ಕೆರ್ವಾಶೆ ಗ್ರಾಮಸ್ಥರ ಸಮಿತಿ ಮುಂಬಯಿ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ


Team Udayavani, Feb 21, 2017, 4:05 PM IST

20-Mum02a.jpg

ಮುಂಬಯಿ: ಬ್ರಹ್ಮಕಲಾಶಭಿಷೇಕ ಹನ್ನೆರಡು ವರ್ಷಕ್ಕೊಮ್ಮೆ ಬರುವಂಥದ್ದು. ಆದರೆ ದೇವಸ್ಥಾನದ ಜೀರ್ಣೋದ್ಧಾರ ನಮ್ಮ ಜೀವಮಾನದಲ್ಲಿ ಒಮ್ಮೆ ಕಾಣಲು ಸಿಗು ವಂಥದ್ದಾಗಿದೆ. ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ಮಂದಿರ ಒಂದು ಐತಿಹಾಸಿಕ ಕ್ಷೇತ್ರವಾಗಿದೆ. ವಿಶ್ವಾಸ ಎಂಬುವುದೇ ಪರಮಾತ್ಮನಾಗಿದ್ದು, ಆ  ನಂಬಿಕೆಯ ಆಧಾರದಿಂದ ಬದುಕು ಕಟ್ಟುತ್ತಾ ಬಂದವರು ನಾವು. ಮುಂಬಯಿ ಜನರ ಗಳಿಕೆಯ ಒಂದು ಭಾಗದಿಂದಾಗಿ ನಮ್ಮ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ದೇವಸ್ಥಾನಗಳು ಉದ್ಧಾರವಾಗುತ್ತಿರುವುದು ನಿಜವಾಗಿಯೂ ಅಭಿನಂದನೀಯ. ಮಾತ್ರ ವಲ್ಲದೆ ಮುಂಬಯಿಗರಿಂದ ಎರಡು ಜಿಲ್ಲೆಗಳ ಬದಲಾವಣೆ ಸಾಧ್ಯವಾಗಿದೆ  ಎಂದು ಕರ್ನಾಟಕ ಸರಕಾರದ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ನುಡಿದರು.

 ಕಾರ್ಕಳ ತಾಲೂಕಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೆರ್ವಾಶೆ ಇದರ ಅಷ್ಟಬಂಧ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ನಿಮಿತ್ತ ಫೆ. 19 ರಂದು  ಸಾಯನ್‌ ಪೂರ್ವದ ನಿತ್ಯಾನಂದ ಸಭಾಗೃಹದಲ್ಲಿ ಕೆರ್ವಾಶೆ ಗ್ರಾಮಸ್ಥರ ಸಮಿತಿ ಮುಂಬಯಿ ಆಯೋಜಿಸಿದ್ದ  ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವಸ್ಥಾನ ಜೀರ್ಣೋದ್ಧಾರ ಎಂಬ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಇದಕ್ಕೆ ಪೂರ್ವಜನ್ಮದ ಪುಣ್ಯದ ಫಲ ಬೇಕು. ಮುಂಬಯಿಯ ಭಕ್ತಾಭಿಮಾನಿಗಳು ಈ ದೇವತಾ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಜೀವನವನ್ನು ಪಾವನವನ್ನಾಗಿಸಿಕೊಳ್ಳಬೇಕು. ನಮ್ಮ ಗಳಿಕೆಯ ಸ್ವಲ್ಪಾಂಶವನ್ನು ಇಂತಹ ಕಾರ್ಯಗಳಿಗೆ ವಿನಿಯೋಗಿಸಿಕೊಂಡಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಈ ಪುಣ್ಯ ಕಾರ್ಯದಲ್ಲಿ ಜಾತಿ, ಮತ, ಧರ್ಮವನ್ನು ಮರೆತು ಎಲ್ಲರೂ ಒಂದಾಗಿ ಭಾಗಿಯಾಗಬೇಕು ಎಂದರು.

ಮುಂಬಯಿ ಉದ್ಯಮಿ, ಧಾರ್ಮಿಕ ಚಿಂತಕ ಕರಿಯಣ್ಣ ಶೆಟ್ಟಿ ಅವರು  ಅಧ್ಯಕ್ಷತೆ ವಹಿಸಿ ಮಾತ ನಾಡಿ, ನಮ್ಮ ಕ್ರೀಯಾಶೀಲತೆಯಿಂದ ಮಾತ್ರ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆಲಸ ಅದಷ್ಟು ಶೀಘ್ರವಾಗಿ ನೇರವೇರಿಸಲು ಸಾಧ್ಯ. ಅಲ್ಲದೆ ಜೀರ್ಣೋದ್ಧಾರ ಕಾರ್ಯವೂ ಯಾವತ್ತೂ ಮುಗಿಯಬೇಕಿತ್ತು.   ಇಷ್ಟು ತಡವಾದುದಕ್ಕೆ  ನಾನು ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ದೇವರ ಕಾರ್ಯದಲ್ಲಿ ಯಾವುದೇ ರೀತಿಯ ತಾರತಮ್ಯ ವಹಿಸದೆ, ಮುಂಬಯಿಯ ಭಕ್ತಾಭಿಮಾನಿಗಳು, ದಾನಿಗಳು ಕೈಜೋಡಿಸಬೇಕು. ಮಾನಸಿಕವಾಗಿ ನಾವು ನೆಮ್ಮದಿಯನ್ನು ಕಾಣಬೇಕಿದ್ದರೆ, ನಮ್ಮ ಬದುಕಿನ ಜಂಜಾಟ ಸ್ವಲ್ಪ ಸಮಯವನ್ನು ಇಂತಹ ಕಾರ್ಯಗಳಿಗೆ ವಿನಿಯೋಗಿಸಿಕೊಳ್ಳುವುದರಲ್ಲಿ ಅರ್ಥವಿದೆ ಎಂದರು.

ಮಹಾಸಭೆಯಲ್ಲಿ ಅತಿಥಿಗಳಾಗಿ ಭಾಗ ವಹಿಸಿದ ನಗರದ  ಉದ್ಯಮಿ, ಸಮಾಜ ಸೇವಕರಾದ ಮಹೇಶ್‌ ಶೆಟ್ಟಿ,  ಶೇಖರ ಶೆಟ್ಟಿ, ವೇದಮೂರ್ತಿ ರಾಮ್‌ ಭಟ್‌ 

ಸಾಣೂರು, ಕೆ. ಸುಧಾಕರ ಬಂಗೇರ, ಸಂಜೀವ ರಾವ್‌ ಅವರು ಸಂದಭೋìಚಿತವಾಗಿ ಮಾತನಾಡಿ ಈ ಪುಣ್ಯಕಾರ್ಯಕ್ಕೆ ಎಲ್ಲರ ಸಹಕಾರವಿರಲಿ ಎಂದರು.

ದೇವಸ್ಥಾನದ ಹಿರಿಯ ಅರ್ಚಕ ಕೆ. ಪದ್ಮನಾಭ ಭಟ್‌, ಸಂಜೀವ ರಾವ್‌, ಕುಲ್‌ದೀಪ್‌ ಸಿಂಗ್‌, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರ್ವಾಶೆ ಅಧ್ಯಕ್ಷ ಹರೀಶ್‌ ಕಾರ್ಣಿಕ್‌  ಮತ್ತಿತರರು ಉಪಸ್ಥಿತರಿದ್ದರು. 
ಶ್ರೀ  ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ವಿದ್ವಾನ್‌  ಕೈರಬೆಟ್ಟು ವಿಶ್ವನಾಥ ಭಟ್‌ ಅವರು ದೀಪ ಬೆಳಗಿಸಿ ಸಭೆಗೆ ಚಾಲನೆಯಿತ್ತು  ಆಶೀರ್ವಚನ ನೀಡಿದರು.

ವಿಜಯ್‌ ಶೆಟ್ಟಿ ಮುಂಬಯಿ, ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಧರ್ಮರಾಜ ಹೆಗ್ಡೆ, ಸುನಿಲ್‌ ಶೆಟ್ಟಿ, ಪ್ರಭಾಕರ ನಾಯಕ್‌, ಸದಾನಂದ ಸಾಲ್ಯಾನ್‌, ಮಹೇಶ್‌ ಶೆಟ್ಟಿ ಅವರು ಪಾಲ್ಗೊಂಡಿದ್ದರು. 

ಸಭೆಯಲ್ಲಿ ಶಿರ್ಲಾಲು, ಮೂಂಡ್ಲಿ, ಮುಡಾರು, ಮಾಳ, ಐದು ಮಾಗಣೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದು ತಮ್ಮ ಸಲಹೆ – ಸೂಚನೆಗಳನ್ನಿತ್ತು ಸಭೆಯ ಯಶಸ್ಸಿಗೆ ಸಹಕರಿಸಿದರು.

ಕೆರ್ವಾಶೆ ಗ್ರಾಮಸ್ಥರ ಸಮಿತಿ ಮುಂಬಯಿ  ಪರವಾಗಿ ಸಾಂತಾಕ್ರೂಜ್‌ ಪೇಜಾವರ  ಮಠದ ಪ್ರಬಂಧಕ ಕೆ. ಹರಿ ಭಟ್‌ ಅವರು ಆಯೋಜಿಸಿದ್ದರು. 
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೆ‌ರ್ವಾಶೆ ಇದರ ಅಧ್ಯಕ್ಷ ಹರೀಶ್‌ ಕಾರ್ನಿಕ್‌ ಸ್ವಾಗತಿಸಿದರು. ಸಂಜೀವ ದೇವಾಡಿಗ ಕೆರ್ವಾಶೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಮ್ಮ ಊರಿನ ಧಾರ್ಮಿಕ ಕ್ಷೇತ್ರಗಳನ್ನು ಉದ್ಧಾರಗೊಳಿಸುವ ಕರ್ತವ್ಯ ನಮ್ಮ ಮೇಲಿದೆ. ನಮ್ಮ ಊರು ಅನ್ನುವುದು ಶರೀರದಂತೆ. ಶರೀರ ಕ್ರಿಯಾತ್ಮಕವಾಗಿರಬೇಕಾದರೆ ಅದು ಜೀವಂತವಾಗಿರಬೇಕು. ಆದುದರಿಂದ ನಮ್ಮ ಊರಿನ ದೇವಸ್ಥಾನಗಳ ಸಂಪೂರ್ಣ ಜೀರ್ಣೋದ್ಧಾರದ ಅಗತ್ಯವಿದೆ. ಊರಿನ ದೇವಸ್ಥಾನ ಎಂದರೆ ಅದೊಂದು ಸಂಪರ್ಕ ಕೇಂದ್ರ. ಮನುಷ್ಯನಾದವನು ನಾಲ್ಕು ವರ್ಷ ಕಲಿತರು ಸಂಸ್ಕಾರಯುಕ್ತವಾದ ಕಲಿಕೆಯಾದರೆ ಅದೇ ಸರಿಯಾದ ಶಿಕ್ಷಣವಾಗುತ್ತದೆ. ಆದುದರಿಂದ ದೇವಸ್ಥಾನದ ಜೀರ್ಣೋದ್ಧಾರ ಎಂದರೆ ನಮ್ಮನ್ನು ನಾವೇ ಜೀರ್ಣೋದ್ಧಾರ ಗೊಳಿಸುವುದು ಎಂದು ಅರ್ಥ. ಈ ಪುಣ್ಯ ಕಾರ್ಯದಲ್ಲಿ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ 
– ವಿದ್ವಾನ್‌  ಕೈರಬೆಟ್ಟು ವಿಶ್ವನಾಥ ಭಟ್‌ (ಸಂಸ್ಥಾಪಕ ಅಧ್ಯಕ್ಷರು :  ಶ್ರೀ  ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ).

ಚಿತ್ರ-ವರದಿ : ರೊನಿಡಾ ಮುಂಬಯಿ

ಟಾಪ್ ನ್ಯೂಸ್

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.