ಮಣಿಪಾಲ: ಆನ್‌ಲೈನ್ ತರಗತಿ ಆರಂಭ
Team Udayavani, Feb 21, 2017, 12:32 PM IST
ಉಡುಪಿ: ಮಣಿಪಾಲ ವಿ.ವಿ. ತರಗತಿ ಕೋಣೆಗೆ ತಂತ್ರಜ್ಞಾನ ಬಳಸುವ ನೂತನ ಕ್ರಮ ಜಾರಿಗೆ ತಂದಿದೆ. ಮಣಿಪಾಲ ಎಂಐಟಿಯ ಸರ್ ಎಂ.ವಿ. ಸಭಾಂಗಣದಲ್ಲಿ ಸೋಮವಾರ ಆನ್‌ಲೈನ್ ತರಗತಿಯನ್ನು (ವರ್ಚುವಲ್ ಕ್ಲಾಸ್‌ರೂಮ್) ಎಂಇಎಂಜಿ ಆಡಳಿತ ನಿರ್ದೇಶಕ ಮತ್ತು ಸಿಇಒ ಡಾ|ರಂಜನ್ ಪೈ ಉದ್ಘಾಟಿಸಿದರು.
ಜೈಪುರ, ಸಿಕ್ಕಿಂ, ದುಬಾೖಯಲ್ಲಿರುವ ಮಣಿಪಾಲ ಸಮೂಹದ ಕ್ಯಾಂಪಸ್‌ಗಳಲ್ಲಿಯೂ ಇದನ್ನು ಸಂಯೋಜಿಸಲಾಗುತ್ತದೆ ಎಂದು ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ತಿಳಿಸಿದರು. ಈ ತಂತ್ರಜ್ಞಾನ ಬೋಧನಾ ಶೈಲಿಯನ್ನೇ ಬದಲಾಯಿಸಲಿದೆ ಎಂದು ಅವರು ಹೇಳಿದರು.
ನಮ್ಮ ಸಹಸಂಸ್ಥೆಗಳೂ ಈ ಸೌಲಭ್ಯವನ್ನು ಬಳಸಿಕೊಳ್ಳಲು ಅವಕಾಶಗಳಿವೆ ಎಂದು ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು ಹೇಳಿದರು. ಆನ್‌ಲೈನ್ ತರಗತಿಯಲ್ಲಿ ಪರಸ್ಪರ ಸಂವಹನವೂ ಸಾಧ್ಯ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಮುಖ್ಯ ಮಾಹಿತಿ ಅಧಿಕಾರಿ ಬಾಲಕೃಷ್ಣ ರಾವ್ ಬೆಂಗಳೂರಿನಿಂದ ಸಂವಹನದಲ್ಲಿ ತಿಳಿಸಿದರು.
ವಿದ್ಯಾರ್ಥಿಗಳು ಯಾವುದೇ ಸ್ಥಳದಿಂದಲೂ ಯಾವುದೇ ಸಮಯದಲ್ಲಿ ತರಗತಿಯ ಲಾಭ ಪಡೆಯಬಹುದು ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಮಾಹಿತಿ ತಂತ್ರಜ್ಞಾನ ಸಹಾಯಕ ನಿರ್ದೇಶಕ ಸತೀಶ ಕಾಮತ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.