“ಅಮ್ಮನ ಚೇರ್‌’ನಲ್ಲಿ ಕುಳಿತ ಸಿಎಂ ಎಡಪ್ಪಾಡಿ ಪಳನಿಸ್ವಾಮಿ

Team Udayavani, Feb 21, 2017, 3:45 AM IST

Chief-Minister-E-Palaniswam.jpg

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಎಡಪ್ಪಾಡಿ ಪಳನಿಸ್ವಾಮಿ ಅವರು ಇದೇ ಮೊದಲ ಬಾರಿಗೆ “ಅಮ್ಮ’ನ ಕುರ್ಚಿಯಲ್ಲಿ ಆಸೀನರಾಗಿದ್ದಾರೆ. ಅಷ್ಟೇ ಅಲ್ಲ, ಜಯಲಲಿತಾರ ಆಸೆಯಂತೆ ಹಂತಹಂತವಾಗಿ ಪಾನ ನಿಷೇಧ ಮಾಡುವ ಅಂಗವಾಗಿ ಮೊದಲ ದಿನವೇ 500 ಸರ್ಕಾರಿ ಚಿಲ್ಲರೆ ಸಾರಾಯಿ ಅಂಗಡಿಗಳಿಗೆ ಬೀಗ ಹಾಕುವ ಕೆಲಸಕ್ಕೆ ಸಹಿ ಹಾಕಿದ್ದಾರೆ.

ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದಂದಿನಿಂದ ಅಂದರೆ ಸುಮಾರು 5 ತಿಂಗಳಿಂದ ಅವರ ಕುರ್ಚಿ ಖಾಲಿಬಿದ್ದಿತ್ತು. ಪನ್ನೀರ್‌ಸೆಲ್ವಂ ಅವರು ಹಂಗಾಮಿ ಸಿಎಂ ಆಗಿದ್ದರೂ, ಒಂದು ಬಾರಿಯೂ ಅಮ್ಮನ ಕುರ್ಚಿಯಲ್ಲಿ ಕುಳಿತುಕೊಳ್ಳುವ “ಸಾಹಸ’ ಮಾಡಿರಲಿಲ್ಲ. ಆ ಕುರ್ಚಿಯ ಮೇಲೆ ಜಯಲಲಿತಾರ ಫೋಟೋವನ್ನಿಟ್ಟು, ಪಕ್ಕದ ಸೀಟಿನಲ್ಲಿ ಕುಳಿತೇ ಪನ್ನೀರ್‌ಸೆಲ್ವಂ ಆಡಳಿತ ನಡೆಸಿದ್ದರು. ಇದೀಗ, ಪಳನಿಸ್ವಾಮಿ ಅವರು ಅಮ್ಮ ಬಳಕೆ ಮಾಡುತ್ತಿದ್ದ ಸಿಎಂ ಕುರ್ಚಿಯಲ್ಲಿ ಕುಳಿತು ಅಧಿಕೃತವಾಗಿ ಕೆಲಸ ಆರಂಭಿಸಿದ್ದಾರೆ.

ಮೊದಲ ದಿನವೇ 5 ಆದೇಶಗಳಿಗೆ ಅವರು ಸಹಿ ಮಾಡಿದ್ದಾರೆ. ಸರ್ಕಾರಿ ಸ್ವಾಮ್ಯದ 500 ಮದ್ಯದಂಗಡಿಗಳನ್ನು ಮುಚ್ಚುವುದು, ಒಂದು ಲಕ್ಷ ಮಹಿಳೆಯರಿಗೆ ಸಬ್ಸಿಡಿದರದಲ್ಲಿ ಮೊಪೆಡ್‌, ಹೆರಿಗೆಭತ್ಯೆಯನ್ನು 18 ಸಾವಿರಕ್ಕೆ ಹೆಚ್ಚಳ, ಮೀನುಗಾರರಿಗೆ ಮನೆ ಸೇರಿದಂತೆ ಚುನಾವಣಾ  ಸಮಯದಲ್ಲಿ ಕೊಟ್ಟಿದ್ದ ಹಲವು ಭರವಸೆಗಳ ಪೈಕಿ ಪ್ರಮಖವಾದದ್ದನ್ನು ಅನುಷ್ಠಾನಕ್ಕೆ ತರಲು ಸರ್ಕಾರಿ ಆದೇಶ ಹೊರಡಿಸಿದ್ದಾರೆ. ಜತೆಗೆ, ಎಲ್ಲರಿಗೂ ಶುದ್ಧ ಕುಡಿಯುವ ನೀರು ಮತ್ತು ಬರದಲ್ಲಿ ಸಂಕಷ್ಟ ಎದುರಿಸುತ್ತಿರುವ  ರೈತರ ನೆರವಿಗೆ ನಿಧಿ ಸ್ಥಾಪಿಸುವ ಭರವಸೆಕೊಟ್ಟಿದ್ದಾರೆ. 

ಸೀರೆ ಕೊಡಲು ಯತ್ನಿಸಿದವರ ಬಂಧನ: ಕೊಯಮತ್ತೂರಿನ ಪೊಲ್ಲಾಚಿಯಲ್ಲಿ ಪ್ರತಿಭಟನೆಗೆ ಯತ್ನಿಸಿದ 100 ಮಂದಿ ಡಿಎಂಕೆ ಕಾರ್ಯಕರ್ತರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇತ್ತೀಚೆಗೆ ನಡೆದ ವಿಶ್ವಾಸಮತದ ವೇಳೆ ಪಳನಿಸ್ವಾಮಿ ಪರ ಮತ ಚಲಾಯಿಸಿದ್ದ ತಮಿಳುನಾಡು ವಿಧಾನಸಭೆಯ ಉಪಸಭಾಧ್ಯಕ್ಷ, ಎಐಎಡಿಎಂಕೆ ಶಾಸಕ ಪೊಲ್ಲಾಚಿ ವಿ. ಜಯರಾಮನ್‌ ಅವರಿಗೆ ಸೀರೆ, ಬಳೆಗಳನ್ನು ನೀಡಲು ಡಿಎಂಕೆ ಕಾರ್ಯಕರ್ತರು ಮುಂದಾಗಿದ್ದರು. ಇದನ್ನೆಲ್ಲ ಹೊತ್ತುಕೊಂಡು ಮೆರವಣಿಗೆಯಲ್ಲಿ ಬರುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶ್ವಾಸಮತದ ಸಿಂಧುತ್ವ; ಇಂದು ವಿಚಾರಣೆ
ಈ ಮಧ್ಯೆ, ವಿಧಾನಸಭೆಯಲ್ಲಿ ರಾಜ್ಯಪಾಲರ ಆದೇಶದಂತೆ ಅಂಗೀಕರಿಸಲಾದ ವಿಶ್ವಾಸಮತದ ವಿರುದ್ಧ ಡಿಎಂಕೆ ಹೈಕೋರ್ಟ್‌ ಮೆಟ್ಟಿಲೇರಿದೆ. ಬಹುಮತ ಸಾಬೀತು ಪ್ರಕ್ರಿಯೆಯ ಸಿಂಧುತ್ವ ಪ್ರಶ್ನೆ ಮಾಡಿರುವ ಡಿಎಂಕೆ, ಕಾನೂನು ಪ್ರಕಾರ ವಿಶ್ವಾಸಮತಯಾಚನೆ ಮಾಡಿಲ್ಲ. ಡಿಎಂಕೆ ಸದಸ್ಯರನ್ನು ಬಲವಂತವಾಗಿ ಹೊರಕ್ಕೆ ಹಾಕಲಾಗಿದೆ. ಆದ್ದರಿಂದ ಇದನ್ನು ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿದೆ. ಮಂಗಳವಾರ ಈ ಅರ್ಜಿಯ ವಿಚಾರಣೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ನಡೆಯಲಿದೆ. ಇದೇ ವಿಚಾರವಾಗಿ ಪಕ್ಷ ರಾಜ್ಯಾದ್ಯಂತ ಉಗ್ರ ಪ್ರತಿಭಟನೆಯನ್ನೂ ಹಮ್ಮಿಕೊಂಡಿದೆ.

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.