“ಯಕ್ಷಗಾನ ಸಂಪ್ರದಾಯದ ಸಂರಕ್ಷಣೆಗೆ ಅಕಾಡೆಮಿ ಬದ್ಧ ‘
Team Udayavani, Feb 23, 2017, 4:57 PM IST
ಉಡುಪಿ: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿರುವ ಯಕ್ಷಗಾನ ಭಾಗವತಿಕೆ ಮತ್ತು ಹೆಜ್ಜೆಗಾರಿಕೆ ವಿಷಯಗಳ ಐದು ದಿನಗಳ ದೃಶ್ಯ-ಶ್ರವಣ ದಾಖಲಾತಿಯ ಎರಡನೆಯ ದಿನ ತೆಂಕುತಿಟ್ಟಿನ ಹಿರಿಯ ಭಾಗವತರ ಸಾಂಪ್ರದಾಯಿಕ ಶೈಲಿಯ ಭಾಗವತಿಕೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಮಣಿಪಾಲ ಎಸ್‌ಒಸಿ ಚಿತ್ರೀಕರಣ ಕೊಠಡಿಯಲ್ಲಿ ಜರಗಿದ ದಾಖಲೀಕರಣ ಕಾರ್ಯಕ್ರಮದ ಆರಂಭದಲ್ಲಿ ಅಕಾಡೆಮಿ ಸದಸ್ಯ ಸಂಚಾಲಕ ಪಿ. ಕಿಶನ್ ಹೆಗ್ಡೆಯವರು, ಯಕ್ಷಗಾನದ ದಾಖಲೀಕರಣದ ಔಚಿತ್ಯವನ್ನು ವಿವರಿಸಿ ಮರೆಯಾಗುತ್ತಿರುವ ಸಾಂಪ್ರದಾಯಿಕ ಶೈಲಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಕಾಡೆಮಿ ಪ್ರಸ್ತುತ ಯೋಜನೆಯನ್ನು ಹಾಕಿಕೊಂಡಿದೆ ಎಂದರು.
ಬಲಿಪ ನಾರಾಯಣ ಭಾಗವತ, ಅಗರಿ ರಘುರಾಮ ಭಾಗವತ, ತೆಂಕಬೈಲು ತಿರುಮಲೇಶ್ವರ ಶಾಸಿŒ, ಕುರಿಯ ಗಣಪತಿ ಶಾಸಿŒ, ಕುಬಣೂರು ಶ್ರೀಧರ ರಾವ್, ಲೀಲಾವತಿ ಬೈಪಾಡಿತ್ತಾಯ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಭಾಗವತಿಕೆಗೆ ಪದ್ಯಾಣ ಶಂಕರನಾರಾಯಣ ಭಟ್, ಹರಿನಾರಾಯಣ ಬೈಪಾಡಿತ್ತಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಚಂಡೆ-ಮದ್ದಲೆ ಸಾಥಿ ನೀಡಿದರು. ಗಣೇಶ ಕೊಲೆಕಾಡಿ ಮತ್ತು ನಿತ್ಯಾನಂದ ರಾವ್ ಸುರತ್ಕಲ್ ಅನುಕ್ರಮವಾಗಿ ಛಂದಸ್ಸು ಮತ್ತು ಸಂಗೀತಶಾಸ್ತ್ರಗಳ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಎಂ.ಎಲ್. ಸಾಮಗ ದಾಖಲಾತಿಯ ಸಂಯೋಜನೆಯಲ್ಲಿ ಸಹಕರಿಸಿದರು.
ಕೇಂದ್ರದ ಸಂಯೋಜನಾಧಿಕಾರಿ ಪ್ರೊ| ವರದೇಶ ಹಿರೇಗಂಗೆ ಪ್ರಸ್ತಾವನೆಗೈದರು. ಸಹಸಂಯೋ ಜನಾಧಿಕಾರಿ ಡಾ| ಅಶೋಕ ಆಳ್ವ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.