ವರ್ಣಗಳಿಂದ ಭಾವನೆ ಪ್ರತಿಬಿಂಬಿಸುವ ಕಲೆ
Team Udayavani, Feb 21, 2017, 12:04 PM IST
ಬೆಂಗಳೂರು: “ವರ್ಣಗಳ ಮೂಲಕ ಭಾವನೆಗಳನ್ನು ಪ್ರತಿಬಿಂಬಿಸುವುದೇ ಚಿತ್ರಕಲೆ. ಕಲಾಕೃತಿಗಳನ್ನು ರಚಿಸುವುದು ಕಲಾವಿದನ ಸೃಜನಶೀಲತೆಗೆ ಹಿಡಿದ ಕನ್ನಡಿ,” ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ಸೂದ್ ಹೇಳಿದರು. ಚಿತ್ರಕಲಾ ಪರಿಷತ್ನಲ್ಲಿ ಸೋಮವಾರ ಆಯೋಜಿಸಿದ್ದ ಜಿ.ಎಸ್.ಸುಜೀತ್ಕುಮಾರ ಅವರ “ದಿ ಬುಲ್’ ಕಲಾಕೃತಿಗಳ ಪ್ರದರ್ಶನದಲ್ಲಿ ಮಾತನಾಡಿರು.
“ಶ್ರದ್ಧೆ ಮತ್ತು ನಿರಂತರ ಕಲಿಕೆಯಿಂದ ಅತ್ಯುತ್ತಮ ಕಲಾಕೃತಿ ರಚಿಸಲು ಸಾಧ್ಯ. ಅದರಲ್ಲೂ ಒಂದೇ ವಿಷಯ ಇಟ್ಟುಕೊಂಡು ವಿವಿಧ ಭಾವನೆಗಳನ್ನು ಪ್ರತಿಬಿಂಬಿಸುವ ಕಲಾಕೃತಿಗಳ ರಚನೆ ಕಷ್ಟ. ಸೃಜನಶೀಲ ಕಲಾವಿದ ಮಾತ್ರ ಅಂತಹ ಕಲಾಕೃತಿ ರಚಿಸಬಲ್ಲ. ಸುಜೀತ್ಕುಮಾರ್ ಅವರು ಅತ್ಯುತ್ತಮ ಕಲಾವಿದ. ಕಲಾಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡುವಂತಾಗಲಿ,” ಎಂದು ಹೇಳಿದರು.
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, “ಯುವ ಕಲಾವಿದ ಸುಜೀತ್ ಅವರು ಕಲಾಕ್ಷೇತ್ರದಲ್ಲಿ ಉತ್ತುಂಗಕ್ಕೇರಬೇಕು. ಯಾವುದೇ ಕಲಾಪ್ರಕಾರಗಳು ನಾಡಿನ ಸಾಂಸ್ಕೃತಿಕ ನೆಲೆ, ಶ್ರೀಮಂತಿಕೆಯ ಪ್ರತಿಬಿಂಬ,” ಎಂದರು. ಕಲಾವಿದ ಸುಜೀತ್ಕುಮಾರ್ ಮಾತನಾಡಿ, “ನಾನು ಗ್ರಾಮೀಣ ಹಿನ್ನೆಲೆಯವ. ನನನ್ನು ಪ್ರೋತ್ಸಾಹಿಸಿದ ಹಿರಿಯ ಕಲಾವಿದ ದಿವಂಗತ ಯುಸೂಫ್ ಅರಕ್ಕಲ್ ಅವರಿಗೆ ಈ ಚಿತ್ರಕಲಾ ಪ್ರದರ್ಶನ ಅರ್ಪಿತ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.