![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 23, 2017, 4:54 PM IST
ಕಾಪು: ವಿದ್ಯಾರ್ಥಿಗಳು ಸಣ್ಣ ವಯಸ್ಸಿನಿಂದಲೇ ಸಕಾರಾತ್ಮಕವಾಗಿ ಚಿಂತನೆ ಮಾಡುವ ಗುಣ ಬೆಳೆಸಿಕೊಂಡರೆ ಯಶಸ್ಸಿನ ಕಡೆಗೆ ಸಾಗಬಹುದು. ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಲ್ಲಿ ಮತ್ತು ಜನರ ಮುಂದೆ ಎದ್ದು ನಿಂತು ಮಾತನಾಡುವ ಧೆ„ರ್ಯ ಬೆಳೆಸಿಕೊಂಡಲ್ಲಿ ಸಂವಹನ ಕೌಶಲ್ಯ ಉತ್ತಮಗೊಳ್ಳುತ್ತದೆ ಎಂದು ಉಡುಪಿ ಅಥರ್ವ ಆಯುರ್ವೇದಿಕ್ ಕ್ಲಿನಿಕ್‌ನ ಡಾ| ಅಪೇûಾ ರಾವ್ ಹೇಳಿದರು.
ಉದ್ಯಾವರ ಸ. ಪ. ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವೃತ್ತಿ ಮಾರ್ಗದರ್ಶನ ಮತ್ತು ಆಪ್ತ ಸಲಹಾ ಕೇಂದ್ರದ ಆಶ್ರಯದಲ್ಲಿ ಜರಗಿದ ಪರೀಕ್ಷೆ ಎದುರಿಸುವುದು ಹೇಗೆ ಮತ್ತು ಜೀವನ ಕೌಶಲ್ಯಾ ತರಬೇತಿಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.ಮುಖ್ಯ ಶಿಕ್ಷಕಿ ಮೂಕಾಂಬೆ ಅಧ್ಯಕ್ಷತೆ ವಹಿಸಿದ್ದರು.
ಹಿಂದಿ ಶಿಕ್ಷಕ ಸುಭಾಷ್ ಚೌಹಾಣ್ ಸ್ವಾಗತಿಸಿದರು. ಮಾರ್ಗದರ್ಶಕ ಶಿಕ್ಷಕಿ ಪ್ರಭಾ ಬಿ. ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
You seem to have an Ad Blocker on.
To continue reading, please turn it off or whitelist Udayavani.