ಸ್ನಾತಕ ಕೋರ್ಸ್‌ಗಳಲ್ಲಿ ಸಮುದಾಯ ಸೇವೆ
Team Udayavani, Feb 21, 2017, 2:21 PM IST
ಧಾರವಾಡ: ರಾಷ್ಟ್ರೀಯತೆ ಮತ್ತು ಸಮಗ್ರತೆ ಪರಿಕಲ್ಪನೆಗಳು ಸಮುದಾಯ ಸೇವೆಯನ್ನು ಬಿಂಬಿಸುವ ಪ್ರಮುಖ ಅಂಶಗಳಾಗಿವೆ. ಈ ನಿಟ್ಟಿನಲ್ಲಿ ಸಮುದಾಯ ಸೇವೆಯನ್ನು ವಿವಿಧ ವಿಶ್ವವಿದ್ಯಾಲಯಗಳ ಸ್ನಾತಕ ಕೋರ್ಸ್ ಗಳಲ್ಲಿ ಐಚ್ಚಿಕ ವಿಷಯವನ್ನಾಗಿ ಸೇರಿಸಲು ಉದ್ದೇಶಿಸಲಾಗಿದೆ ಎಂದು ಬೆಂಗಳೂರು ಎನ್‌ಎಸ್‌ಎಸ್ ಪ್ರಾಂತೀಯ ಕೇಂದ್ರ ನಿರ್ದೇಶಕ ಅರುಣ ಪೂಜಾರ ಹೇಳಿದರು.
ಕೃಷಿ ವಿಶ್ವವಿದ್ಯಾಲಯದ ಗ್ರಾಮೀಣ ಗೃಹ ವಿಜ್ಞಾನ ಮಹಾವಿದ್ಯಾಲಯ, ಕರ್ನಾಟಕ ರಾಜ್ಯ ಎನ್‌ಎಸ್‌ಎಸ್ ಕೋಶ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸೋಮವಾರದಿಂದ ಹಮ್ಮಿಕೊಂಡ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಸ್ತು ಬದ್ಧ ಜೀವನ, ಗುಣಾತ್ಮಕತೆ ಇವುಗಳು ಯುವಕರಲ್ಲಿ ಹಾಗೂ ಸಮಾಜದಲ್ಲಿ ಪ್ರಮುಖ ಬದಲಾವಣೆ ತರಬಹುದಾಗಿದೆ. ಈ ನಿಟ್ಟಿನಲ್ಲಿ ತಾಯ್ನಾಡಿನ ಏಳ್ಗೆಗೆ ದೇಶದ ಶೇ.65ರಷ್ಟು ಜನಸಂಖ್ಯೆಯಲ್ಲಿ ಪ್ರತಿನಿಧಿಧಿಸುವ ಯುವಶಕ್ತಿಯಲ್ಲಿ ಸೇವಾ ಮನೋಭಾವ, ಕನಸುಗಾರಿಕೆ, ಕೆಲಸಗಾರಿಕೆ ಹಾಗೂ ದೂರದೃಷ್ಟಿತ್ವಗಳನ್ನು ಮೇಳೈಸಬೇಕಿದೆ ಎಂದರು.
ಭಾರತೀಯ ಸ್ಟೇಟ್ ಬ್ಯಾಂಕ್‌ನ ಪ್ರಬಂಧಕ ಪುವನೇಶನ್ ಮಾತನಾಡಿ, ಭಾಷೆ, ಸಂಸ್ಕೃತಿ ಎಲ್ಲೆಗಳನ್ನು ಮೀರಿಸುವ ಇಂತಹ ಶಿಬಿರಗಳು ಇಂದಿನ ಅಗತ್ಯಗಳಾಗಿದ್ದು, ಗ್ರಾಮೀಣ ಸೇವೆಯಲ್ಲಿ ಯುವಕರನ್ನು ಹುರಿದುಂಬಿಸಲು ಸ್ಟೇಟ್‌ಬ್ಯಾಂಕ್ ಅಗತ್ಯ ನೆರವು ಒದಗಿಸಲಿದೆ.
ಈ ಶಿಬಿರದ ವ್ಯವಸ್ಥೆಯಲ್ಲಿ ಟಿ-ಶರ್ಟ್ ಹಾಗೂ ಟೊಪ್ಪಿಗೆಗಳನ್ನು ಸ್ಟೇಟ್ ಬ್ಯಾಂಕ್ ಒದಗಿಸಿದ್ದು, ಮುಂದಿನ ಪೀಳಿಗೆಯ ಮಾನವೀಯ ಮೌಲ್ಯಗಳನ್ನು ಹೊಂದಿರುವ ಯಶಸ್ವಿ ನೇತಾರರನ್ನು ರೂಪಿಸಲು ಇಂತಹ ಶಿಬಿರಗಳು ಸಹಾಯಕವಾಗಲಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೃವಿವಿ ಕುಲಪತಿ ಡಾ| ಡಿ.ಪಿ. ಬಿರಾದಾರ ಮಾತನಾಡಿ, ಯುವ ಶಕ್ತಿಯು ಅತ್ಯಂತ ಸೂಕ್ಷ್ಮಮತಿಯಾಗಿದ್ದು, ಬಾಹ್ಯ ಶಕ್ತಿಗಳಿಂದ ಆಕರ್ಷಿತವಾಗುವ ಸಾಧ್ಯತೆ ಇದೆ.
ಧನಾತ್ಮಕ ವಿಚಾರಗಳನ್ನು ಮಾತ್ರ ಅಳವಡಿಸಕೊಳ್ಳಬೇಕಲ್ಲದೇ ಋಣಾತ್ಮಕ ವಿಚಾರಗಳಿಗೆ ಕಿವಿಗೊಡದೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಡಾ| ಎಸ್.ಕೆ.ಗಾಳಿ ಇದ್ದರು. ವಿನುತಾ ಪ್ರಾರ್ಥಿಸಿದರು. ವಿಜಯಲಕೀತಂಡದವರು ಎನ್‌ಎಸ್‌ಎಸ್ ಗೀತೆ ಪ್ರಸ್ತುತಪಡಿಸಿದರು. ಡಾ| ಛಾಯಾ ಬಡಿಗೇರ ಸ್ವಾಗತಿಸಿದರು.
ಡಾ|ಜೆ.ಎಸ್. ಸೊನ್ನದ ಪ್ರಾಸ್ತಾವಿಕ ಮಾತನಾಡಿದರು. ಸುರೇಖಾ ಸಂಕನಗೌಡರ ನಿರೂಪಿಸಿದರು. ಡಾ|ಮಂಜುಳಾ ಪಾಟೀಲ ವಂದಿಸಿದರು. ಆರು ರಾಜ್ಯಗಳನ್ನು ಪ್ರತಿನಿಧಿಧಿಸುವ 150 ಕ್ಕೂ ಹೆಚ್ಚು ಎನ್‌ಎಸ್‌ಎಸ್ ಸ್ವಯಂ ಸೇವಕರು, ಕಾರ್ಯಕ್ರಮ ಅಧಿಧಿಕಾರಿಗಳು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು, ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.