ಲೋಕ “ಪಾವನ’; “ಅನುರಾಗ’ದ ಹುಡುಗಿಯ ಅಂತರಂಗ
Team Udayavani, Feb 22, 2017, 10:43 AM IST
ಇವರು ಪಾವನ. ಬರಿ ಪಾವನ ಎಂದರೆ ಕೂಡಲೇ ಗೊತ್ತಾಗಲ್ಲ ಅದೇ “ಗೊಂಬೆಗಳ ಲವ್’ ಪಾವನ ಎಂದರೆ ಥಟ್ಟನೆ, ಓಹ್ ಅವರಾ?! ಎಂದು ಹೇಳುವಷ್ಟರ ಮಟ್ಟಿಗೆ ಪಾವನ ತಮ್ಮ ಪಾತ್ರಗಳ ಮೂಲಕ ಪರಿಚಿತರಾಗಿದ್ದಾರೆ. ಹಿರಿತೆರೆಯಲ್ಲಿ “ಜಟ್ಟ’, “ಗೊಂಬೆಗಳ ಲವ್’, “ಆಟಗಾರ’ದಂಥ ಸಿನಿಮಾಗಳಲ್ಲಿ ಸತ್ವಯುತ ಪಾತ್ರ ನಿರ್ವಹಿಸಿ ಹೆಸರು ಮಾಡಿದ ಪಾವನ, ಸದ್ಯ ಕಿರುತೆರೆಯಲ್ಲಿ ತಮ್ಮ ಲಕ್ ಟೆಸ್ಟ್ ಮಾಡುತ್ತಾ ಇದ್ದಾರೆ. ಈಗಿವರು “ಅನುರಾಗ’ ಧಾರಾವಾಹಿಯ ಅಳುಮುಂಜಿ ಅಂಜಲಿ. ಹುಟ್ಟಿ ಬೆಳೆದಿದ್ದು ಮಂಡ್ಯದ ನಾಗಮಂಗಲದಲ್ಲಿ. ಮೈಸೂರಿನ ಮಹಾಜನ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಮಾಡಿದ್ದಾರೆ.
– ಮಂಡ್ಯದ ಹುಡುಗಿಗೆ ಸಿನಿಮಾ ಆಸಕ್ತಿ ಶುರುವಾಗಿದ್ದು ಯಾವಾಗ?
ಸಿನಿಮಾ ಆಸಕ್ತಿ ಯಾವಾಗ ಶುರು ಆಯ್ತು ಅಂತ ಹೇಳಕ್ಕಾಗಲ್ಲ. ಮೈಸೂರಿನಲ್ಲಿ ಪದವಿ ಓದುತ್ತಿದ್ದಾಗ ನನಗೆ ಸಿನಿಮಾ ಬಗ್ಗೆ ತೀವ್ರ ಆಸಕ್ತಿ ಇರುವುದು ನನಗೇ ಗೊತ್ತಾಯಿತು. ಕಾಲೇಜು ಮುಗಿಯುವುದರೊಳಗೆ 2 ಸಿನಿಮಾದಲ್ಲಿ ಅಭಿನಯಿಸಿದ್ದೆ.
-ಸಿನಿಮಾದಲ್ಲಿ ನಟಿಸ್ತೀನಿ ಅಂದಾಗ ಅಪ್ಪ, ಅಮ್ಮ ಸಪೋರ್ಟ್ ಮಾಡಿದ್ರಾ?
ಸಪೋರ್ಟಾ? ಮನೇಲಿ ಯಾರಿಗೂ ಸಿನಿಮಾ ಇಂಡಸ್ಟ್ರಿ ಬಗ್ಗೆ ಏನೂ ಗೊತ್ತಿರಲಿಲ್ಲ. ಅವರಿಗೆ ನಾನು ಸಿನಿಮಾ ಸೇರೋದು ಇಷ್ಟ ಇಲ್ಲ ಅಂತ ನನಗೆ ಮೊದಲೇ ಗೊತ್ತಿತ್ತು. ನನ್ನ ಮೊದಲ ಸಿನಿಮಾ, ಬಿ.ಎಂ. ಗಿರಿರಾಜ್ ಅವರ “ಅದ್ವೆ„ತ’. ಇದಕ್ಕಾಗಿ ನಾನು ವರ್ಕ್‌ಶಾಪ್ ಅಟೆಂಡ್ ಮಾಡಿದ್ದೆ. ಬಳಿಕ ನಾನು ಮುಖ್ಯಪಾತ್ರವೊಂದಕ್ಕೆ ಆಯ್ಕೆಯಾದೆ. ಸಿನಿಮಾ ಮುಹೂರ್ತ ಮುಗಿಸಿಕೊಂಡು ಬಂದ ನಂತರ ಮನೆಯಲ್ಲಿ ಅನುಮತಿ ಕೇಳಿದ್ದೆ. ಆಗಲೂ ವಿರೋಧಾನೆ ಇತ್ತು. ಅದರೆ ಅಕ್ಕ ಮಾತ್ರ ಅವತ್ತೂ ನನ್ನ ಹಿಂದೆ ನಿಂತಿದುÉ. ಈಗಲೂ ಅವಳೇ ನನ್ನ ಬಿಗ್ಗೆಸ್ಟ್ ಸ್ಟ್ರೆಂಗ್.
– ಮತ್ತೆ ಮನೆಯವರೆಲ್ಲಾ ಹೇಗೆ ಕನ್ವಿನ್ಸ್ ಆದ್ರು?
ನಾನು ಮಾಡಿದ ಸಿನಿಮಾ ಮತ್ತು ಪಾತ್ರಗಳೇ ಅವರನ್ನು ಕನ್ವಿನ್ಸ್ ಮಾಡಿದುÌ. ನನ್ನ ಪರಿಶ್ರಮ ಮತ್ತು ಕೆಲಸದಿಂದ ಅವರನ್ನು ಒಪ್ಪಿಸಿದೆ.
-ಸಿನಿಮಾ ಗ್ಲಾಮರ್ ಪ್ರಪಂಚ. ಆದರೆ ನೀವು ಡೀಗ್ಲಾಮ್ ರೋಲಲ್ಲೇ ಹೆಚ್ಚು ಕಾಣಿಸಿಕೊಂಡಿದ್ದೀರಿ?
ಹೌದು, ಜಟ್ಟ , ಗೊಂಬೆಗಳ ಲವ್ ಸಿನಿಮಾದಲ್ಲಿ ಅಭಿನಯಿಸುವಾಗ ಈ ಬಗ್ಗೆ ನಾನು ಯೋಚಿಸಿರಲಿಲ್ಲ. ಪಾತ್ರ ಇಷ್ಟ ಆಯ್ತು. ಪಾತ್ರಕ್ಕೆ ಏನು ಬೇಕೋ ಅದನ್ನು ಕೊಟ್ಟೆ. ಇಂಡಸ್ಟ್ರಿಯಲ್ಲಿ ನನ್ನನ್ನು ಈ ಪಾತ್ರಗಳಿಂದ ಗುರುತಿಸಿದರು. ಆದರೆ ಕಮರ್ಶಿಯಲ್ ಸಿನಿಮಾಗಳಿಗೆ ಆಫರ್ ಸಿಕ್ತಾ ಇರಲಿಲ್ಲ. ನಿರ್ದೇಶಕರು ನೀವು ಮಾಡೋ ಅಂಥ ರೋಲ್ ಇದಲ್ಲ ಅಂಥ ಹೇಳೊರು. ಎಲ್ಲರೂ ನಾನು ಆರ್ಟ್ ಮೂವಿಗೇ ಲಾಯಕ್ಕು ಅಂತ ತೀರ್ಮಾನಿಸಿದ್ದರು. ನಂತರ “ಟಿಪಿಕಲ್ ಕೈಲಾಸ’, “ಜಾಕ್ಸನ್’ನಂಥ ಪಕ್ಕಾ ಕಮರ್ಶಿಯಲ್ ಚಿತ್ರಗಳಲ್ಲಿ ಅಭಿನಯಿಸಿದೆ.
– ಸಿನಿಮಾರಂಗದಲ್ಲಿ ಗುರು, ರೋಲ್ ಮಾಡೆಲ್ ಅಂತ ಇದ್ದಾರಾ?
ಬಿ.ಎಂ.ಗಿರಿರಾಜ್ ನನ್ನ ಗುರು. ಅವರೇ ನನ್ನನ್ನು ಸಿನಮಾಗೆ ಪರಿಚಯಿಸಿದ್ದು. ಹಿರಿಯ ನಟಿ ಲಕ್ಷ್ಮಿ ಎಂದರೆ ನನಗೆ ಪ್ರಾಣ. ಅವರ ಎಲ್ಲಾ ಸಿನಿಮಾ ನೋಡಿದೀನಿ.
-ರಿಯಲ್ ಲೈಫ್ನಲ್ಲಿ ಪಾವನ ಎಷ್ಟು ಗ್ಲಾಮರಸ್?
ರೀಲ್‌ಗಿಂತ ರಿಯಲ್‌ನಲ್ಲೇ ನಾನು ಗ್ಲಾಮರಸ್. ನಾನು ಆಡಿಷನ್‌ಗಳಿಗೆ ಹೋದಾಗ ಗೊಂಬೆಗಳ ಲವ್ ಸಿನಿಮಾ ಹೀರೋಯಿನ್ ನೀವೇನಾ? ಅಂತ ಪ್ರಶ್ನೆ ಎದುರಾಗಿದ್ದು ತುಂಬಾ ಸಲ ಇದೆ. ಆಟಗಾರ ಸಿನಿಮಾದ ಆಡಿಷನ್‌ಗೆ ಹೋದಾಗಲೂ ಇಂಥದ್ದೇ ಪ್ರಸಂಗ ನಡೆಯಿತು. ನಿರ್ದೇಶಕರು ನನ್ನನ್ನು ಮೊದಲು ಹೌಸ್‌ವೈಫ್ ಪಾತ್ರಕ್ಕೆ ಆರಿಸಿದ್ದರು. ನಾನು ಆಡಿಷನ್‌ಗೆ ಹೋದ ವೇಳೆ ಅವರು ನನಗೆ ಮಾಡ್ ರೋಲ್ ಕೊಟ್ಟರು.
-ಸಿನಿಮಾದಿಂದ ಸೀರಿಯಲ್ಲಿಗೆ ಬಂದದ್ದಕ್ಕೆ ಕಾರಣ?
ಟೀವಿಯಲ್ಲಿ ಮೊದಲಿಂದಲೂ ಆಫರ್‌ಗಳಿದ್ದವು. ಅನುರಾಗ ಸೀರಿಯಲ್ ಒಪ್ಕೊಳ್ಳೋ ಮೊದಲು ಬಂದ ಸಿನಿಮಾಗಳು ಅಷ್ಟು ಇಷ್ಟ ಆಗಲಿಲ್ಲ. ಈ ವೇಳೆ ಸೀರಿಯಲ್ ಕಡೆ ಸೆಳೆತ ಕೂಡ ಹೆಚ್ಚಾಗಿತ್ತು. 2 ಕೆಟ್ಟ ಸಿನಿಮಾ ಮಾಡೋದಕ್ಕಿಂತ ಒಂದು ಒಳ್ಳೆ ಸೀರಿಯಲ್‌ನಲ್ಲಿ ಪಾತ್ರ ಮಾಡಿ ಜನರಿಗೆ ಹತ್ತಿರ ಆಗೋದು ಒಳ್ಳೆಯದು ಅನಿಸಿತು.
– ಮತ್ತೆ ಸಿನಿಮಾ ಕಡೆ?
ಖಂಡಿತಾ ಹೋಗ್ತಿàನಿ. ಸೀರಿಯಲ್ ಒಂದು ಎಕ್ಸ್‌ಪೆರಿಮೆಂಟ್ ಮತ್ತು ಎಕ್ಸ್‌ಪೀರಿಯನ್ಸ್. ಸಿನಿಮಾ ನನ್ನ ಮೊದಲ ಆದ್ಯತೆ. ನನಗೆ ಪಾತ್ರ ಮುಖ್ಯ. ಸಿಕ್ಕ ಎಲ್ಲಾ ಅವಕಾಶಗಳನ್ನು ನಾನು ಯಾವತ್ತೂ ಒಪ್ಪಿಕೊಂಡಿಲ್ಲ. ಈಗಲೂ ಹಲವಾರು ಆಫರ್‌ಗಳಿವೆ. ಯಾವ ಪಾತ್ರ ಮನಸ್ಸನ್ನು ತಟ್ಟುತ್ತೋ ಅದನ್ನು ಒಪ್ಪಿಕೊಳ್ಳುತ್ತೇನೆ.
ಫುಡ್, ಡಯಟ್:
-ಇಷ್ಟದ ಆಹಾರ ಶೈಲಿ, ಊಟದ ಮೆನು
ನನಗೆ ದೇಸಿ ಅಡುಗೇನೆ ಇಷ್ಟ. ಅಮ್ಮ ಮಾಡೋ ಪಲಾವ್, ಬಿರಿಯಾನಿ ನನ್ನ ಫೇವರೆಟ್. ನಾಟಿ ಕೋಳಿ ಸಾರಿಗೆ ತುಪ್ಪಹಾಕಿಕೊಂಡು ತಿನ್ನೋದು ಬೆಸ್ಟ್ ಊಟದ ಮೆನು
– ನೀವು ಮಾಡಿದ ಅಡುಗೆ ಹಾಳಾಗಿದ್ದು ಇದೆಯಾ?
ಪ್ರತಿ ದಿನ ಹಾಳಾಗುತ್ತೆ(ನಗು). ದಿನ ರುಚಿ, ಹದ ಕೆಡತ್ತೆ. ದಿನವೂ ನನ್ನ ಅಡುಗೆಯನ್ನು ನಾನೇ ಮಾಡಿಕೊಳ್ಳೋದಲ್ವಾ? ಸೋ… ಅದು ಹೇಗಿದ್ದರೂ ತೆಪ್ಪಗೆ ತಿಂತೀನಿ.
– ಪಾರ್ಟಿ ಮಾಡೋದು ಎಲ್ಲಿ?
ಆಚೆ ಹೋಗಿ ಪಾರ್ಟಿ ಮಾಡೋದು ಕಮ್ಮಿ. ಫ್ರೆಂಡ್ಸ್‌ನ ಮನೆಗೇ ಕರಿತೀನಿ. ನಾವೇ ಅಡುಗೆ ಮಾಡಿಕೊಂಡು ಊಟ ಮಾಡಿ ಎಂಜಾಯ್ ಮಾಡ್ತೀವಿ.
– ಚಾಟ್ಸ್ ತಿನ್ನೋದಾದ್ರೆ ಎಲ್ಲಿ ತಿಂತೀರಾ?
ನಿಜ ಹೇಳ್ಬೇಕಂದ್ರೆ ನನಗೆ ಬೆಂಗಳೂರಿನಲ್ಲಿ ಚಾಟ್ಸ್ ಇಷ್ಟ ಇಲ್ಲ. ಮೈಸೂರಿನಲ್ಲಿ ಸಿಗುವಷ್ಟು ಟೇಸ್ಟಿ ಚಾಟ್ಸ್ ಇಲ್ಲಿ ಸಿಗಲ್ಲ. ಮೈಸೂರಿಗೆ ಹೋದ್ರೆ ಮಿಸ್ ಮಾಡೆª ಚುರುಮುರಿ ತಿಂತೀನಿ. ಅಲ್ಲಿ 35 ಥರದ ಚುರುಮುರಿ ಮಾಡ್ತಾರೆ. ಅದು ಒಳ್ಳೆ ಡಯಟ್ ಕೂಡ ಹೌದು.
-ಮತ್ತೆ ನಿಮ್ಮ ಡಯೆಟ್ ಕತೆ?
ಹಾಂ. ನಾನು ಡಯಟ್‌ನಲ್ಲೂ ತುಂಬಾ ಸ್ಟ್ರಿಕ್ಟ್. ಹಾಲು, ಮೊಟ್ಟೆ, ಸೇಬು, ಲೆಮನ್ ಜ್ಯೂಸ್, ಪ್ರೋಟೀನ್ ಶೇಕ್, ಪೀನಟ್ ಬಟರ್, ಚಪಾತಿ, ಚಿಕನ್ ನನ್ನ ಡಯಟ್‌ನ ಪ್ರಮುಖ ಆಹಾರಗಳು. ಸಮಯಕ್ಕೆ ಸರಿಯಾಗಿ ಹಿತ ಮಿತವಾದ ಆಹಾರ ಸೇವನೆ ಮಾಡ್ತೀನಿ. ವೀಕೆಂಡ್‌ನಲ್ಲಿ ನೋ ಡಯಟ್.
-ಫಿಟ್‌ನೆಸ್ ಮೇಂಟೇನ್ ಮಾಡಲು ಏನು ಮಾಡ್ತೀರ?
ಮೂಲತಃ ನಾನು ಅಥ್ಲೀಟ್. ನನ್ನ ಜೀವನದಲ್ಲಿ ಫಿಟ್‌ನೆಸ್‌ಗೆ ಪ್ರಾಮುಖ್ಯತೆ ಕೊಡ್ತೀನಿ. ಪ್ರತಿದಿನ ಜಿಮ್‌ನಲ್ಲಿ ವರ್ಕ್‌ಔಟ್ ಮಾಡ್ತೀನಿ.
– ಶಾಪಿಂಗ್ ಮಾಡೋದು ಎಲ್ಲಿ?
ಒರಾಯನ್ ಮಾಲ್.
ಇತ್ತೀಚೆಗೆ ಶಾಪಿಂಗ್ ಮಾಡೋದು ಕಡಿಮೆಯಾಗಿದೆ. ಅಕ್ಕನೇ ಎಲ್ಲಾ ತಂದುಕೊಡ್ತಾಳೆ. ಅಕ್ಕನ ಚಾಯ್ಸ ನನಗೂ ಇಷ್ಟ.
-ನಿಮ್ಮ ಮೇಕಪ್ ನೀವೇ ಮಾಡ್ಕೊತೀರಾ ಅಂತ ಕೇಳಿದ ನೆನಪು…
ಹಹØಹಾØ…(ನಗು) ಮೇಕಪ್‌ಮನ್‌ಗಳು ಮಾಡೋ ಮೇಕಪ್ ನನಗೆ ಇಷ್ಟ ಆಗ್ತಾ ಇರ್ಲಿಲ್ಲ. ಕನ್ನಡಿ ಮುಂದೆ ಗಂಟೆಗಟ್ಟಲೆ ನಿಂತು ಪ್ರಯೋಗಗಳನ್ನು ಮಾಡ್ತಾ ಕಲಿತುಕೊಂಡೆ. ಈಗ ನಾನೇ ಮೇಕಪ್ ಮಾಡ್ಕೊತೀನಿ. ಮೇಕಪ್ ಅಷ್ಟೇ ಅಲ್ಲ ಕಾಸ್ಟೂÂಮ್ ಡಿಸೈನ್ ಕೂಡಾ ಮಾಡ್ಕೊತೀನಿ. “ಅನುರಾಗ’ ಧಾರಾವಾಹಿಗೆ ನನ್ನ ಮೇಕಪ್, ಕಾಸ್ಟೂÂಮ್ ಎಲ್ಲಾ ನಾನೇ ಮಾಡ್ಕೊàತಾ ಇರೋದು.
-ಮನೇಲಿ ಅಪ್ಪ ಅಮ್ಮಂಗೆ ಸುಳ್ಳು ಹೇಳಿ ಸಿಕ್ಕಿಬಿದ್ದ ಸಂದರ್ಭ
ದಿನಾ ಸುಳ್ಳು ಹೇಳ್ತೀನಿ. ಸುಳ್ಳು ಹೇಳ್ಕೊಂಡೇ ನಟನೆ ಆರಂಭಿಸಿದ್ದು ನಾನು. ಆದರೆ ಸಿಕ್ಕಿ ಬೀಳಲ್ಲ. 2-3 ದಿನಗಳ ನಂತರ ನಾನೇ ಅವರಿಗೆ ಸತ್ಯ ಹೇಳ್ತೀನಿ.
-ದೇವರು ಪ್ರತ್ಯಕ್ಷವಾಗಿ ಮೂರು ವರ ಕೇಳು ಅಂದ್ರೆ ಏನು ಕೇಳ್ತೀರ?
ಕಣ್ತುಂಬಾ ನಿದ್ದೆ. ಬಯಸಿದ ಆಹಾರ ಕೂಡಲೇ ಸಿಗಲಿ. ಎಲ್ಲರಿಗೂ ಒಳ್ಳೆ ಬುದ್ಧಿ ದಯಪಾಲಿಸು ಅಂತ
-ಚೇತನಾ ಜೆ. ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.