ಮಾನವ ಸಬಲೀಕರಣಕ್ಕೆ ತಂತ್ರಜ್ಞಾನ ಬಳಕೆಯಾಗಲಿ


Team Udayavani, Feb 21, 2017, 11:43 AM IST

technicaL.jpg

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರ ಶರವೇಗದ ಪ್ರಗತಿಯಾಗುತ್ತಿದ್ದ, ಅದನ್ನು ಮಾನವ ಸಬಲೀಕರಣಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ಸಾಫ್ಟ್ವೇರ್‌ ಕ್ಷೇತ್ರದ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್ನ ಸಿಇಒ ಸತ್ಯ ನಾದೆಲ್ಲಾ ಅಭಿಪ್ರಾಯಪಟ್ಟಿದ್ದಾರೆ. 

ನಗರದಲ್ಲಿ ಸೋಮವಾರ ನಂದನ್‌ ನಿಲೇಕಣಿ ಅವರೊಂದಿಗಿನ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, “ಮಾಹಿತಿ ತಂತ್ರಜ್ಞಾನ ಕ್ಷೇತ್ರದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ಈ ಬೆಳವಣಿಗೆಯನ್ನು ಕಾಯ್ದುಕೊಂಡು ಹೋಗುವ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ,” ಎಂದು ಹೇಳಿದರು.

ಸಂವಾದದ ಆರಂಭದಲ್ಲೇ “ಆಧಾರ್‌’ ಬಗ್ಗೆ ಪ್ರಸ್ತಾಪಿಸಿದ ಸತ್ಯ ನಾದೆಲ್ಲಾ ಅವರಿಗೆ ಪ್ರತಿಕ್ರಿಯಿಸಿದ ನಂದನ್‌ ನಿಲೇಕಣಿ, “ದೊಡ್ಡ ಜನಸಮೂಹಕ್ಕೆ ಅನುಕೂಲವಾಗುವಂತಹ ಕಾರ್ಯ ಕೈಗೊಳ್ಳಬೇಕೆಂಬ ಹಂಬಲವಿತ್ತು. ಅಲ್ಲದೇ ಇಂಟರ್‌ನೆಟ್‌ ತಂತ್ರಜ್ಞಾನದ ಬೆಳವಣಿಗೆ, ಉಪಯುಕ್ತತೆಯ ಆಕರ್ಷಣೆಗೊಳಗಾಗಿ “ಆಧಾರ್‌’ ಯೋಜನೆ ರೂಪಿಸಲಾಯಿತು. ಇದೀಗ ಕೋಟ್ಯಂತರ ಜನ ಆಧಾರ್‌ನಡಿ ನೋಂದಣಿ ಮಾಡಿಕೊಂಡಿದ್ದಾರೆ,” ಎಂದು ತಿಳಿಸಿದರು.

“ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಆಧಾರ್‌ ಅನ್ನು ಒಪ್ಪಿಕೊಂಡಿವೆ. ಕಳೆದ ಐದಾರು ವರ್ಷದಲ್ಲಿ ಕೋಟ್ಯಂತರ ಜನರ ಕನಿಷ್ಠ ಪ್ರಮುಖ ಮಾಹಿತಿ ಸಂಗ್ರಹವಾಗಿದೆ. ಈ ಮಾಹಿತಿ ಆಧರಿಸಿ ಏಕಕಾಲಕ್ಕೆ ಸೇವೆ ನೀಡಲಾಗುತ್ತಿದೆ. ರಿಲಯನ್ಸ್‌ ಸಂಸ್ಥೆಯು “ಜಿಯೋ’ ಸಿಮ್‌ಗಳನ್ನು ಇದೇ ಮಾಹಿತಿ ಆಧರಿಸಿಯೇ ಕಡಿಮೆ ಅವಧಿಯಲ್ಲಿ ದೊಡ್ಡ ಸಂಖ್ಯೆಯ ಗ್ರಾಹಕರಿಗೆ ವಿತರಿಸಿದೆ. ಡಿಜಿಟಲ್‌ ಲಾಕರ್‌ಗಳಿಗೂ ಹೆಚ್ಚು ಬಳಕೆಯಾಗುತ್ತಿದೆ,” ಎಂದು ಹೇಳಿದರು.

ಸುಧಾರಿತ ತಂತ್ರಜ್ಞಾನ ಮಾನವ ಸಬಲೀಕರಣಕ್ಕೆ ಬಳಕೆಯಾಗಬೇಕೆಂಬ ನಂದನ್‌ ನಿಲೇಕಣಿ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ ಸತ್ಯ ನಾದೆಲ್ಲಾ, “ವೈಯಕ್ತಿಕ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಸಬಲೀಕರಣಕ್ಕೆ ಯತ್ನಿಸುವುದು ಉತ್ತಮವಾಗಿದೆ. ಈಗಾಗಲೇ ಸಂಸ್ಥೆ ಅಭಿವೃದ್ಧಿಪಡಿಸಿರುವ ಮೈಕ್ರೋಸಾಫ್ಟ್ “ಕ್ಲೌಡ್‌’ ತಂತ್ರಜ್ಞಾನದಡಿ ಅಗಾಧ ಡೇಟಾ ಸಂಗ್ರಹ ವ್ಯವಸ್ಥೆ ನಾನಾ ಕಾರ್ಯಕ್ರಮಗಳಿಗೆ ಬಳಕೆಯಾಗುತ್ತಿದೆ.

ಆಂಧ್ರಪ್ರದೇಶದಲ್ಲಿ ಪ್ರೌಢಶಿಕ್ಷಣದಿಂದ ಹೊರಗುಳಿದವರ ಪತ್ತೆಗೆ ಮೈಕ್ರೋಸಾಫ್ಟ್ ಕ್ಲೌಡ್‌ ಬಳಕೆಯಾಗುತ್ತಿದ್ದು, ತಮಿಳುನಾಡು ಚುನಾವಣಾ ಆಯೋಗವೂ ಡೇಟಾ ಸಂಗ್ರಹಕ್ಕೆ ಕ್ಲೌಡ್‌ ಬಳಸುತ್ತಿದೆ. ನಗದುರಹಿತ ಆರ್ಥಿಕತೆಯಂತಹ ಪ್ರಯೋಗಗಳು ಕೂಡ ಸಬಲೀಕರಣಕ್ಕೆ ಪರಿಣಾಮಕಾರಿ ಎನಿಸಿವೆ,” ಎಂದರು. ಬಳಿಕ ಸುಧಾರಿತ ತಂತ್ರಜ್ಞಾನದ ಅಭಿವೃದ್ಧಿ, ಪೂರಕ ಮೂಲಸೌಕರ್ಯ, ಅಳವಡಿಕೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದ ಪಾತ್ರ, ಪಾಲುದಾರಿಕೆ ಬಗ್ಗೆಯೂ ಇಬ್ಬರೂ ದಿಗ್ಗಜರು ಚರ್ಚಿಸಿದರು.

“ಸುಧಾರಿತ ತಂತ್ರಜ್ಞಾನದ ಬಳಕೆಗೆ ದೊಡ್ಡ ಮೊತ್ತದ ಬಂಡವಾಳ ಮೂಲ ಸೌಕರ್ಯವನ್ನು ಸರ್ಕಾರ ಕಲ್ಪಿಸಿದರೆ ಅದನ್ನು ಜನ ಬಳಕೆಗೆ ಖಾಸಗಿ ಸಂಸ್ಥೆಗಳು ಉಪಯೋಗಿಸಿಕೊಳ್ಳಲು ಅವಕಾಶ ಕಲ್ಪಿಸುವುದು ಸೂಕ್ತ’ ಎಂದು ನಂದನ್‌ ನಿಲೇಕಣಿ ಹೇಳಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸತ್ಯ ನಾದೆಲ್ಲಾ, “ಸರ್ಕಾರ ಹಾಗೂ ಖಾಸಗಿ ಕ್ಷೇತ್ರಗಳು ತಮ್ಮ ಜವಾಬ್ದಾರಿ, ತಮ್ಮ ಕಾರ್ಯಕ್ಷೇತ್ರದ ಬಗ್ಗೆ ಸ್ಪಷ್ಟತೆಯೊಂದಿಗೆ ಕಾರ್ಯನಿರ್ವಹಿಸುವುದು ಸೂಕ್ತ’ ಎಂದು ಹೇಳಿದರು.

ನಂತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸತ್ಯ ನಾದೆಲ್ಲಾ, “ವರ್ಷದಿಂದೀಚೆಗೆ ಭಾರತದಲ್ಲಿ 2000 ಭಾರತೀಯ ಸ್ಟಾರ್ಟ್‌ಅಪ್‌ಗ್ಳು ಮೈಕ್ರೋಸಾಫ್ಟ್ ಕ್ಲೌಡ್‌ ತಂತ್ರಜ್ಞಾನ ಬಳಕೆಗೆ ಒಡಂಬಡಿಕೆ ಮಾಡಿಕೊಂಡಿವೆ. ಆಗಾಧ ಡೇಟಾ ಸಂಗ್ರಹಣೆ ಜತೆಗೆ ಇತರೆ ಸೇವೆಗಳನ್ನು ಬಳಸುತ್ತಿವೆ,” ಎಂದರು. ಸಂವಾದವನ್ನು ಸೇರಿಕೊಂಡ ಫ್ಲಿಪ್‌ಕಾರ್ಟ್‌ ಸಮೂಹದ ಸಿಇಒ ಬಿನ್ನಿ ಬನ್ಸಾಲ್‌, “ಸಂಸ್ಥೆ ಆರಂಭಿಸಿದ ಇ-ವಾಣಿಜ್ಯ ಸೇವೆ 10 ವರ್ಷ ಪೂರೈಸುತ್ತಿದೆ. ಗುಣಮಟ್ಟದ ವಸ್ತು, ಸೇವೆಯನ್ನು ರಿಯಾಯ್ತಿ ಇಲ್ಲವೇ ಕೈಗೆಟುವ ದರದಲ್ಲಿ ಗ್ರಾಹಕರಿಗೆ ಸುರಕ್ಷಿತವಾಗಿ ತಲುಪಿಸುವ ಕಾರ್ಯಕ್ಕೆ ಒತ್ತು ನೀಡುತ್ತಿದೆ.

ಫ್ಯಾಶನ್‌ ಕ್ಷೇತ್ರವೂ ಮಹತ್ತರವಾದುದಾಗಿದ್ದು, ಭಾರಿ ಪ್ರಮಾಣದ ವಹಿವಾಟು ಸಾಮರ್ಥಯ ಹೊಂದಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ಅವಕಾಶವಿದೆ,” ಎಂದು ಹೇಳಿದರು. ಅಂತಿಮವಾಗಿ ಮಾತನಾಡಿದ ಸತ್ಯ ನಾದೆಲ್ಲಾ, “ಭಾರತದಲ್ಲಿ ಹೊಸ ಸ್ಟಾರ್ಟ್‌ಅಪ್‌ಗ್ಳು ದೊಡ್ಡ ಸಂಖ್ಯೆಯಲ್ಲಿ ಆರಂಭವಾಗುತ್ತಿದ್ದು, ಇ-ಮಾರುಕಟ್ಟೆ ಕ್ಷೇತ್ರದಲ್ಲಿ ಹೆಚ್ಚು ಸ್ಟಾರ್ಟ್‌ಅಪ್‌ಗ್ಳು ಆರಂಭವಾಗಿವೆ. ಹಾಗಾಗಿ ಸುಧಾರಿತ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜನರ ಸಬಲೀಕರಣಕ್ಕೆ ಬಳಸುವಂತಾದರೆ ಪ್ರಯತ್ನದ ಆಶಯ ಈಡೇರಿದಂತೆ,” ಎಂದರು. 

ಮೈಕ್ರೋಸಾಫ್ಟ್- ಫ್ಲಿಪ್‌ಕಾರ್ಟ್‌ ಒಡಂಬಡಿಕೆ
ಐಟಿ ಕ್ಷೇತ್ರದ ದಿಗ್ಗಜ ಮೈಕೋಸಾಫ್ಟ್ ಸಂಸ್ಥೆಯ ಮೈಕ್ರೋಸಾಫ್ಟ್ “ಅಜೂರ್‌’ಅನ್ನು ತನ್ನ ಎಕ್ಸ್‌ಕ್ಲೂಸಿವ್‌ “ಪಬ್ಲಿಕ್‌ ಕ್ಲೌಡ್‌’ ವೇದಿಕೆಯನ್ನಾಗಿ ಮಾಡಿಕೊಳ್ಳಲು ಫ್ಲಿಪ್‌ಕಾರ್ಟ್‌ ಮುಂದಾಗಿದೆ. ಈ ಸಂಬಂಧ ಮೈಕ್ರೋಸಾಫ್ಟ್ನ ಸಿಇಒ ಸತ್ಯ ನಾದೆಲ್ಲಾ ಹಾಗೂ ಫ್ಲಿಪ್‌ಕಾರ್ಟ್‌ ಗ್ರೂಪ್‌ನ ಸಿಇಒ ಬಿನ್ನಿ ಬನ್ಸಲ್‌ ಒಡಂಬಡಿಕೆ ಮಾಡಿಕೊಂಡಿದ್ದಾರೆ.

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.