![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 23, 2017, 3:48 PM IST
ಬದಿಯಡ್ಕ: ಮಲೆನಾಡು ರಸ್ತೆಗಳ ಶೋಚನೀಯಾವಸ್ಥೆಯನ್ನು ಪರಿಹರಿಸಬೇಕೆಂದು ಜನಪರ ಸಮಿತಿಯ ಹೂಡುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಬೆಂಬಲ ಘೋಷಿಸಿ ಪಿ.ಡಿ.ಪಿ. ನೇತಾರರು ಮತ್ತು ಕೆ.ವಿ.ಎಎಸ್ ಬದಿಯಡ್ಕ ಮಹಿಳಾ ಯುತ್‌ವಿಂಗ್‌ನ ನೇತಾರರು ಸಮರಾಂಗಣಕ್ಕೆ ಅಗಮಿಸಿ ಬೆಂಬಲ ಸೂಚಿಸಿದರು. ಪಿಡಿಪಿ ರಾಜ್ಯ ಸಮಿತಿ ಸದಸ್ಯ ಸಕಾಫ್ ತಂšಲ್‌ಯವರ ಅಧ್ಯಕ್ಷತೆಯಲ್ಲಿ ನಡೆದ ಸತ್ಯಾಗ್ರಹವನ್ನು ಪಿಡಿಪಿ ಜಿಲ್ಲಾ ಸೆಕ್ರಟರಿ ಯುನಸ್ ತಲಂಗರ ಉದ್ಘಾಟಿಸಿದರು. ಖಾಲಿದ್ ಬಂಬ್ರಾಣ, ಸಾಧಿಕ್ ಮುಳಿಯಡ್ಕ, ಅಬಿದ್ ಮಞಂಪಾರ, ರಹ್‌ಮಾನ್ ತೆರ್‌ವತ್ತ್, ಅಬುಬಕ್ಕರ್ ಪಾಲೆಕ್ಕಾರ್, ಅಬ್ದುಲ್ಲ ಉಜಾಂತೋಡಿ, ಫಾರುಕ್ ಮುನಿಯೂರು, ರಾಸಾಕ್ ಬದಿಯಡ್ಕ, ಮೋಯಿದು ಬದಿಯಡ್ಕ ಮೊದಲಾದವರು ಮಾತನಾಡಿದರು.
ಅನಂತರದ ಕಾರ್ಯಕ್ರಮದಲ್ಲಿ ಬದಿಯಡ್ಕ ಮಹಿಳಾ ಯುತ್ ವಿಂಗ್ ಅಧ್ಯಕ್ಷೆ ನಿರುಪಮ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ ಮಲೆನಾಡು ರಸ್ತೆಗಳ ಅಭಿವೃದ್ಧಿಗಾಗಿ ಸರಕಾರ ಜನಸಾಮಾನ್ಯರ ಕನಿಷ್ಠ ಸಾರಿಗೆ ಆವಶ್ಯಕತೆಗಳನ್ನು ಪೂರೈಸುವಲ್ಲಿ ವಹಿಸುತ್ತಿರುವ ನಿರ್ಲಕ್ಷ್ಯ ಖಂಡನಾರ್ಹವಾಗಿದ್ದು, ಸಂಬಂಧ ಪಟ್ಟ ಆಧಿಕಾರಿಗಳು ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ವನಿತಾ ವಿಂಗ್‌ನ ಪದಾಧಿಕಾರಿಗಳಾದ ಮಂಜುಳಾ ಶೆಣೈ, ಪುಷ್ಪಾ, ಮಾಲಿನಿ ಕಾಮತ್, ಸತ್ಯಾವತಿ ಉಪಸ್ಥಿತರಿದ್ದರು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.