ಬ್ಯಾಂಕ್‌-ಅಂಚೆ ಖಾತೆ ತೆರೆಯಿರಿ


Team Udayavani, Feb 22, 2017, 2:46 PM IST

gul2.jpg

ಆಳಂದ: ಸಾಮಾಜಿಕ ಭದ್ರತಾ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳ ಅಂಚೆ ಇಲಾಖೆಯ ಮನಿಆರ್ಡ್‌ರ್‌ ಮೂಲಕ ನೀಡುವ ಮಾಸಾಶನವನ್ನು ಇನ್ನು ಮುಂದೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಹೇಳಿದರು. 

ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ನಡೆದ ತಾಲೂಕಿನ ಅಂಚೆ ಕಚೇರಿ ಮತ್ತು ಅಂಚೆ ಶಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಫಲಾನುಭವಿಗಳ ಖಾತೆಗೆ ಹಣ ಜಮಾಗೊಳಿಸಲು ಫಲಾನುಭವಿಗಳ ವ್ಯಾಪ್ತಿಯಲ್ಲಿನ ಅಂಚೆ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಗತ್ಯ ದಾಖಲೆ ಪಡೆದು ಖಾತೆ ತೆರೆದು ಸಂಖ್ಯೆ ನೀಡಬೇಕು.

ನಂತರ ತಿಂಗಳ ಹಣ ನೇರವಾಗಿ ಅವರ ಖಾತೆಗೆ ಜಮಾಗೊಳ್ಳುತ್ತದೆ. ಇದರಿಂದ ಫಲಾನುಭವಿಗಳಿಗೆ ಮತ್ತು ಅಂಚೆ ಸಿಬ್ಬಂದಿಗಳಿಗೆ ಆಗುತ್ತಿದ್ದ ತೊಂದರೆ ನಿವಾರಣೆ ಆಗಲಿದೆ ಎಂದರು. ಸಾಮಾಜಿಕ ಭದ್ರತೆ ಯೋಜನೆಯ ವಿವಿಧ ಪಿಂಚಣಿ ಪಡೆಯುವ ತಾಲೂಕಿನ ಒಟ್ಟು 30645 ಫಲಾನುಭವಿಗಳ ಪೈಕಿ ರಾಷ್ಟ್ರೀಕೃತ ಬ್ಯಾಂಕ್‌ ಖಾತೆ ಮೂಲಕ 1123 ಫಲಾನುಭವಿಗಳು

ಮತ್ತು ಬ್ಯಾಂಕ್‌ ಗಳಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ಹೊಂದದೆ ಮನಿ ಆರ್ಡ್‌ರ್‌ (ಇಎಂಇ) ಮೂಲಕ ಹಣ ಪಡೆಯುವ ಸುಮಾರು 29522 ಫಲಾನುಭವಿಗಳಿದ್ದಾರೆ. ಇವರೆಲ್ಲರಿಗೂ ಅಂಚೆ ಇಲಾಖೆಯಲ್ಲಿ  ಅಥವಾ ಬ್ಯಾಂಕ್‌ನಲ್ಲಿ ಖಾತೆ ತೆರೆದುಕೊಟ್ಟರೆ ಅನುಕೂಲವಾಗಲಿದೆ ಎಂದರು. 

ಸಭೆಯಲ್ಲಿ ಪಾಲ್ಗೊಂಡಿದ್ದ ಕಲಬುರಗಿಯ ಸಹಾಯಕ ಅಂಚೆ ಅಧಿಧೀಕ್ಷಕ ರಮೇಶ ಕೆ. ಉಮರಾನೆ ಮಾತನಾಡಿ, ಸುಮಾರು 82 ಅಂಚೆ ಶಾಖೆಗಳಿದ್ದು, ಫಲಾನುಭವಿಗಳಿಗೆ ಅನುಕೂಲ ಸ್ಥಳದಲ್ಲಿ ಆಧಾರ ಕಾರ್ಡ್‌ ಸಂಖ್ಯೆ, ಒಪ್ಪಿಗೆ ಪತ್ರ, ಮಂಜೂರಾತಿ ಝರಾಕ್ಸ್‌ ಪ್ರತಿ ಅಥವಾ ಮನಿಆರ್ಡ್‌ರನ ಚೀಟಿ ಕೊಟ್ಟರೆ ಅಂಚೆ ಉಳಿತಾಯ ಖಾತೆ ತೆರೆದುಕೊಡಲಾಗುವುದು ಎಂದರು.

ಈಗಾಗಲೇ ಈ ಕಾರ್ಯ ಚಾಲ್ತಿಯಲ್ಲಿದೆ. ಫಲಾನುಭವಿಗಳು ಸಿಬ್ಬಂದಿಗಳನ್ನು ಸಂಪರ್ಕಿಸಿ ಅಗತ್ಯ ದಾಖಲೆ ನೀಡಿದರೆ ಖಾತೆಗಳನ್ನು ತೆರೆದುಕೊಡಲಾಗುವುದು ಎಂದರು. ಗ್ರೇಡ್‌-2 ತಹಶೀಲ್ದಾರ ಪ್ರಕಾಶ ಸಿಂದಗಿ ಈ ಕುರಿತು ವಿವರಣೆ ನೀಡಿದರು. 

ಉಪ ಖಜಾನೆ ಸಹಾಯಕ ನಿರ್ದೇಶಕ ಸುಧೀಂದ್ರ ಕುಲಕರ್ಣಿ, ಅಂಕುಶ, ಅಂಚೆ ಕಚೇರಿ ವ್ಯವಸ್ಥಾಪಕ ಎಸ್‌.ಪಿ.ಎಂ. ಪುರಾಣಿಕ, ತಾಲೂಕಿನ ಅಂಚೆ ಪಾಲಕ ಶೇಖರ ವಡಗಾಂವ, ದಾನೇಶ್ವರ ಮಂಟಕಿ, ವಿಠಲ ಹೆಬಳಿ, ಬಸವಲಿಂಗಯ್ಯ ಸ್ವಾಮಿ, ಸಾತಲಿಂಗಪ್ಪ ತೊರಕಡೆ, ಶ್ರೀಶೈಲ ಜಳಕೋಟಿ, ವೀರಣ್ಣಾ ವಾಲಿ, ಪರಮೇಶ್ವರ ಪಾಟೀಲ ಹಾಗೂ ಸಿಬ್ಬಂದಿ ಹಾಜರಿದ್ದರು.

ಟಾಪ್ ನ್ಯೂಸ್

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

1-jagga

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಚಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

Govt.,: ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

5-kalburgi

Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

1

Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

Railway-min-Ashiwini

Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್‍ಯಾಪಿಡ್‌ ರೈಲು: ರೈಲ್ವೆ ಸಚಿವ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.