ವಿದ್ಯಾದಾಯಿನಿ ಸಭಾದ ವಾರ್ಷಿಕೋತ್ಸವ, ಸಾಧಕರಿಗೆ ಸಮ್ಮಾನ


Team Udayavani, Feb 22, 2017, 4:29 PM IST

20-Mum07a.jpg

ಮುಂಬಯಿ: ವಿದ್ಯಾದಾಯಿನಿ ಸಭಾದ 97 ನೇ ವಾರ್ಷಿಕೋತ್ಸವ ಮತ್ತು ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯ ಬಹುಮಾನ ವಿತರಣೆ ಸಮಾರಂಭವು  ಮೀರಾರೋಡ್‌ ಪೂರ್ವದ ಶಾಂತಿನಗರ ಸೆಕ್ಟರ್‌ 4 ರ ಮೈದಾನದಲ್ಲಿ  ನಡೆಯಿತು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ವಿದ್ಯಾದಾಯಿನಿ ಸಭಾದ ಮಾಜಿ ಅಧ್ಯಕ್ಷ ಆರ್‌. ಕೆ. ಮೂಲ್ಕಿ ಅವರನ್ನು ವಿದ್ಯಾಪ್ರಿಯ ಬಿರುದು ಪ್ರದಾನಿಸಿ ಗೌರವಿಸಲಾಯಿತು.  ಹಳೆವಿದ್ಯಾರ್ಥಿ, ಸಂಘಟಕ ಚೇತನ್‌ ಶೆಟ್ಟಿ ಮೂಡಬಿದ್ರೆ ಅವರನ್ನು ವಿದ್ಯಾ ಚೇತನ ಬಿರುದು ಹಾಗೂ  ರಂಗಕಲಾವಿದ ಜಿ. ಕೆ. ಕೆಂಚನಕೆರೆ ಅವರನ್ನು ಅಭಿನಯ ಗೋಪಾಲ ಬಿರುದು ಪ್ರದಾನಿಸಿ ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ವಿದ್ಯಾದಾಯಿನಿ ಸಭಾ ಮುಂಬಯಿ ಇದರ ಅಧ್ಯಕ್ಷ  ಜೆ. ಎಂ. ಕೋಟ್ಯಾನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಮೀರಾರೋಡ್‌ ಶ್ರೀ ಮಹಾಲಿಂಗೇಶ್ವರ ಮಂದಿರದ  ಸಾಂತಿಂಜ ಜನಾರ್ಧನ ಭಟ್‌,  ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಹರೀಶ್‌ ಶಾಂತಿ ಹೆಜ್ಮಾಡಿ, ಬಂಟ್ಸ್‌ ಫೋರಂ ಮೀರಾ-ಭಾಯಂದರ್‌ ಗೌರವಾಧ್ಯಕ್ಷ ಸಂತೋಷ್‌ ರೈ ಬೆಳ್ಳಿಪಾಡಿ,  ಬಂಟ್ಸ್‌ ಫೋರಂ ಮೀರಾ-ಭಾಯಂದರ್‌ ಅಧ್ಯಕ್ಷ ಜಯಪ್ರಕಾಶ್‌ ಭಂಡಾರಿ, ಸಮಾಜ ಸೇವಕಿ ವಸಂತಿ ಆರ್‌. ಕೋಟ್ಯಾನ್‌, ದೇವಾಡಿಗ ಸಂಘ ವಿರಾರ್‌-ಮೀರಾರೋಡ್‌ ಸಮಿತಿಯ ಕಾರ್ಯಾಧ್ಯಕ್ಷ  -ನಾಗರಾಜ ದೇವಾಡಿಗ, ಬಿಲ್ಲವರ ಅಸೋಸಿಯೇಶನ್‌ ಮೀರಾ-ಭಾಯಂದರ್‌ ಶಾಖೆಯ ಕಾರ್ಯಾಧ್ಯಕ್ಷ ಜಯಪ್ರಕಾಶ್‌ ಪೂಜಾರಿ, ಲೀಲಾ ಡಿ. ಪೂಜಾರಿ, ಕರಾವಳಿ ಬಿಲ್ಲವ ಪತ್ರಿಕೆಯ ಸಂಪಾದಕ ಕೇಶವ ಸಸಿಹಿತ್ಲು, ಭಾರತ್‌ ಬ್ಯಾಂಕಿನ ಸಾಂತಾಕ್ರೂಜ್‌ ಶಾಖೆಯ ಪ್ರಬಂಧಕ ದಯಾನಂದ ಆರ್‌. ಅಮೀನ್‌, ನಗರ ಸೇವಕ ಪ್ರಶಾಂತ್‌ ದಳ್ವಿ, ಕೆನರಾ ವಿದ್ಯಾದಾಯಿನಿ ರಾತ್ರಿಶಾಲೆಯ ಶಿಕ್ಷಕಿ ಚಿತ್ರಲೇಖಾ ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಉಮೇಶ್‌ ಕೆ. ಅಂಚನ್‌ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಪದಾಧಿಕಾರಿಗಳಾದ ಆರ್‌. ಕೆ. ಕೋಟ್ಯಾನ್‌, ಶರತ್‌ ಪೂಜಾರಿ, ಗೋಪಾಲ್‌ ಸಾಲ್ಯಾನ್‌, ಎಚ್‌. ಆರ್‌. ಪೂಜಾರಿ, ಪ್ರಭಾಕರ ಬಂಗೇರ, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.            
ಚಿತ್ರ-ವರದಿ : ರಮೇಶ್‌ ಅಮೀನ್‌

ಟಾಪ್ ನ್ಯೂಸ್

1-aaee

Baba Siddiqui ಪ್ರಕರಣ: ಮತ್ತೆ 5 ಆರೋಪಿಗಳನ್ನು ಬಂಧಿಸಿದ ಮುಂಬಯಿ ಪೊಲೀಸರು

1-JMM

Jharkhand; ಸೀಟು ಹಂಚಿಕೆ ಪ್ರಕಟಿಸಿದ ಎನ್ ಡಿಎ: ಬಿಜೆಪಿಗೆ 68 ಸ್ಥಾನ

CM-Panchamsali

Reservation: ಪಂಚಮಸಾಲಿ ಮೀಸಲು ವಿಚಾರ ತಜ್ಞರು, ಸಂಪುಟದಲ್ಲಿ ಚರ್ಚಿಸಿ ಕ್ರಮ: ಸಿಎಂ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

ISREL-3

Israel ಗಾಜಾದಲ್ಲಿ ಕಾರ್ಯಾಚರಣೆ ನಿಲ್ಲಿಸದೆ ಒತ್ತೆಯಾಳುಗಳ ಬಿಡುಗಡೆ ಇಲ್ಲ: ಹಮಾಸ್!

1-a-cm-bai

ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ

3

La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ACT

Kinnigoli: ವಿದ್ಯಾರ್ಥಿನಿಗೆ ಕಿರುಕುಳ; ಆರೋಪಿ ವಶಕ್ಕೆ

accident

Shirva: ಬೈಕ್‌ ಢಿಕ್ಕಿ; ಮಹಿಳೆಗೆ ಗಂಭೀರ ಗಾಯ

1-aaee

Baba Siddiqui ಪ್ರಕರಣ: ಮತ್ತೆ 5 ಆರೋಪಿಗಳನ್ನು ಬಂಧಿಸಿದ ಮುಂಬಯಿ ಪೊಲೀಸರು

byndoor

Kundapura: ಕಾರು ಢಿಕ್ಕಿಯಾಗಿ ದನ ಸಾವು; ಕಾರು ಜಖಂ

1

Fire Accident: ಕುಂಬ್ರದಲ್ಲಿ ಗುಡಿಸಲು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.