DELHI HORROR! ಪಾರ್ಟಿಯಿಂದ ಮರಳುತ್ತಿದ್ದ ಮಣಿಪುರ ಮಹಿಳೆಯ ಅತ್ಯಾಚಾರ
Team Udayavani, Feb 20, 2017, 11:23 AM IST
ಹೊಸದಿಲ್ಲಿ : ದೇಶದೆಲ್ಲೆಡೆಯಂತೆ ರಾಷ್ಟ್ರ ರಾಜಧಾನಿಯಲ್ಲೂ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ಸಾಗುತ್ತಿರುವಂತೆ ಕಂಡುಬರುತ್ತಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ದೇಶದ ಈಶಾನ್ಯ ಭಾಗದ 24ರ ಹರೆಯದ ಮಹಿಳೆಯೊಬ್ಬಳ ಮೇಲೆ ಕಾಮಾಂಧನೊಬ್ಬ ದಿಲ್ಲಿಯ ಹೌಝ್ ಖಾಸ್ ಗ್ರಾಮದಲ್ಲಿ ಅತ್ಯಾಚಾರ ನಡೆಸಿದ್ದಾನೆ.
ಮಣಿಪುರ ಮೂಲದ ಮಹಿಳೆಯು ತನ್ನ ಸ್ನೇಹಿತರು ಹಾಗೂ ಸೋದರ ಸಂಬಂಧಿಗಳೊಂದಿಗೆ ಕಳೆದ ಶನಿವಾರ ರಾತ್ರಿ ಪಾರ್ಟಿ ಮುಗಿಸಿ ಹೌಝ್ ಖಾಸ್ ನಲ್ಲಿನ ತನ್ನ ಮನೆಗೆ ಮರಳುತ್ತಿದ್ದಾಗ ಆಕೆಯ ಮೇಲೆ ರೇಪ್ ನಡೆದಿದೆ.
ಶನಿವಾರ ರಾತ್ರಿ 11.30ರ ಹೊತ್ತಿಗೆ ಅಪರಿಚಿತ ವ್ಯಕ್ತಿಯೋರ್ವ ನನಗೆ ಮನೆಗೆ ಡ್ರಾಪ್ ನೀಡುವುದಾಗಿ ಹೇಳಿ ನನ್ನನ್ನು ತನ್ನ ಕಾರಿಗೆ ಹತ್ತಿಸಿಕೊಂಡಿದ್ದಾನೆ. ಬಳಿಕ ತನ್ನ ಕಾರನ್ನು ಆತ ಡಿಯರ್ ಪಾರ್ಕ್ ಗೆ ಕೊಂಚ ದೂರದಲ್ಲಿ ನಿಲ್ಲಿಸಿದ್ದಾನೆ. ಮನೆಗೆ ಹೋಗುವ ಮಾರ್ಗವನ್ನು ತಿಳಿಸುವ ನೆಪದಲ್ಲಿ ಅಲ್ಲಿಂದ ನನ್ನನ್ನು ಸಮೀಪದ ನಿರ್ಜನ ಪ್ರದೇಶಕ್ಕೆ ಒಯ್ದಿದ್ದಾನೆ. ಅಲ್ಲಿ ಆತ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾಳೆ. ಅತ್ಯಾಚಾರಿಯ ಕಪಿ ಮುಷ್ಟಿಯಿಂದ ಅದ್ಹೇಗೋ ತಾನು ತಪ್ಪಿಸಿಕೊಂಡು ಪಾರಾಗಿ ಬಂದೆ ಎಂದು ಮಹಿಳೆಯು ಪೊಲೀಸರಿಗೆ ತಿಳಿಸಿದ್ದಾಳೆ.
ಅತ್ಯಾಚಾರದಿಂದ ಆಘಾತಕ್ಕೆ ಗುರಿಯಾಗಿರುವ ಸಂತ್ರಸ್ತ ಮಹಿಳೆಗೆ ಧೈರ್ಯ ತುಂಬಲು ಆಪ್ತ ಸಮಾಲೋಚನೆಯನ್ನು ಒದಗಿಸಲಾಗಿದೆ. ಸ್ಥಳೀಯ ಗುಪ್ತಚರ ಹಾಗೂ ವಿದ್ಯುನ್ಮಾನ ಕಣ್ಗಾವಲು ಸಾಧನಗಳಿಂದ ದೊರಕಿರುವ ಮಾಹಿತಿಗಳ ಮೇಲೆ ಆರೋಪಿ ಅತ್ಯಾಚಾರಿಯನ್ನು ಗುರುತಿಸುವ ಯತ್ನ ನಡೆದಿದೆ; ಶೀಘ್ರವೇ ಆತನನ್ನು ಬಂಧಿಸಲಾಗುವ ವಿಶ್ವಾಸವಿದೆ ಎಂದು ಐಪಿಸಿ ಸೆ.376ರಡಿ (ಅತ್ಯಾಚಾರ) ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲು
CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.