ಸರ್ವಜ್ಞನ ಮೂರೇ ಸಾಲಲ್ಲಿದೆ ಎಲ್ಲ ಸಾರ: ಡಿಸಿ ರಮೇಶ್‌


Team Udayavani, Feb 21, 2017, 1:07 PM IST

dvg3.jpg

ದಾವಣಗೆರೆ: ಆಡು ಮುಟ್ಟದ ಸೊಪ್ಪಿಲ್ಲ ಹಾಗೆಯೇ ಸರ್ವಜ್ಞ ಮುಟ್ಟದ ವಲಯವಿಲ್ಲ. ಸಾವಿರಾರು ಪುಟಗಳ ಗ್ರಂಥ ಹೇಳುವ ಸಾರವನ್ನು ಮೂರು ಸಾಲಿನಲ್ಲಿ ತಿಳಿ ಹೇಳಿರುವ ಅಸಾಮಾನ್ಯ ವ್ಯಕ್ತಿ ಸರ್ವಜ್ಞ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಬಣ್ಣಿಸಿದ್ದಾರೆ. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಕುಂಬಾರರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಸಮಾಜದ ಎಲ್ಲ ವಲಯಗಳ ಬಗ್ಗೆ ಸರ್ವಜ್ಞ ತಮ್ಮ ತ್ರಿಪದಿಗಳಲ್ಲಿ ಹೇಳಿದ್ದಾರೆ.

ಶಾಲೆಗೆ ಹೋಗದೆ, ಅಕ್ಷರ ಕಲಿಯದೆ ಸರ್ವಜ್ಞ ಆದ ರೀತಿಗೆ ಸರಿಸಾಟಿಯೇ ಇಲ್ಲ. ಮಹಾಭಾರತ, ರಾಮಾಯಣದಂತಹ ಗ್ರಂಥಗಳ ಸಾರವನ್ನು ತ್ರಿಪದಿಯಲ್ಲೇ ಹೇಳಿರುವ ಅವರು, ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಅಂದಿರುವುದು ಎಂದಿಗೂ ಪ್ರಸ್ತುತ ಎಂದರು. ಇಂದು ನಾವು ಅತ್ಯಾಧುನಿಕ ಯುಗದಲ್ಲಿದ್ದೇವೆ.

ಬೇರೆ ಗ್ರಹಗಳಿಗೆ ಉಪಗ್ರಹಗಳನ್ನು ಕಳುಹಿಸುತ್ತಿದ್ದೀವೆ. ಈ ಎಲ್ಲ ತಂತ್ರಜ್ಞಾನದಿಂದ ಎಲ್ಲಿಗೆ ತಲುಪಲಿದ್ದೇವೆ ಎಂಬುದು ಗೊತ್ತಿಲ್ಲ. ಆದರೆ ಎಲ್ಲದರ ಅಂತ್ಯ ಆಹಾರ ಸಂಪಾದನೆ. ಇದನ್ನೇ ಸರ್ವಜ್ಞ ಎಲ್ಲಕ್ಕೂ ಮಿಗಿಲಾಗಿರುವುದು ಮೇಟಿ ವಿದ್ಯೆ ಎನ್ನುವ ಮೂಲಕ ಹೇಳಿದ್ದಾರೆ ಎಂದು ತಿಳಿಸಿದರು. 

ಸರಳ ಭಾಷೆ, ಎಲ್ಲರ ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಸರ್ವಜ್ಞ ಹೇಳಿರುವ ರೀತಿ ಎಂದಿಗೂ ಮಾದರಿಯಾಗಿದೆ. ಕೋಟಿ ಮಾತಿಗಿಂತ ಮಿತವಾಗಿ ಮಾತನಾಡುವ ಮೂಲಕ ಉತ್ತಮ ಕಾರ್ಯವೆಸಗಬೇಕೆನ್ನುವ ಅವರ ಮಾತು ಸರ್ವ ಕಾಲಕ್ಕೂ ಪ್ರಸ್ತುತವಾಗಿದ್ದು, ಇದಕ್ಕೆ ಪೂರಕವಾಗಿ ನಾವು ಕೆಲಸ ಮಾಡಬೇಕಿದೆ.

ಅವರ ಆಲೋಚನೆ ಮನನ ಮಾಡಿಕೊಂಡು, ಅವರು ತೋರಿರುವ ಪಥದಲ್ಲಿ ಸಾಗಬೇಕಿದೆ ಎಂದರು. ಹರಪನಹಳ್ಳಿ ಎಸ್‌ಯುಜೆಎಂ ಕಾಲೇಜಿನ ಉಪನ್ಯಾಸಕ ಎಚ್‌. ಮಲ್ಲಿಕಾರ್ಜುನ ಮಾತನಾಡಿ, ಸರ್ವಜ್ಞ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ದೇಶಕ್ಕೇ ಮಾದರಿಯಾದ ಸಂತ. ಅವರು ರಚಿಸಿರುವ ಸಾವಿರಕ್ಕೂ ಹೆಚ್ಚು ತ್ರಿಪದಿಗಳಲ್ಲಿ ಸಾಮಾಜಿಕ ಕಳಕಳಿ, ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮತ್ತು ನಿಜ ಪಥದ ಸೂಚನೆ ಕಾಣಬಹುದು.

ಎಲ್ಲರಿಗೂ ಅರ್ಥವಾಗುವಂತೆ ಹೇಳಿರುವ ಅವರ ಸರಳ ಭಾಷೆ ಮತ್ತು ರೀತಿ ಅದ್ಭುತ ಎಂದರು. 16ನೇ ಶತಮಾನದಲ್ಲಿ ಹಾವೇರಿ ಜಿಲ್ಲೆಯ ಮಾಸೂರು-ಅಂಬಲೂರು ಊರಿನ ಕುಂಬಾರ ಮಾಳಿ ಮತ್ತು ಮಲ್ಲರಸ ದಂಪತಿಯ ಪುತ್ರನೇ ಪುಷ್ಪದತ್ತ. ಕಾವ್ಯ ನಾಮ ಸರ್ವಜ್ಞ. ಸರ್ವಜ್ಞರ ಇತಿಹಾಸ ಕುತೂಹಲಕರವಾಗಿದೆ.

ಅವರನ್ನು ಜನತೆಯ ಕವಿ ಎಂದೆನ್ನಬಹುದು. ಅವರೊಬ್ಬ ನಿಷ್ಟುರವಾದಿಯಾಗಿದ್ದರೂ ವಿನೋದ, ಸಹಾನುಭೂತಿ ಮತ್ತು ಸರಳವಾಗಿ ಸಮಾಜ ಸುಧಾರಣೆ ಸಂದೇಶಗಳನ್ನು ತಮ್ಮ ತ್ರಿಪದಿಗಳಲ್ಲಿ ಸಾರಿದ್ದಾರೆ ಎಂದು ಹೇಳಿದರು. ತಾಯಿಯ ಮಹತ್ವ, ಡಾಂಭಿಕತೆ, ತೋರಿಕೆಯ ಭಕ್ತಿ, ವಿದ್ಯೆ, ಆರೋಗ್ಯ, ದುಶ್ಚಟದಿಂದ ದೂರವಿರುವ ಬಗ್ಗೆ ಹಾಗೂ ವ್ಯವಹಾರ ಕೌಶಲ್ಯ ಸೇರಿದಂತೆ ಸಮಾಜದ ಎಲ್ಲ ವಲಯಗಳ ಬಗ್ಗೆ ಸರ್ವಜ್ಞರು ಜನಸಾಮಾನ್ಯರ ಮನ ಮುಟ್ಟುವಂತೆ ಹೇಳಿದ್ದಾರೆ.

ಇಂತಹ ಮಾದರಿ ಸಂತರ ಆಲೋಚನೆಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ ಎಂದ ಅವರು ಇಂತಹವರ ಜಯಂತಿ ಕೇವಲ ಕೆಲ ಸಮುದಾಯಕ್ಕೆ ಸೀಮಿತವಾಗಬಾರದು ಎಂದು ತಿಳಿಸಿದರು.ದುಂದ್ಯಪ್ಪನವರು ರಚಿಸಿದ ಕುಲದೀಪಕರು ಎಂಬ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಧಿಷ್ಠಾಧಿಕಾರಿ ಯಶೋಧ ವಂಟಿಗೋಡಿ ಬಿಡುಗಡೆಗೊಳಿಸಿದರು.

ಕುಂಬಾರ ಸಮಾಜದ ಅಧ್ಯಕ್ಷ ಬಸವರಾಜ ಕುಂಚೂರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್‌ ಬೆಕ್ಕೇರಿ ಸ್ವಾಗತಿಸಿದರು. ಮುದ್ದಣ್ಣ ನಾಗರಾಳ್‌ ನಿರೂಪಿಸಿದರು. ಕೆ.ಜಿ.ಲೋಕೋಶ್‌ ವಂದಿಸಿದರು.  

ಟಾಪ್ ನ್ಯೂಸ್

Mantralya-Shree

Thirupathi Laddu: ದೇಗುಲಗಳು ಸರಕಾರದ ಹಿಡಿತದಿಂದ ಮುಕ್ತವಾಗಲಿ: ಶ್ರೀಸುಬುಧೇಂದ್ರ ಸ್ವಾಮೀಜಿ

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

sanjay-raut

Ajit Pawar-led NCP ಹೊರಹಾಕಲು ಬಿಜೆಪಿ-ಶಿಂಧೆ ಸೇನೆ ಯತ್ನ: ಸಂಜಯ್ ರಾವುತ್

11

Kukke Subrahmanya; ಸರಕಾರದ ವೈಫಲ್ಯ ಬಗ್ಗೆ ಜನಜಾಗೃತಿ; ನಿಖಿಲ್‌ ಕುಮಾರಸ್ವಾಮಿ

Puttur: ಆಂಬ್ಯುಲೆನ್ಸ್-ಪಿಕಪ್ ನಡುವೆ ಢಿಕ್ಕಿ: ಹಸುಳೆಗೆ ಗಾಯ

Puttur: ಆಂಬ್ಯುಲೆನ್ಸ್-ಪಿಕಪ್ ನಡುವೆ ಢಿಕ್ಕಿ: ಹಸುಳೆಗೆ ಗಾಯ

1-udupi

Udupi; ಹೊರರಾಜ್ಯದ ಕಾರ್ಮಿಕರ ತಂಡಗಳ ಬೀದಿ ಕಾಳಗ: ಹಲವರು ವಶಕ್ಕೆ

Rain

Rain: ದ.ಕ.ಜಿಲ್ಲೆಯ ಹಲವೆಡೆ ಮಳೆ; ಸೆ.24ಕ್ಕೆ ಕರಾವಳಿಗೆ ರೆಡ್‌ ಅಲರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mantralya-Shree

Thirupathi Laddu: ದೇಗುಲಗಳು ಸರಕಾರದ ಹಿಡಿತದಿಂದ ಮುಕ್ತವಾಗಲಿ: ಶ್ರೀಸುಬುಧೇಂದ್ರ ಸ್ವಾಮೀಜಿ

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

sanjay-raut

Ajit Pawar-led NCP ಹೊರಹಾಕಲು ಬಿಜೆಪಿ-ಶಿಂಧೆ ಸೇನೆ ಯತ್ನ: ಸಂಜಯ್ ರಾವುತ್

11

Kukke Subrahmanya; ಸರಕಾರದ ವೈಫಲ್ಯ ಬಗ್ಗೆ ಜನಜಾಗೃತಿ; ನಿಖಿಲ್‌ ಕುಮಾರಸ್ವಾಮಿ

accident

Kaup; ಮೂಳೂರು: ಪಾದಯಾತ್ರೆ ಹೋಗುತ್ತಿದ್ದ ಭಕ್ತರಿಗೆ ಕಾರು ಢಿಕ್ಕಿ; ಮೂವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.