ಪ್ರತಾಪ್ ಪೂಜಾರಿ ಕೊಲೆ: ಎಂಟು ಮಂದಿ ಸೆರೆ
Team Udayavani, Feb 23, 2017, 12:25 PM IST
ಮಂಗಳೂರು: ಪ್ರತಾಪ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 8 ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸರು ಬುಧವಾರ ಬಂಧಿಸಿ ಕೃತ್ಯಕ್ಕೆ ಬಳಸಿದ ತಲವಾರು, ಚೂರಿ ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ವೀರನಗರದ ಸಾಗರ್ ಪೂಜಾರಿ (25), ಮರೋಳಿಯ ಮಿಥುನ್ (25), ವೀರನಗರದ ಕೌಶಿಕ್ (26), ಆಕಾಶಭವನ ಕಾಪಿಗುಡ್ಡೆಯ ತಿಲಕ್‌ರಾಜ್ ಶೆಟ್ಟಿ (28), ಕೋಡಿಕೆರೆಯ ನಿಖೀಲ್ ಶೆಟ್ಟಿ (19), ಕೋಡಿಕೆರೆಯ ಎಸ್‌ಇಝೆಡ್ ಕಾಲನಿಯ ಮನೀಷ್ ಪೂಜಾರಿ (20), ಕೋಟೆಕಾರು ಮಾಡೂರಿನ ಶಿವರಾಜ್ (26), ಫರಂಗಿಪೇಟೆ ಕುಂಪನಮಜಲು ಹೌಸ್‌ನ ರಾಜೇಶ್ (21) ಬಂಧಿತರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಫೆ. 18ರಂದು ರಾತ್ರಿ ಹರ್ಷಿತ್ ಶೆಟ್ಟಿ ತನ್ನ ಸ್ನೇಹಿತರಾದ ವಿತೇಶ್, ಮಣಿಕಂಠ ಅವರೊಂದಿಗೆ ತನ್ನ ಮನೆಯಂಗಳದಲ್ಲಿ ಮದ್ಯ ಸೇವಿಸುತ್ತಿದ್ದರು. ಕೌಶಿಕ್‌ನ ಅಣ್ಣ ನಿಶಿತ್‌ಗೆ ಮಣಿಕಂಠ ಫೆ. 15ರಂದು ಹೊಡೆದಿದ್ದ. ಅದನ್ನು ರಾಜಿ ಮಾಡಲೆಂದು ಸಾಗರ್, ಮಿಥುನ್, ನಿಶಿತ್ ಅವರ ಜತೆ ಕೋಡಿಕೆರೆಯ ತಿಲಕ್, ಮಿಥುನ್, ನಿಖೀಲ್, ಶಿವು, ಶರಣ್, ಮನೀಷ್ ಹಾಗೂ ರಾಜೇಶ್ ಬಂದಿದ್ದರು. ಅವರೊಳಗೆ ಮಾತಿನ ಚಕಮಕಿ ಉಂಟಾಗಿ ಜಗಳವಾಗಿ ಶಿವು ಮತ್ತು ತಿಲಕ ಸೇರಿಕೊಂಡು ಪ್ರತಾಪ್ ಪೂಜಾರಿಗೆ ತಲವಾರ್‌ನಿಂದ ಕಡಿದಿದ್ದರು. ಪ್ರತಾಪ್ ಸ್ಥಳದಲ್ಲೇ ಮೃತಪಟ್ಟು, ಮಣಿಕಂಠ ಗಾಯಗೊಂಡಿದ್ದರು.
ಆಯುಕ್ತ ಎಂ. ಚಂದ್ರಶೇಖರ್, ಡಿಸಿಪಿಗಳಾದ ಶಾಂತರಾಜು, ಡಾ| ಸಂಜೀವ ಎಂ. ಪಾಟೀಲ್, ಎಸಿಪಿ ಶ್ರುತಿ, ಕಂಕನಾಡಿ ನಗರ ಇನ್‌ಸ್ಪೆಕ್ಟರ್ ರವಿ ನಾೖಕ್ ನೇತೃತ್ವದ ಕಾರ್ಯಾಚರಣೆಯಲ್ಲಿ ಎಎಸ್‌ಐ ಭಾಸ್ಕರ ರಾವ್, ರುಕ್ಮಯ, ದಯಾನಂದ, ಗಿಲ್ಬರ್ಟ್, ಹೆಡ್‌ಕಾನ್‌ಸ್ಟೆಬಲ್‌ಗಳಾದ ಸಂತೋಷ್,ವಿನೋದ್, ಮದನ್, ರಘುವೀರ್, ರವೀಂದ್ರನಾಥ, ವಿನೋದ ಕುಮಾರ್ ಹಾಗೂ ಪಿಸಿಗಳಾದ ನೂತನ್ ಕುಮಾರ್, ಭೀಮಪ್ಪ, ಮಾಲತೇಶ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ
Mangaluru ಮರವೂರು: ಆಕಸ್ಮಿಕವಾಗಿ ನದಿಗೆ ಬಿದ್ದು ಮಹಿಳೆ ಮೃತ್ಯು: ಪ್ರಕರಣ ದಾಖಲು
Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ
Mangaluru ಲಿಟ್ ಫೆಸ್ಟ್: ಸಾಹಿತ್ಯದ ಹಬ್ಬದಲ್ಲಿ ಬದುಕಿನ ನಾನಾ ಮುಖಗಳ ಅನಾವರಣ
Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್ ಅಳವಡಿಕೆ ಪೂರ್ಣ
MUST WATCH
ಹೊಸ ಸೇರ್ಪಡೆ
Uttarakhand: ಕಮರಿಗೆ ಬಿದ್ದವನ ರಕ್ಷಿಸಲು 20 ಕಿ.ಮೀ.ನಡೆದರು!
Cast Census: ಜಾತಿಗಳ ಸಮಸ್ಯೆಗೆ ಸಿಎಂ ಪರಿಹಾರವೇನು?: ಎಚ್.ಡಿ.ಕುಮಾರಸ್ವಾಮಿ
ಇಂದು ಕಾಶ್ಮೀರದ ಜೆಡ್-ಮೋರ್ ಸುರಂಗ ಲೋಕಾರ್ಪಣೆ; ಪ್ರಧಾನಿ ಮೋದಿಯಿಂದ ಚಾಲನೆ
Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ
Wankhede Stadium-50: ಗಾವಸ್ಕರ್, ವಿನೋದ್ ಕಾಂಬ್ಳಿಗೆ ಸಮ್ಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.