ಸಾರ್ವಜನಿಕರ ದೂರಿನ ಹಿನ್ನೆಲೆ: ಪೊಲೀಸರಿಂದ ರಸ್ತೆ, ಸೇತುವೆ ಪರಿಶೀಲನೆ
Team Udayavani, Feb 23, 2017, 4:40 PM IST
ನಗರ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಸಾರ್ವಜನಿಕರು ಸಲ್ಲಿಸಿದ ದೂರಿನ ಮೇರೆಗೆ ಸಂಚಾರಿ ಠಾಣಾ ಇನ್ಸ್ಪೆಕ್ಟರ್ ವಿಟಲ ರೈ ಅವರ ನೇತೃತ್ವದ ತಂಡ ದೂರು ದಾಖಲಾದ ರಸ್ತೆ ಮತ್ತು ಸೇತುವೆ ಪರಿಶೀಲನೆ ನಡೆಸಿತು.ಕಡಪಾಲದಲ್ಲಿ ಅಪಘಾತ ವಲ ಯವಾಗಿ ಗುರುತಿಸಿರುವ ಕಿರಿದಾಗಿ ರುವ ಸೇತುವೆ ಬಳಿ ತಾತ್ಕಾಲಿಕ ಪರಿಹಾರವಾಗಿ ಹಂಪ್ಸ್ ನಿರ್ಮಿಸುವ ಬಗ್ಗೆ ಪರಿಶೀಲಿಸಲಾಯಿತು. ಕಬಕ – ಕುಂಡಡ್ಕ – ಕೊಡಿಪ್ಪಾಡಿ ರಸ್ತೆ ನಾದುರಸ್ತಿಯ ಬಗ್ಗೆಯೂ ಪರಿಶೀಲಿಸಲಾಯಿತು.
ಈ ಎರಡು ಸಮಸ್ಯೆಗಳ ಬಗ್ಗೆ ದೂರು ದಾಖಲಾಗಿತ್ತು. ಸಾರ್ವಜನಿಕರು ಜಿಲ್ಲಾ ಪೊಲೀಸ್ ಕಚೇರಿಗೆ ನೀಡಿದ ದೂರಿನ ಅನ್ವಯ, ಎಸ್ಪಿ ಭೂಷಣ್ ಜಿ. ಬೋರಸೆ ಸೂಚನೆಯಂತೆ ಸಮಸ್ಯೆಗಳಿರುವ 2 ಸ್ಥಳಗಳ ಬಗ್ಗೆ ಖುದ್ದಾಗಿ ಪರಿಶೀಲಿಸಿ, ವರದಿ ಸಿದ್ಧಪಡಿಸಲಾಗಿದೆ. ಅದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಲಾ ಗುತ್ತದೆ ಎಂದು ಸಂಚಾರಿ ಇನ್ಸ್ಪೆಕ್ಟರ್ ವಿಟಲ ರೈ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.