ಮಣಿಪಾಲದಲ್ಲಿ ಮೈದಳೆದ ಕರಕುಶಲ ಕಲೆ
Team Udayavani, Feb 22, 2017, 4:52 PM IST
ಉಡುಪಿ: ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್‌ನಲ್ಲಿ ನಮ್ಮ ಅಂಗಡಿಯ ಪ್ರದರ್ಶನದ ಪೂರ್ವಭಾವಿಯಾಗಿ ಕರಕುಶಲ ಕಲೆಗಳ ತರಬೇತಿ ಶಿಬಿರ ನಡೆಯಿತು. ವಿದ್ಯಾರ್ಥಿಗಳು ತುಂಬು ಆಸಕ್ತಿಯಿಂದ ಶಿಬಿರದಲ್ಲಿ ಪಾಲ್ಗೊಂಡರು. ಮಡಕೆ ಮಾಡುವುದು, ಮರದ ಕೆಲಸ, ತೆಂಗಿನಗರಿಯ ಕಸೂತಿ ಕಲೆ ಮೊದಲಾದವನ್ನು ಕಲಿಸಲಾಯಿತು.
ಮಣಿಪಾಲ ವಿ.ವಿ. ಉಪಕುಲಸಚಿವ (ತಾಂತ್ರಿಕ) ಡಾ| ಚಂದ್ರಶೇಖರ ಎಸ್. ಅಡಿಗ ಮತ್ತು ಎಸ್‌ಒಸಿ ನಿರ್ದೇಶಕಿ ಡಾ|ನಂದಿನಿ ಲಕ್ಷ್ಮೀಕಾಂತ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ವಿವಿಧ ರೀತಿಯ ಕಲೆಗಳಲ್ಲಿ ತೊಡಗಿಕೊಂಡಾಗ ಕ್ರಿಯಾಶೀಲ, ಚಿಂತನಶೀಲ ಬದುಕು ರೂಪುಗೊಳ್ಳುತ್ತದೆ ಎಂದು ಡಾ| ಅಡಿಗ ತಿಳಿಸಿದರು. ನಮ್ಮ ಭೂಮಿಯ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರವನ್ನು ನಡೆಸಿ ಕೊಟ್ಟರು. ಸುಬ್ರಾಯ ಆಚಾರ್ಯರು ಮರದ ಕೆತ್ತನೆ, ಉದ್ಯಮಿ ಜಗದೀಶ, ಕುಂಭಕಲಾವಿದ ರಘುರಾಮ ಕುಲಾಲ್ ಕುಂಭಕಲೆ ಕುರಿತು, ಕೃಷ್ಣ ಪೂಜಾರಿಯವರು ಕೃಷಿ ಕುರಿತು ಮಾಹಿತಿ ನೀಡಿದರು.
ದಿನವಿಡೀ ಎಸ್‌ಒಸಿ ಕ್ಯಾಂಪಸ್‌ನಲ್ಲಿ ಕರಕುಶಲ ಕಲೆಯ ಚಟುವಟಿಕೆ ನಡೆಯಿತು. ಒಂದು ಸಂಪನ್ಮೂಲದ ಕಚ್ಚಾ ಸಾಮಗ್ರಿಯಿಂದ ಕ್ರಿಯಾಶೀಲ ಚಿಂತನೆಯೊಂದಿಗೆ ಇನ್ನೊಂದು ವಸ್ತುವನ್ನು ತಯಾರಿಸಬಹುದು ಎಂಬುದನ್ನು ತರಬೇತಿದಾರರು ತಿಳಿಸಿ ಕೊಟ್ಟರು. ಐದು ವರ್ಷದಿಂದ 65 ವರ್ಷದವರೆಗಿನ ವಿವಿಧ ವಯೋಮಾನದ ಪ್ರತಿನಿಧಿಗಳು ಪಾಲ್ಗೊಂಡರು. ಮರದ ಕೆತ್ತನೆಯಿಂದ ವಿಮಾನ, ಕೀ ಗೊಂಚಲು, ಕೀ ಹೋಲ್ಡರ್, ಪೆಟ್ಟಿಗೆ, ಕತ್ತಿ, ಶೀಲ್ಡ್‌ಗಳನ್ನು ತಯಾರಿಸಲಾಯಿತು. ತೆಂಗಿನ ಓಲಿಗಳಿಂದ ಹಕ್ಕಿ, ಮೀನು, ಹೊಲಿದ ಬುಟ್ಟಿ ಮೊದಲಾದವನ್ನು ತಯಾರಿಸಲಾಯಿತು. ಕುಂಭಕಲೆಯಲ್ಲಿ ಗಣೇಶ, ಶಿವಲಿಂಗ ಆಕೃತಿಗಳು, ವಿವಿಧ ರೀತಿಯ ಮಡಕೆಗಳು ರೂಪುಗೊಂಡವು. ಭಾರತೀಯ ಕರಕುಶಲಕಲೆಗಳ ಬಗೆಗೆ ಇರುವ ಆಸಕ್ತಿ ತರಬೇತಿಯಲ್ಲಿ ಅನಾವರಣಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.