ಜಯದೇವ ಶ್ರೀಗಳ ಸ್ಮರಣೆ ಭಾಗ್ಯದ ಕೆಲಸ


Team Udayavani, Feb 21, 2017, 1:18 PM IST

dvg7.jpg

ದಾವಣಗೆರೆ: ಸಾಮಾಜಿಕ ಜೀವನದಲ್ಲಿ ಸಮಾನತೆಗಾಗಿ ಅಹರ್ನಿಶಿ ಶ್ರಮಿಸಿದ ಜಯದೇವ ಜಗದ್ಗುರುಗಳನ್ನು ಸ್ಮರಿಸಿಕೊಳ್ಳುವುದು ಪುಣ್ಯದ ಕೆಲಸ, ಜೀವನದ ಭಾಗ್ಯ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಬಣ್ಣಿಸಿದ್ದಾರೆ. 

ಶಿವಯೋಗಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಜಯದೇವ ಮುರುಘರಾಜೇಂದ್ರ ಶ್ರೀಗಳ 60ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ-2017ರ ಪೂರ್ವಸಿದ್ಧತಾ ಸಮಾಲೋಚನಾ ಸಭೆ ಸಾನ್ನಿಧ್ಯ ವಹಿಸಿ, ಮಾತನಾಡಿದ ಅವರು, ಜಯದೇವ ಶ್ರೀಗಳು ಶಿಕ್ಷಣ ಪ್ರೇಮಿ, ಸಮಾನತೆಯ ಹರಿಕಾರ.

12ನೇ ಶತಮಾನದ ಬಸವಾದಿ ಶರಣರು ಕಂಡ ಸಮ ಸಮಾಜ ನಿರ್ಮಾಣದ ಕನಸು ನನಸು ಮಾಡಲು ಶ್ರಮಿಸಿದ ಜಯದೇವ ಶ್ರೀ ಸ್ಮರಣೆ ಪುಣ್ಯದ ಕೆಲಸ ಎಂದರು. ಮಾ.31, ಏಪ್ರಿಲ್‌ 1, 2ರಂದು ಮೂರು ದಿನಗಳ ಕಾಲ ನಡೆಯುವ ಈ ಸ್ಮರಣೋತ್ಸವದಲ್ಲಿ ಸಮಕಾಲೀನ ಸಮಸ್ಯೆಗಳ ಕುರಿತು ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜೊತೆಗೆ ಗತವೈಭವ ಮೆಲುಕು ಹಾಕಲಾಗುವುದು. 

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಗುತ್ತದೆ. ನಾಡಿನ ಗಣ್ಯರಿಗೆ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು. ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಪ್ರಾಸ್ತವಿಕವಾಗಿ ಮಾತನಾಡಿ, ಜಯದೇವ ಶ್ರೀಗಳ ಸ್ಮರಣೆ ಒಂದು ರೀತಿಯಲ್ಲಿ ಪವಾಡದಂತೆ ನಡೆದುಹೋಗುತ್ತದೆ.

ಅನೇಕ ಬಾರಿ ಹೆಸರು ಹೇಳಬಯಸದವರು ಶ್ರೀಗಳ ಸ್ಮರಣೆಗೆ ದೇಣಿಗೆ ನೀಡುತ್ತಾರೆ. ಅವರ ಮೇಲಿನ ಭಕ್ತಿ, ಪೀತಿ ಇಂದಿಗೂ ಕಡಮೆ ಆಗಿಲ್ಲ. ಅವರನ್ನು ಸದಾ ಸ್ಮರಿಸೋರು ಹೆಚ್ಚಿದ್ದಾರೆ ಎಂದರು. ನಾಡಿನಾದ್ಯಂತ ಮೊಟ್ಟ ಮೊದಲ ಬಾರಿಗೆ ಉಚಿತ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿದ ಜಯದೇವ ಶ್ರೀಗಳು ಅನೇಕ ಗಣ್ಯರ ಬೆಳವಣಿಗೆಗೆ ಕಾರಣ ಆಗಿದ್ದಾರೆ. 

ದಾವಣಗೆರೆಯ ಜಯದೇವ ನಿಲಯದಲ್ಲಿ ಓದಿದ ಜಿ.ಎಸ್‌. ಶಿವರುದ್ರಪ್ಪ, ಎಂ. ಚಿದಾನಂದ ಮೂರ್ತಿಯವರು ದೊಡ್ಡ ದೊಡ್ಡ ಸಾಧನೆ ಮಾಡಿದ್ದಾರೆ. ಇಂತಹ ಅನೇಕ ಸಾಧಕರು ಜಯದೇವ ಶ್ರೀಗಳ ಕೃಪೆಗೆ ಪಾತ್ರರಾಗಿದ್ದಾರೆ ಎಂದು ಅವರು ತಿಳಿಸಿದರು. 

ಮಾಜಿ ಶಾಸಕ ಯಜಮಾನ್‌ ಮೋತಿ ವೀರಣ್ಣ, ಮುಖಂಡರಾದ ಎಚ್‌.ಎಸ್‌. ನಾಗರಾಜ್‌, ಹಿರಿಯ ವೈದ್ಯ ಎಸ್‌.ಎಂ. ಯಲಿ, ಡಾ| ಜಿ.ಸಿ. ಬಸವರಾಜ್‌, ಜಿ. ಶಿವಯೋಗಪ್ಪ, ದೇವರಮನಿ ಶಿವಕುಮಾರ್‌ ಇತರರು ವೇದಿಕೆಯಲ್ಲಿದ್ದರು. ವಿವಿಧ ಸಮಾಜದ ಗಣ್ಯರು, ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿಗಳು, ಭಕ್ತರು, ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು ಸ್ಮರಣೋತ್ಸವಕ್ಕೆ ತಮ್ಮದೇ ಆದ ಕೊಡುಗೆ ನೀಡುವ ವಾಗ್ಧಾನ ಮಾಡಿದರು.  

ಟಾಪ್ ನ್ಯೂಸ್

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

1-reess

Modi USA tour; ಭಾರತದ ಸೆಮಿಕಂಡಕ್ಟರ್‌ ಕನಸಿಗೆ ಈಗ ಹೊಸ ‘ಶಕ್ತಿ’

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Ambulance

Vahical Riders: ಸಂಚಾರ ನಿಯಮ ಉಲ್ಲಂಘಿಸಿದರೆ ಲೈಸನ್ಸ್‌ ರದ್ದು: ಸಿಎಂ ಸಿದ್ದರಾಮಯ್ಯ

Chandra

Mini Moon!;ಇದೇ 29ರಿಂದ ಭೂಮಿಗೆ ಬರಲಿದೆ ಹೊಸ ಅತಿಥಿ

nitin-gadkari

4th term ಅಧಿಕಾರ ಗ್ಯಾರಂಟಿ ಇಲ್ಲ, ಆದರೆ…: ಕೇಂದ್ರ ಸಚಿವ ಗಡ್ಕರಿ

“ಕಾರಿನಲ್ಲಿ ಬೆಂಕಿ ಬರುತ್ತಿದೆ’ ಎಂದು ನಂಬಿಸಿ ದೋಚುವ ತಂಡ

Mangalore-Bangalore Highway:”ಕಾರಿನಲ್ಲಿ ಬೆಂಕಿ ಬರುತ್ತಿದೆ’ ಎಂದು ನಂಬಿಸಿ ದೋಚುವ ತಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

1-reess

Modi USA tour; ಭಾರತದ ಸೆಮಿಕಂಡಕ್ಟರ್‌ ಕನಸಿಗೆ ಈಗ ಹೊಸ ‘ಶಕ್ತಿ’

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Ambulance

Vahical Riders: ಸಂಚಾರ ನಿಯಮ ಉಲ್ಲಂಘಿಸಿದರೆ ಲೈಸನ್ಸ್‌ ರದ್ದು: ಸಿಎಂ ಸಿದ್ದರಾಮಯ್ಯ

Chandra

Mini Moon!;ಇದೇ 29ರಿಂದ ಭೂಮಿಗೆ ಬರಲಿದೆ ಹೊಸ ಅತಿಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.