ಸ್ವೀಡನ್‌ನಲ್ಲಿ ಕೆಲಸದ ನಡುವೆ ಸೆಕ್ಸ್ ಬ್ರೇಕ್!
Team Udayavani, Feb 24, 2017, 3:50 AM IST
ಸ್ಟಾಕ್‌ಹೋಮ್: ನೂತನ ಅನ್ವೇಷಣೆ, ಹೊಸ ಬದಲಾವಣೆಗಳಿಗೆ ಹೆಸರಾಗಿರುವ ಸ್ವೀಡನ್ ಈ ಬಾರಿ ಇಲ್ಲಿನ ಉದ್ಯೋಗಿಗಳಿಗೆ ದಿನನಿತ್ಯದ ಕೆಲಸ ನಡುವೆಯೂ 1 ತಾಸು ಸೆಕ್ಸ್ ಬ್ರೇಕ್ ನೀಡುವ ಚಿಂತನೆಯೊಂದನ್ನು ನಡೆಸಿದೆ. ಸ್ವೀಡನ್‌ನ ಓವರ್‌ಟೊನಿಯಾ ಪಟ್ಟಣದ ಕಾರ್ಪೋರೇಟರ್ ಪರ್ ಎರಿಕ್ ಮುಸ್ಕೋಸ್ ವೃತ್ತಿ ನಿರತ ದಂಪತಿಗಾಗಿ ಶುಲ್ಕ ರಹಿತ 1 ಗಂಟೆ ಸೆಕ್ಸ್ ಬ್ರೇಕ್ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಪ್ರಸ್ತುತ ಬಿಡುವಿಲ್ಲದ ಸಮಾಜದಲ್ಲಿ ದಂಪತಿ ಒಟ್ಟಾಗಿ ಹೆಚ್ಚು ಸಮಯ ಕಳೆಯುತ್ತಿಲ್ಲ. ಇದರಿಂದ ಸಂಬಂಧಗಳು ಹಾಳಾಗುತ್ತಿವೆ. ಸೆಕ್ಸ್ ಬ್ರೇಕ್ ವ್ಯವಸ್ಥೆ ಜಾರಿಗೆ ತರುವುದರಿಂದ ಸಂಬಂಧಗಳು ಗಟ್ಟಿಯಾಗಿ, ಜನರು ಸಾಮರಸ್ಯದಿಂದ ಬದುಕುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಪ್ರಸ್ತಾವನೆಯನ್ನು ಬೆಂಬಲಿಸಿರುವ ಲೈಂಗಿಕ ತಜ್ಞ ಆಮಿ ಲೆವಿನ್ “ಊಟದ ಬಿಡುವಿನ ವೇಳೆ ಸಂಭೋಗ ನಡೆಸುವುದನ್ನು ರೂಢಿಸಿಕೊಳ್ಳುವುದು ಸೂಕ್ತ. ಇದಕ್ಕಾಗಿ 1 ತಾಸನ್ನು ಮೀಸಲಿಡಬಹುದು. ಶೀಘ್ರವೇ ಏಕೆ ವ್ಯವಸ್ಥೆ ಜಾರಿಯಾಗಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಪ್ರತಿ ನಾಲ್ವರು ವಿವಾಹಿತರ ಪೈಕಿ ಓರ್ವ ವಿವಾಹಿತ/ವಿವಾಹಿತೆ ಕೆಲಸದ ಒತ್ತಡಗಳಿಂದ ಸಂಭೋಗ ನಡೆಸಲು ಸಾಧ್ಯವಾಗದೆ ಆಯಾಸದಿಂದ ನಿದ್ರೆಗೆ ಜಾರುತ್ತಾರೆ ಎಂದು ನ್ಯಾಷನಲ್ ಸ್ಲಿಪ್ ಫೌಂಡೇಷನ್ ನಡೆಸಿದ ಸಮೀಕ್ಷೆಯಲ್ಲಿ ವರದಿಯಾಗಿದೆ.
2015ರಲ್ಲಿ ಗುಟೇನ್ ಬರ್ಗ್‌ನಲ್ಲಿ ಕೆಲಸ ಮಾಡುತ್ತಿದ್ದ ದಯಾದಿಗಳಿಗೆ ಆರೋಗ್ಯ ದೃಷ್ಟಿಯಿಂದ ಪ್ರತಿನಿತ್ಯ ಕೇವಲ 6 ತಾಸು ಮಾತ್ರ ಕೆಲಸ ಮಾಡುವ ಪ್ರಮುಖ ಯೋಜನೆಯನ್ನು ಇಲ್ಲಿನ ಸರ್ಕಾರ ಜಾರಿಗೊಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.