ನಾಗರಹೊಳೆ ಅರಣ್ಯಕ್ಕೆ ಕಾವಲುಗಾರರೇ ಇಲ್ಲ!


Team Udayavani, Feb 21, 2017, 12:39 PM IST

mys3.jpg

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅಧಿಕಾರಿಗಳು ಹಾಗೂ ಕೆಳ ಹಂತದ ಖಾಯಂ ಸಿಬ್ಬಂದಿ ಸೇರಿದಂತೆ ಶೇಕಡ 40 ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಕಾಡು ರಕ್ಷಿಸಲು ತೊಡಕಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಿದ ಕಾಲಕ್ಕೆ ಹಚ್ಚ ಹಸಿರಾಗಿದ್ದ ಕಾಡು ವರ್ಷದಿಂದ ವರ್ಷಕ್ಕೆ ಮಳೆ ಕೊರತೆ, ಅಂತರ್ಜಲ ಕುಸಿತದಿಂದ ತತ್ತರಿಸಿದೆ.

ಸೋಲಾರ್‌ ಬಳಸಿ ಬೋರ್‌ವೆಲ್‌ ಮುಖಾಂತರ ನೀರು ತುಂಬಿಸುವ ಯತ್ನದ ನಡುವೆಯೂ ಕೆರೆ – ಕಟ್ಟೆಗಳು ಬರಿದಾಗುತ್ತಿವೆ. ಅರಣ್ಯದ ಗಿಡಮರಗಳು ಒಣಗಿ ನಿಂತಿವೆ, ಈಗಾಗಲೇ ಬಿರು ಬೇಸಿಗೆ ಆರಂಭವಾಗಿದ್ದು, ನಾಗರಹೊಳೆಯಲ್ಲಿ ಅಧಿಕಾರಿಗಳು ಸೇರಿದಂತೆ 386 ಸಿಬ್ಬಂದಿ ಇರಬೇಕಿತ್ತು. ಆದರೆ 132 ಹುದ್ದೆಗಳು ಖಾಲಿ ಉಳಿದಿವೆ. ಇದರಿಂದ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವುದು ಕಷ್ಟಸಾಧ್ಯ.

ಉದ್ಯಾನದೊಳಗೆ ಕಾಡ್ಗಿಚ್ಚಾದರೆ, ಕಾಡಿನ ಹೊರಗಿರುವ ಮಂದಿಯ ಭಯವೂ ಸಿಬ್ಬಂದಿಗಳಿಗೆ ತಲೆಬೇನೆಯಾಗುತ್ತಿದೆ. ಈಗಾಗಲೆ ಅಲ್ಲಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈಗಾಗಲೇ ಒಬ್ಬ ಅರಣ್ಯ ರಕ್ಷಕನ ಜೀವವನ್ನೂ ಬಲಿ ಪಡೆದಿದೆ. ನೂರಾರು ಎಕರೆ ಅರಣ್ಯ ಪ್ರದೇಶ ಅಗ್ನಿಗಾಹುತಿಯಾಗಿದ್ದರೂ ಅರಣ್ಯ ಇಲಾಖೆಯಾಗಲಿ, ಸರ್ಕಾರ ಅಗತ್ಯ ಸಿಬ್ಬಂದಿಗಳ ನೇಮಕಕ್ಕೆ ಮುಂಜಾಗ್ರತಾ ಕ್ರಮವಹಿಸಿಲ್ಲ.

132 ಹುದ್ದೆ ಖಾಲಿ: ನಾಗರಹೊಳೆಯ ಎಲ್ಲ 9 ವಲಯಗಳಲ್ಲಿ ವಲಯ ಅರಣ್ಯಾಧಿಕಾರಿಗಳಿದ್ದರೆ, 37 ಉಪ ವಲಯರಣ್ಯಾಧಿಕಾರಿಗಳ ಪೈಕಿ ಕೇವಲ 8 ಮಂದಿ ಮಾತ್ರ ಇದ್ದಾರೆ. 29 ಹುದ್ದೆ ಖಾಲಿ ಇದೆ. 106 ಅರಣ್ಯ ರಕ್ಷಕರ ಹುದ್ದೆಗೆ 45 ಹಾಗೂ 78 ವಾಚರ್‌ಗೆ 13 ಹುದ್ದೆ ಭರ್ತಿಯಾಗಿಲ್ಲ.

ಬೆಂಕಿ ತಡೆಗೆ ದಿನಗೂಲಿಗಳೇ ಗತಿ: ಉದ್ಯಾನಗಳಲ್ಲಿ ಬಹುತೇಕ ಗುತ್ತಿಗೆ ನೌಕರರೇ ಗೇಟ್‌ಗಳಲ್ಲಿ ಕಚೇರಿ ಸಹಾಯಕರಾಗಿ, ಬೆಂಕಿ ತಡೆ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮೇಲ್ವಿಚಾರಣೆ ನಡೆಸುವ ಅಧಿಕಾರಿಗಳ ಹುದ್ದೆಗಳೇ ಖಾಲಿಯಿದೆ. ಹಿರಿಯ ಐಎಫ್ಎಸ್‌ ಅಧಿಕಾರಿಗಳು ಮಾತ್ರ ಮುಂಬಡ್ತಿ ಸಂದರ್ಭ ಬರುತ್ತಿದ್ದಂತೆ, ಕಾಲಕಾಲಕ್ಕೆ ತಮಗೆ ಬೇಕಾದ ಹುದ್ದೆಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆ. ಆದರೆ ಕೆಳ ಹಂತದಲ್ಲಿ ಪ್ರಾಣವನ್ನೇ ಒತ್ತೆ ಇಟ್ಟು ಕಾಡು ರಕ್ಷಣೆ ಮಾಡುವ ರಕ್ಷಕರ ಹುದ್ದೆ ಭರ್ತಿಗೆ ಮಾತ್ರ ಆಸಕ್ತಿ ತೋರುತ್ತಿಲ್ಲ.

3 ವರ್ಷಗಳಿಂದ ಹುಲಿ ಸಂರಕ್ಷಣೆಗಾಗಿ ನಿಯೋಜನೆಗೊಂಡಿರುವ ಟೈಗರ್‌ ರ್ಯಾಪಿಡ್‌ ಆಕ್ಷನ್‌ ಫೋರ್ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಹಗಲಿರುಳು ಸಾತ್‌ ನೀಡುತ್ತಿದ್ದಾರೆ. ಈ ಹಿಂದಿನ ಸರ್ಕಾರದಲ್ಲಿ ವಾಚರ್‌ಗಳ ಕೆಲ ಹುದ್ದೆ ನೇಮಕ ಮಾಡಿಕೊಂಡರೂ ಮತ್ತೆ ಖಾಲಿಯಾದ ಹುದ್ದೆ ಭರ್ತಿ ಮಾಡಿಯೇ ಇಲ್ಲ. ಉದ್ಯಾನದಲ್ಲಿ ಕೆಲಸ ಮಾಡುವ ಉತ್ತರ ಕರ್ನಾಟಕದ ಬಹುತೇಕ ಮಂದಿ ಖಾಯಂ ಆಗುವವರೆಗೆ ಮಾತ್ರ ಕರ್ತವ್ಯ ನಿರ್ವಹಿಸಿ ಬಳಿಕ ವರ್ಗಾಯಿಸಿಕೊಂಡು ಹೋಗುತ್ತಿದ್ದಾರೆ.

ಇಲ್ಲಿ ಫಾರೆಸ್ಟರೇ ಇಲ್ಲ: ನಾಗರಹೊಳೆ ಉದ್ಯಾನವನದ ಅರಣ್ಯದಂಚಿನಲ್ಲಿರುವ ವಲಯಗಳಾದ ಕಲ್ಲಹಳ್ಳ 5, ಹುಣಸೂರು 2 ಹಾಗೂ ವೀರನಹೊಸಹಳ್ಳಿ ವಲಯದಲ್ಲಿ ಒಬ್ಬರೂ ಫಾರೆಸ್ಟರ್‌ ಇಲ್ಲ. ಇನ್ನುಳಿದಂತೆ ನಾಗರಹೊಳೆ-5, ಮೇಟಿಕುಪ್ಪೆ$-3, ಅಂತರ ಸಂತೆ-4, ಆನೆಚೌಕೂರು ವಲಯಗಳಲ್ಲಿ-3 ಫಾರೆಸ್ಟರ್‌ ಹುದ್ದೆಗಳು ಖಾಲಿ ಇವೆ. ಇಲ್ಲಿ ಯಾವಾಗಲೂ ಬೆಂಕಿ ಆತಂಕದಲ್ಲಿ ಕಾರ್ಯ ನಿರ್ವಹಿಸಬೇಕಾದ ಸಿಬ್ಬಂದಿ, ತಮ್ಮ ಮೇಲಧಿಕಾರಿಗಳಿಲ್ಲದೆ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಾದೇಶಿಕ ವಿಭಾಗದಲ್ಲೂ 21 ಹುದ್ದೆ ಖಾಲಿ: ಇನ್ನು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಪಿರಿಯಾಪಟ್ಟಣ, ಕೆ.ಆರ್‌.ನಗರ ಹಾಗೂ ಹುಣಸೂರು ತಾಲೂಕು ಸೇರುತ್ತಿದೆ. ಆದರೆ ಇಲ್ಲಿಯೂ 81 ವಿವಿಧ ಹುದ್ದೆಗಳ ಪೈಕಿ 21 ಹುದ್ದೆ ಖಾಲಿ ಇದೆ. ಈ ಪೈಕಿ ಎರಡು ಆರ್‌ಎಫ್ಒ, 5 ಫಾರೆಸ್ಟರ್‌, 10 ಗಾರ್ಡ್‌, 3 ವಾಹನ ಚಾಲಕರು ಸೇರಿದಂತೆ ಒಟ್ಟು 21 ಹುದ್ದೆ ಭರ್ತಿಯಾಗಬೇಕಿದೆ.

ಬಂಡೀಪುರದ್ದೂ ಇದೇ ಕಥೆ…
ಇನ್ನು ಬಂಡೀಪುರದಲ್ಲಿ 341 ಮಂದಿಗೆ 118 ಸಿಬ್ಬಂದಿಗಳ ಹುದ್ದೆ ಖಾಲಿ ಉಳಿದಿದ್ದು, 13 ವಲಯ ಅರಣ್ಯಾಧಿಕಾರಿಗಳ ಪೈಕಿ 3 ವಲಯಗಳಲ್ಲಿ ಅಧಿಕಾರಿಗಳಿಲ್ಲ, 30ರ ಪೈಕಿ 14 ಉಪ ವಲಯ ಅರಣ್ಯಾಧಿಕಾರಿಗಳ ಹುದ್ದೆ ಹಾಗೂ 133 ಅರಣ್ಯ ರಕ್ಷಕರ ಪೈಕಿ 55 ಹಾಗೂ 90 ವಾಚರ್‌ಗಳ ಪೈಕಿ 10 ಹುದ್ದೆ ಹಾಗೂ ಇಲ್ಲಿ 5 ಪ್ರಥಮ ದರ್ಜೆ ಸಹಾಯಕ ಮತ್ತು ಎರಡು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳೂ ಖಾಲಿ ಇದೆ.

ವಲಯಗಳಲ್ಲಿ ಅಗತ್ಯ ಸಿಬ್ಬಂದಿಗಳಿಲ್ಲದೇ ಪ್ರಭಾರವಾಗಿಯೇ ಕಾರ್ಯ ನಿರ್ವಹಣೆಯಾಗುತ್ತಿದೆ. ಇತ್ತೀಚೆಗೆ ಕಾಡಿನ ಗಿಡಮರಗಳು ಒಣಗಿ ನಿಂತಿವೆ, ಸಿಬ್ಬಂದಿ ಕೊರತೆಯಿಂದ ಕಾಡು ಕಾಯುವುದು, ಬೆಂಕಿಯಿಂದ ರಕ್ಷಿಸಲು ತಲೆ ನೋವಾಗಿ ಪರಿಣಮಿಸಿದೆ. ನಮ್ಮ ಕಷ್ಟ ಕೇಳುವವರೇ ಇಲ್ಲ. ಹಗಲು-ರಾತ್ರಿ ಎನ್ನದೆ ಕುಟುಂಬದಿಂದ ದೂರ ಉಳಿದು ಕಾರ್ಯ ನಿರ್ವಹಿಸುತ್ತಿದ್ದೇವೆ. ಇನ್ನಾದರೂ ಸರ್ಕಾರ, ಹಿರಿಯ ಅಧಿಕಾರಿಗಳು ಅಗತ್ಯ ಸಿಬ್ಬಂದಿ ನೇಮಿಸಿ ನಮ್ಮ ಕಷ್ಟ ಕಡಿಮೆ ಮಾಡಲಿ.
-ನೊಂದ ಅರಣ್ಯ ಸಿಬ್ಬಂದಿ

* ಸಂಪತ್‌ಕುಮಾರ್‌

ಟಾಪ್ ನ್ಯೂಸ್

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

1-bheesh

Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ

1-kushtagi

Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

adani

Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.