ಹೆಣ್ಣು ಭ್ರೂಣ ಹತ್ಯೆ ತಡೆಗೆ ಪುರುಷರು ಮುಂದಾಗಲಿ
Team Udayavani, Feb 21, 2017, 2:43 PM IST
ಕಲಬುರಗಿ: ಹೆಣ್ಣು ಭ್ರೂಣ ಹತ್ಯೆ ತಡೆಯುವ ಕಾರ್ಯ ಕೇವಲ ಮಹಿಳೆಯರು ಮತ್ತು ಸರಕಾರ ಮಾಡಬೇಕು ಎನ್ನುವ ಉಮೇದಿಯಿಂದ ಹೊರಬಂದು ಪುರುಷರು ಕೂಡ ಕಕ್ಕುಲಾತಿಯಿಂದ ಭ್ರೂಣ ಹತ್ಯೆ ತಡೆಗೆ ಮುಂದಾಗಬೇಕು ಎಂದು ಇಂದಿರಾ ಡ್ವಾಕಾ ಗ್ರೂಪ್ ಅಧ್ಯಕ್ಷೆ ರಾಜಶ್ರೀ ದೇಶಮುಖ ಹೇಳಿದರು.
ತಾಲೂಕಿನ ಕುರಿಕೋಟಾ ಗ್ರಾಮದ ಚಿಕ್ಕವೀರೇಶ್ವರ ಸಂಸ್ಥಾನ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಟಿ ಬಚಾವೋ.. ಬೇಟಿ ಪಡಾವೋ.. ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು, ಮಾತನಾಡಿದರು. ಹೆಣ್ಣು ಭ್ರೂಣ ಹತ್ಯೆ ಹೆಣ್ಣು ಮಕ್ಕಳಿಗೆ ಸಂಬಂಧಿಸಿದಲ್ಲದೆ, ಇದೊಂದು ಸಾಮಾಜಿಕ ರೋಗ. ಇದನ್ನು ತೊಡೆಯುವಲ್ಲಿ ಮಹಿಳೆಯರಷ್ಟೇ ಪಾಲನ್ನು ಪುರುಷರು ವಹಿಸಿಕೊಳ್ಳಬೇಕು.
ಆಗಲೇ ಭ್ರೂಣ ಹತ್ಯೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗುತ್ತದೆ. ಇಂತಹ ಸಾಮಾಜಿಕ ಹೋರಾಟಗಳಿಂದ ಪುರುಷರನ್ನು ಹೊರಗಿಟ್ಟು ಮಾತನಾಡುವುದು ಸರಿ ಎನ್ನಿಸುವುದಿಲ್ಲ ಎಂದು ಹೇಳಿದರು. ಕಾಯಿದೆ ಜಾರಿ ಆಗಿ ದಶಕಗಳೇ ಕಳೆದಿವೆ. ಆದರೂ ನಿಯಂತ್ರಣ ಮಾಡುವಲ್ಲಿ ಇಡೀ ಸಮಾಜ ಹೈರಾಣಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಜನರಲ್ಲಿ ಜಾಗೃತಿ ಉಂಟು ಮಾಡುವುದರ ಜತೆಯಲ್ಲಿ ಅಂತಹ ಜಾಗೃತಿಯಲ್ಲಿ ಪುರುಷರು ಹೆಚ್ಚಿದ್ದು, ತಮ್ಮ ಕಾಳಜಿ ಮತ್ತು ಬದ್ಧತೆ ಪ್ರದರ್ಶನ ಮಾಡಬೇಕಿದೆ. ಹೆಣ್ಣು ಭ್ರೂಣ ಹತ್ಯೆಗೆ ಅತ್ತೆ.. ಅತ್ತಿಗೆ, ನಾದಿನಿ ಹಾಗೂ ವಾರಗಿತ್ತಿಯ ಪಾತ್ರದಷ್ಟೇ ಮಾವ, ಗಂಡ, ಮೈಧುನರ ಪಾತ್ರವೂ ಇರುತ್ತದೆ ಎನ್ನುವುದುನ್ನು ನಾವು ಮರೆಯಲು ಆಗುವುದಿಲ್ಲ.
ಆದ್ದರಿಂದ ಈ ನಿಟ್ಟಿನಲ್ಲಿ ಪುರುಷರು ಹೆಚ್ಚು ಸಕೀÅಯರಾಗಬೇಕು ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಸುಭಾಷ ರಾಠೊಡ, ಕಾಯ್ದೆಗಿಂತಲೂ ಮುಖ್ಯವಾಗಿ ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ಸಮಾಜದಲ್ಲಿ ಅನಿಷ್ಟ ಪದ್ಧತಿಯಾಗಿರುವ ಹೆಣ್ಣು ಭ್ರೂಣ ಹತ್ಯೆಯಂತಹ ದುಷ್ಕತ್ಯ ನಿರ್ಮೂಲನೆಗೆ ಮುಂದಾಗಬೇಕಿದೆ ಎಂದು ಹೇಳಿದರು.
ಗಂಡು ಸಂತಾನದಿಂದ ಮಾತ್ರ ದೇಶ, ಸಮಾಜ ಹಾಗೂ ಕುಟುಂಬದ ಅಭಿವೃದ್ಧಿ ಎಂಬ ಮನೋಭಾವನೆ ಅನೇಕರಲ್ಲಿ ಈಗಲೂ ಇರುವುದರಿಂದ ಹೆಣ್ಣು ಭ್ರೂಣ ಹತ್ಯೆಯಂತಹ ದುರ್ಘಟನೆ ನಡೆಯುತ್ತಿದೆ. ಈ ಧೋರಣೆ ಮೊದಲು ಬದಲಾಗಬೇಕು ಎಂದು ಹೇಳಿದರು. ನಮ್ಮ ರಾಜ್ಯದಲ್ಲಿ 18 ವರ್ಷಕ್ಕಿಂತ ಮೊದಲೇ ಮದುವೆಯಾಗುವ ಮಹಿಳೆಯರ ಪ್ರಮಾಣ 2007-08ರಲ್ಲಿ ಶೇ 25ರಷ್ಟಿದೆ.
ಆದರೆ ಅಂತಹ ಮಹಿಳೆಯರ ಪ್ರಮಾಣ ಕೊಪ್ಪಳ, ಕಲಬುರಗಿ, ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಶೇ.40ಕ್ಕಿಂತ ಅಧಿಧಿಕವಿದೆ. ನಮ್ಮ ರಾಜ್ಯದಲ್ಲಿ 2011ರಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ. 60ರಷ್ಟು ದಾಟದ ಎಂಟು ಜಿಲ್ಲೆಗಳಿವೆ. ಸಾಕ್ಷರತೆಯಲ್ಲಿ ಲಿಂಗ ಅಸಮಾನತೆ 2001ರಲ್ಲಿ ಶೇ. 18.66ರಷ್ಟು ಅಂಶಗಳಷ್ಟಿದ್ದುದು 2011 ಶೇ. 15.62 ಅಂಶಗಳಿಗೆ ಇಳಿದಿದೆ.
ನಮ್ಮ ರಾಜ್ಯದಲ್ಲಿ ಸಾಕ್ಷರತೆಯಲ್ಲಿ ಲಿಂಗ ಅಸಮಾನತೆ ಶೇ.20 ಅಂಶಗಳು ಮತ್ತು ಅದಕ್ಕಿಂತ ಅಧಿಕ ಬಾಗಲಕೋಟೆ, ವಿಜಯಪುರ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿದೆ ಎಂದು ವಿಷಾದಿಸಿದರು. ಸಾನ್ನಿಧ್ಯ ವಹಿಸಿದ್ದ ಪಾಳಾದ ಗುರುಮೂರ್ತಿ ಶಿವಾಚಾರ್ಯರು, ಶ್ರೀಮಠದ ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಮಳಖೇಡ ಹಜರತ್‌ಸೈಯ್ಯದ್ ಶಹಾ ಮುಸ್ತಫಾ ಖಾದ್ರಿ, ಬಿಕೆಡಿಬಿ ಸದಸ್ಯ ವೈಜನಾಥ ತಡಕಲ್, ತಾಪಂ ಸದಸ್ಯೆ ಪಾರ್ವತಿ ಮಹಾದೇವಪ್ಪ ಸಲಗರ, ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಗಿರೆಪ್ಪ ಬಸಚವಣ್ಣ, ಶರಣೆ ಕರುಣಾ ಸಲಗರ ಹುಮನಾಬಾದ, ಚನ್ನಮ್ಮ ಸಾಹು ಇದ್ದರು. ನಾಗಲಿಂಗಯ್ಯ ಮಠಪತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.