ನ್ಯಾಯವೇ ಪ್ರೇಮಿಗಳ ಬೆಸೆದರೂ ಪೋಷಕರಿಂದ ವಿಭಜಿಸೋ ಕೆಲಸ
Team Udayavani, Feb 21, 2017, 11:24 AM IST
ಬೆಂಗಳೂರು: ಪ್ರೀತಿಸಿ ಮದುವೆಯಾದ ಜೋಡಿಯನ್ನು ಹೈಕೋರ್ಟ್ ಒಂದುಗೂಡಿಸಿತು. ಆದರೆ, ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ವಧುವನ್ನು ಪೋಷಕರು ಬಲವಂತದಿಂದ ಕರೆದೊಯ್ದರು. ವರನ ದೂರಿನ ಮೇರೆಗೆ ತಕ್ಷಣ ಕಾರ್ಯೋನ್ಮುಖರಾದ ಪೊಲೀಸರು ವಧುವನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಇಂಥದ್ದೊಂದು ಸಿನೀಮಿಯ ರೀತಿಯ ಘಟನೆಗೆ ಸೋಮವಾರ ಹೈಕೋರ್ಟ್ ಸಾಕ್ಷಿಯಾಯಿತು. ಪ್ರೀತಿಸಿ ಮದುವೆಯಾದ ನವದಂಪತಿಗೆ ರಕ್ಷಣೆ ನೀಡಲು ನ್ಯಾಯಾಲಯ ಸೂಚನೆ ನೀಡಿದೆ. ಚಿಂತಾಮಣಿ ಮೂಲದ ವರ ಮತ್ತು ದೊಡ್ಡಬಳ್ಳಾಪುರದ ವಧು ಪ್ರೀತಿಸಿ ಸ್ವಯಂ ಪ್ರೇರಣೆಯಿಂದ 2016ರ ನ.24ರಂದು ಮದುವೆಯಾಗಿದ್ದರು. ವಧುವಿನ ತಾಯಿ ನ.30ರಂದು ಯಲಹಂಕ ಟೌನ್ ಪೊಲೀಸರಿಗೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು.
ತರುವಾಯ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿದ್ದರು. ಮಗಳನ್ನು ಯುವಕನೊಬ್ಬ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದಾನೆ ಎಂದು ದೂರಿದ್ದರು. ಈ ದೂರಿನ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ಹೈಕೋರ್ಟ್, ನವದಂಪತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿದ್ದರಿಂದ ಯಲಹಂಕ ಪೊಲೀಸರು ಹಾಜರುಪಡಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ವಧು, ವರನನ್ನು ಪ್ರೀತಿಸುತ್ತಿರುವುದಾಗಿ ಮತ್ತು ತಾನು ವಯಸ್ಕಳಾಗಿದ್ದು, ಸ್ವ ಇಚ್ಛೆಯಿಂದ ಆತನ ಜತೆ ಹೋಗಿರುವುದಾಗಿ ಹೇಳಿಕೆ ನೀಡಿದ್ದಳು.
ವಧುವಿನ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಕೆಯ ತಾಯಿ ಮಗಳನ್ನು ತನ್ನ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಮತ್ತು ನ್ಯಾ.ಬಿ.ವಿ.ನಾಗರತ್ನ ವಿಭಾಗೀಯ ಪೀಠ, ವಧು-ವರರು ವಯಸ್ಕ ರಾಗಿದ್ದು, ಇಷ್ಟಪಟ್ಟು ಮದುವೆಯಾಗಿದ್ದಾರೆ. ಕಾನೂನು ಪ್ರಕಾರ ಅವರ ಮದುವೆಗೆ ಮಾನ್ಯತೆ ಯಿದೆ. ನ್ಯಾಯಾಲಯ ಅವರ ವಿವಾಹವನ್ನು ರದ್ದುಪಡಿಸಲಾಗದು ಎಂದು ಹೇಳಿತು. ಅಲ್ಲದೇ, ಈ ಬಗ್ಗೆ ಮಾತುಕತೆ ನಡೆಸಿ ಸಂಜೆ ನ್ಯಾಯಾಲಯಕ್ಕೆ ನಿರ್ಧಾರ ಹೇಳುವಂತೆ ತಿಳಿಸಿತು.
ವಧುವನ್ನು ಹೊತ್ತೂಯ್ದ ಪೋಷಕರು: ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ವಧುವನ್ನು ಆಕೆಯ ಕುಟುಂಬಸ್ಥರು ಬಲವಂತಾಗಿ ಕಾರಿನಲ್ಲಿ ಕರೆದೊಯ್ಯಲು ಮುಂದಾದಾಗ ವರ ವಿರೋಧ ವ್ಯಕ್ತಪಡಿಸಿದ ವರನ ಮೇಲೆ ಹಲ್ಲೆ ನಡೆಸಲಾಯಿತು. ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ವಧುವನ್ನು ಕರೆದೊಯ್ಯಲಾಗಿತ್ತು. ಕಾರ್ಯಪ್ರವೃತ್ತರಾದ ಯಲಹಂಕ ಮತ್ತು ವಿಧಾನಸೌಧ ಠಾಣಾ ಪೊಲೀಸರು ವಧುವನ್ನು ವಶಕ್ಕೆ ಪಡೆದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಘಟನೆ ಬಗ್ಗೆ ಮಾಹಿತಿ ಪಡೆದ ನ್ಯಾಯಾಲಯವು ದಂಪತಿಗೆ ರಕ್ಷಣೆ ನೀಡಿ ಮಂಗಳವಾರ ಮಧ್ಯಾಹ್ನ 2.30ಕ್ಕೆ ನ್ಯಾಯಾಲಯಕ್ಕೆ ಮತ್ತೆ ಹಾಜರುಪಡಿಸುವಂತೆ ನಿರ್ದೇಶಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.