ಸ್ತ್ರೀ ಸುರಕ್ಷಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ : ಮಹಿಳಾ ಸಂಘ
Team Udayavani, Feb 23, 2017, 4:00 PM IST
ಹೊಸಂಗಡಿ: ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹತ್ತಿಕ್ಕಲು ಸ್ತ್ರೀ ಸುರಕ್ಷಾ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸ ಬೇಕು, ಪ್ರಾದೇಶಿಕವಾಗಿ ಕಾರ್ಯಾ ಚರಿಸುತ್ತಿರುವ ಗೂಂಡಾಗಳನ್ನು ಬಂಧಿಸಿ ಜೈಲಿಗಟ್ಟ ಬೇಕೆಂದು ಕೇರಳ ಮಹಿಳಾ ಸಂಘ (ಎನ್.ಎಫ್.ಐ.ಡಬ್ಲೂ) ಮಂಜೇಶ್ವರ ಮಂಡಲ ಸಮಾವೇಶ ಅಂಗೀಕರಿಸಿದ ನಿರ್ಣಯದಲ್ಲಿ ಸರಕಾರವನ್ನು ಒತ್ತಾಯಿಸಿದೆ.
ಕೇರಳ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಇ. ಮಾಲತಿ ಸಮಾವೇಶವನ್ನು ಉದ್ಘಾಟಿಸಿದರು. ಕೇಂದ್ರ ಸರಕಾರ ಕೇರಳಕ್ಕೆ ನೀಡಬೇಕಾದ ರೇಶನ್ ಅಕ್ಕಿ, ಗೋಧಿ ಪೂರ್ತಿ ನೀಡಬೇಕು. ಆಹಾರ ಸುರಕ್ಷಾ ಯೋಜನೆಯಲ್ಲಿ ಕೇರಳಕ್ಕೆ ಆಗಿರುವ ಅನ್ಯಾಯ ನಿವಾರಿಸಬೇಕು, ಹೆಚ್ಚಳ ಮಾಡಿದ 60 ರೂ. ಗ್ಯಾಸ್ ಸಿಲಿಂಡರ್ ದರವನ್ನು ಕೂಡಲೇ ಹಿಂದೆಗೆದುಕೊಳ್ಳಬೇಕು, ಕೇಂದ್ರ ಸರಕಾರ ನೀಡುವ ಕುಟುಂಬ ಕ್ಷೇಮ ಯೋಜನೆಯ ಮೊತ್ತ 3 ಲಕ್ಷವಾಗಿ ಹೆಚ್ಚಳಗೊಳಿಸ ಬೇಕು, ಅರ್ಜಿ ನೀಡಲು ಸಮಯ ಪರಿ ಮೂರು ತಿಂಗಳು ಗಳಾಗಿ ಹೆಚ್ಚಿಸಬೇಕೆಂದು ಸಮಾವೇಶದಲ್ಲಿ ಅಧಿಕೃತರನ್ನು ಒತ್ತಾಯಿಸಿತು.
ಸಮಾವೇಶದಲ್ಲಿ ಸಿ.ಪಿ.ಐ. ಜಿಲ್ಲಾ ಸಹ ಕಾರ್ಯದರ್ಶಿ ಬಿ.ವಿ. ರಾಜನ್, ಮಹಿಳಾ ಸಂಘದ ಕಾಸರಗೋಡು ಮಂಡಲ ಅಧ್ಯಕ್ಷೆ ಪಿ. ಲತಾ, ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೆಲ್, ಯು.ಸಂಜೀವ ಶೆಟ್ಟಿ, ರಾಮಕೃಷ್ಣ ಕಡಂಬಾರ್, ಸುನೀತಾ, ವಾಲ್ವಿ ಡಿ’ಸೋಜ, ಪೂರ್ಣಿಮಾ ಎಸ್. ಬೇರಿಂಜೆ ಮಾತನಾಡಿದರು.
ಸುಂದರಿ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಪೂರ್ಣಿಮಾ ಎಸ್. ಬೇರಿಂಜೆ (ಅಧ್ಯಕ್ಷೆ), ಕಮಲಾಕ್ಷಿ ಬಾಯಾರು, ನಾರಾಯಣಿ ರಾಜನ್, ಸುನೀತಾ, ವಾಲ್ವಿ ಡಿ’ಸೋಜ (ಉಪಾಧ್ಯಕ್ಷರು), ರೇಖಾ ಕಿಶೋರ್ (ಕಾರ್ಯದರ್ಶಿ), ಶಾಂಭವಿ ಭಾಯಿಕಟ್ಟೆ, ಕಮಲಾ ಎಸ್. ಮಜಿಬೈಲು (ಸಹ ಕಾರ್ಯದರ್ಶಿನಿಯರು), ಸುಂದರಿ ಆರ್. ಶೆಟ್ಟಿ (ಕೋಶಾಧಿಕಾರಿ) ಯಾಗಿರುವ 19 ಸದಸ್ಯೆಯರ ಮಂಡಲ ಸಮಿತಿಯನ್ನು ಸಮಾವೇಶದಲ್ಲಿ ಆಯ್ಕೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.