4,300 ಕೋ. ರೂ. ಅಘೋಷಿತ ಆದಾಯ ಪತ್ತೆ


Team Udayavani, Feb 21, 2017, 2:42 PM IST

patte.jpg

ಮಂಗಳೂರು: ಆದಾಯ ತೆರಿಗೆ ಇಲಾಖೆ (ತನಿಖೆ) ಗೋವಾ ಮತ್ತು ಕರ್ನಾಟಕ ವಲಯದಲ್ಲಿ 2016-17ನೇ ಆರ್ಥಿಕ ಸಾಲಿನಲ್ಲಿ ಫೆ. 15ರ ವರೆಗೆ ಇಲಾಖಾ ಅಧಿಕಾರಿಗಳು ನಡೆಸಿದ ಪರಿಶೀಲನೆ ಕಾರ್ಯಾಚರಣೆಗಳಲ್ಲಿ ಒಟ್ಟು 4,300 ಕೋ. ರೂ. ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಹಾನಿರ್ದೇಶಕ (ತನಿಖೆ) ಬಿ.ಆರ್‌. ಬಾಲಕೃಷ್ಣನ್‌ ಹೇಳಿದರು.

ಮಂಗಳೂರಿನಲ್ಲಿ ಸೋಮವಾರ ಆದಾಯ ತೆರಿಗೆ ಇಲಾಖೆ ತನಿಖೆ ನಿರ್ದೇಶನಾಲಯದ ಮಂಗಳೂರು ಘಟಕದ ನೂತನ ಕಚೇರಿ ಉದ್ಘಾಟನೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನ. 8ರಿಂದ ರೂಪಾಯಿ ಅಪಮೌಲಿÂàಕರಣದ ಬಳಿಕ ಆದಾಯ ತೆರಿಗೆ ಇಲಾಖೆ (ತನಿಖೆ) ಗೋವಾ ಮತ್ತು ಕರ್ನಾಟಕ ವಲಯದಲ್ಲಿ ನಡೆಸಿದ ಪರಿಶೀಲನ ಕಾರ್ಯಾಚರಣೆಯಲ್ಲಿ 1,000 ಕೋ. ರೂ.ಗೂ ಅಧಿಕ ಅಘೋಷಿತ ಆದಾಯ ಪತ್ತೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಅಧಿಕವಾಗಿದೆ ಎಂದರು.

 ವಿವರಣೆ ನೀಡುವಂತೆ ದೇಶದಲ್ಲಿ 18 ಲಕ್ಷ ಬ್ಯಾಂಕ್‌ ಖಾತೆದಾರರಿಗೆ ನೀಡಿರುವ ನೋಟಿಸ್‌ಗಳ‌ಲ್ಲಿ 8 ಲಕ್ಷ ಮಂದಿ ಸ್ಪಂದಿಸಿ ಉತ್ತರ ನೀಡಿದ್ದಾರೆ. 10 ಲಕ್ಷ ಖಾತೆದಾರರು ಸ್ಪಂದಿಸಿಲ್ಲ. ಕೇಂದ್ರ ಕಚೇರಿಯಿಂದ ಖಾತೆದಾರರ ವಿವರಗಳು ಆದಾಯ ತೆರಿಗೆ ವಿಭಾಗ ಕಚೇರಿಗಳಿಗೆ ಬರಲಿದ್ದು, ಅಲ್ಲಿಂದ ಅಧಿಕಾರಿಗಳು ಸ್ಥಳೀಯವಾಗಿ ಈ ಖಾತೆಗಳ ಪರಿಶೀಲನೆ ನಡೆಸಲಿದ್ದಾರೆ ಎಂದು ಬಾಲಕೃಷ್ಣನ್‌ ತಿಳಿಸಿದರು. 

ಅತೀ ದೊಡ್ಡ ಕಾರ್ಯಾಚರಣೆ
ಆದಾಯ ತೆರಿಗೆ ಅಧಿಕಾರಿಗಳು ಫೆಬ್ರವರಿಯಲ್ಲಿ ಮಂಗಳೂರು ಕಚೇರಿಯಲ್ಲಿ ನಡೆಸಿದ ಒಂದು ನಿರ್ದಿಷ್ಟ ತಪಾಸಣೆ ಕಾರ್ಯಾಚರಣೆಯಲ್ಲಿ 172 ಕೋ. ರೂ. ಅಘೋಷಿತ ಆದಾಯ ಪತ್ತೆಯಾಗಿದೆ. ಫೆ. 1ರಂದು ತಪಾಸಣೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದು ಆದಾಯ ತೆರಿಗೆ ಇಲಾಖೆ (ತನಿಖೆ)ಗೆ ಗೋವಾ ಮತ್ತು ಕರ್ನಾಟಕ ವಲಯದಲ್ಲಿ ಏಕ ನಿರ್ದಿಷ್ಟ ತಪಾಸಣಾ ಕಾರ್ಯಾಚರಣೆಯಲ್ಲಿ ಈ ವರ್ಷ ಪತ್ತೆಯಾದ ಅತೀ ದೊಡ್ಡ ಅಘೋಷಿತ ಆದಾಯ. ಪ್ರಕರಣದಲ್ಲಿ ಒಳಗೊಂಡಿರುವ ವ್ಯಕ್ತಿಗಳ ತಂಡ ಹೊಂದಿರುವ ಉದ್ಯಮಗಳು ಹಾಗೂ ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿ ಮಂಗಳೂರು, ಕಾರ್ಕಳ, ಉಡುಪಿ, ಪುತ್ತೂರು, ಚಿಕ್ಕಮಗಳೂರು, ಬೆಂಗಳೂರು ಕಚೇರಿ ಹಾಗೂ ಕೆಲವು ತಾಣಗಳಿಗೆ ಆದಾಯ ತೆರಿಗೆ ತನಿಖೆ ವಿಭಾಗದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವಿವರಿಸಿದರು. 

ವಿಶೇಷ ನ್ಯಾಯಾಲಯಕ್ಕೆ ಮನವಿ
ಆದಾಯ ತೆರಿಗೆ ಮೊಕದ್ದಮೆಗಳ ಪ್ರಕರಣಗಳ ಇತ್ಯರ್ಥ ವಿಳಂಬವಾಗುತ್ತಿದೆ. ಕಳೆದ 3 ವರ್ಷಗಳಿಂದ ಸುಮಾರು 160 ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಪ್ರಕರಣಗಳು ತ್ವರಿತಗತಿಯಲ್ಲಿ ಇತ್ಯರ್ಥವಾಗುವ ನಿಟ್ಟಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡುವಂತೆ ಕರ್ನಾಟಕ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಲಾಗುವುದು ಎಂದು ಬಾಲಕೃಷ್ಣನ್‌ ತಿಳಿಸಿದರು.  ಹೆಚ್ಚುವರಿ ನಿರ್ದೇಶಕ (ತನಿಖೆ) ವಿಮಲ್‌ ಆನಂದ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಧಿಕಾರಿಗಳಾದ ಅರುಣ್‌ ವಂದಿಸಿದರು. ಸುಭಾಷ್‌ ನಿರೂಪಿಸಿದರು.

ನೂತನ ಕಚೇರಿ ಉದ್ಘಾಟನೆ
ಆದಾಯ ತೆರಿಗೆ ಇಲಾಖೆ ತನಿಖೆ ನಿರ್ದೇಶನಾಲಯದ ಮಂಗಳೂರು ಘಟಕದ ನೂತನ ಕಚೇರಿಯನ್ನು ಪಾಂಡೇಶ್ವರದ ಅಲುºಕರ್ಕ್‌ ಹೌಸ್‌ನ ನೆಲ ಅಂತಸ್ತಿನಲ್ಲಿ ಬಿ.ಆರ್‌. ಬಾಲಕೃಷ್ಣನ್‌ ಅವರು ಉದ್ಘಾಟಿಸಿದರು. 

ಆದಾಯ ತೆರಿಗೆ (ತನಿಖೆ) ಬೆಂಗಳೂರು ಪ್ರಧಾನ ನಿರ್ದೇಶಕ ಕಿಶೋರ್‌ ಕುಮಾರ್‌ ವ್ಯವಹರೆ, ಆದಾಯ ತೆರಿಗೆ ಮಂಗಳೂರು ಪ್ರಧಾನ ಆಯುಕ್ತ ನರೋತ್ತಮ್‌ ಮಿಶ್ರಾ ಅತಿಥಿಗಳಾಗಿದ್ದರು. 

ಇದೇ ಸಂದರ್ಭ ಇಲಾಖೆಯಲ್ಲಿ ಉತ್ತಮ ಸಾಧನೆ ತೋರಿದ ಆದಾಯ ತೆರಿಗೆ ನಿರೀಕ್ಷಕರಾದ ಅನಿಲ್‌ ಕೆ., ವಾಸು ನಾೖಕ್‌ ಎಂ., ಶಿಜು ಕೆ., ಕೃಷ್ಣ ಮೂರ್ತಿ, ಗೋಪಿ ಟಿ.ಪಿ. ಅವರನ್ನು ಅಭಿನಂದಿಸಲಾಯಿತು. 

ಮಂಗಳೂರು ಕೇಂದ್ರ ಅಬಕಾರಿ ಸೇವಾ ತೆರಿಗೆ ಆಯುಕ್ತ ಡಾ| ಸುಬ್ರಹ್ಮಣ್ಯ ಮೊದಲಾದವರು ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

ಕಡಬ, ಬೆಳ್ತಂಗಡಿ ಸೇರಿದಂತೆ ಅಕ್ರಮ ಮದ್ಯಮಾರಾಟದ ವಿರುದ್ದ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು

ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.