತಿಸಿಕೊಂಡಿರುವ ಕಾರಣ, ಈ ಚಿತ್ರಕ್ಕೆ ಮುಸ್ಸಂಜೆ ಮಹೇಶ್‌ ಕಥೆ ಮತ್ತು ಚಿತ್ರಕಥೆ ಬರೆದು, ಶಿಷ್ಯನ ಸಿನಿಮಾಗೆ ಸಾಥ್‌ ಕೊಡುತ್ತಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಗಡ್ಡಪ್ಪ, ಸೆಂಚುರಿಗೌಡ ಹಾಗೂ ತಮ್ಮಣ್ಣ ಪ್ರಮುಖವಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಶುಭಾ ಪೂಂಜಾ ನಾಯಕಿ. ಅವರಿಗೆ “ಮಂಡ್ಯ ಸ್ಟಾರ್‌’ ಸಿನಿಮಾದ ಹೀರೋ ಲೋಕಿ ನಾಯಕ. ಉಳಿದಂತೆ ಓಂಪ್ರಕಾಶ್‌ ರಾವ್‌ ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಈ ಚಿತ್ರದ ಟೈಟಲ್ಲೇ ಒಂದು ರೀತಿ ವಿಭಿನ್ನವಾಗಿದೆ. ಆ ಕುರಿತು ವಿವರ ಕೊಡುವ ಮುಸ್ಸಂಜೆ ಮಹೇಶ್‌, “ಇಷ್ಟು ದಿನ ಈ ಗಡ್ಡಪ್ಪ ಮತ್ತು ಸೆಂಚುರಿ ಗೌಡ ಅವರ ಮುಗ್ಧತೆಯನ್ನು ಬಹಳಷ್ಟು ಜನ ಬೇರೆ ರೀತಿ ಬಳಸಿಕೊಂಡಿದ್ದುಂಟು. ಅವರನ್ನಿಟ್ಟುಕೊಂಡು ಚೀಪ್‌ ಗಿಮಿಕ್‌ ಕೂಡ ಮಾಡಲಾಗಿತ್ತು. ಇಲ್ಲಿ ಅವರನ್ನು ಬೇರೆ ರೀತಿಯಾಗಿ ತೋರಿಸಲಾಗುತ್ತಿದೆ. ಇಲ್ಲೂ ಡಬ್ಬಲ್‌ ಮೀನಿಂಗ್‌ ಇದೆ. ಆದರೆ, ಆದು ವಲ್ಗರ್‌ ಎನಿಸುವುದಿಲ್ಲ. ಅಂತಹ ಪೋಲಿ ಮಾತುಗಳಿದ್ದರೂ, ಒಂದೊಳ್ಳೆಯ ಸಂದೇಶ ಈ ಚಿತ್ರದಲ್ಲಿದೆ. ಕಥೆಗೆ ಪೂರಕವಾಗಿಯೇ ಇಲ್ಲಿ ಮಾತುಗಳನ್ನು ಪೋಣಿಸಲಾಗಿದೆ ವಿನಃ, ಬೇಕು ಅಂತಾನೇ ಬೇಡದ್ದನ್ನು ಇಟ್ಟಿಲ್ಲ. ಈಗಾಗಲೇ ಒಂದು ವಾರ ಚಿತ್ರೀಕರಣ ನಡೆಸಲಾಗಿದೆ. ಈ ಕಲಾವಿದರ ವೃತ್ತಿ ಜೀವನದಲ್ಲೇ ಈ ಸಿನಿಮಾ ದೊಡ್ಡ ಕ್ಯಾನ್ವಾಸ್‌ನಲ್ಲಿ ತಯಾರಾಗುತ್ತಿದೆ.

ಮುಗ್ಧ ಕಲಾವಿದರನ್ನು ಇಟ್ಟುಕೊಂಡು ನಾವು ಚೀಪ್‌ ಗಿಮಿಕ್‌ ಮಾಡುವುದಿಲ್ಲ. ಒಂದೊಳ್ಳೆಯ ಕಥೆಯೊಂದಿಗೆ ಮನರಂಜನಾತ್ಮಕವಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಇನ್ನು, ಶೀರ್ಷಿಕೆ ಬಗ್ಗೆ ಹೇಳವುದಾದರೆ, ಇದನ್ನು “ತಿಥಿ’ಯ ಮಂದುವರೆದ ಭಾಗ ಅಂದುಕೊಳ್ಳಬಹುದು. ತಾತನ ತಿಥಿ ಅದಮೇಲೆ, ಮೊಮ್ಮಗನ ಪ್ರಸ್ಥ ಮಾಡಬೇಕೋ ಬೇಡವೋ ಎಂಬ ಕಾನ್ಸೆಪ್ಟ್ ಇಲ್ಲಿದೆ.

ಸಿನಿಮಾದುದ್ದಕ್ಕೂ ಮನರಂಜನೆ ಇದೆ. ಬೆಂಗಳೂರು ಮತ್ತು ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಫೆಬ್ರವರಿ 21 ಕ್ಕೆ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡುವ ಯೋಚನೆ ಚಿತ್ರತಂಡಕ್ಕಿದೆ’ ಎಂಬುದು ಮುಸ್ಸಂಜೆ ಮಹೇಶ್‌ ಮಾತು. ಶ್ರೀ ಶ್ರೀನಿವಾಸ ಗ್ರೂಪ್ಸ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ಮಧುಕುಮಾರ್‌ ಹಾಗೂ ಮಂಜುನಾಥ್‌ ನಿರ್ಮಾಪಕರು. ಚಿತ್ರಕ್ಕೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ನೀಡಿದ್ದಾರೆ. ನಾಗೇಶ್‌ ಆಚಾರ್ಯ ಕ್ಯಾಮೆರಾ ಹಿಡಿದಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಶ್ರೀನಿವಾಸಮೂರ್ತಿ, ಪದಾ ¾ವಾಸಂತಿ, ಆಶಾಲತಾ, ಮೈಕೋ ನಾಗರಾಜ್‌
ಸೇರಿ ಹಲವರು ನಟಿಸಿದ್ದಾರೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.