ಉಡುಪಿ: ಏಕಕಂಠದಲ್ಲಿ ಶತಕಂಠಗಾಯನ !
Team Udayavani, Feb 24, 2017, 10:47 AM IST
ಉಡುಪಿ: ರೋಟರಿ ಜಿಲ್ಲೆ 3182 ವಲಯ 4ರ ನೇತೃತ್ವದಲ್ಲಿ ರೋಟರಿ ಪ್ರತಿಷ್ಠಾನ ಶತಮಾನೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಮಹಿಳೆಯರು, ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರು ಶತಕಂಠ ಗಾಯನದಲ್ಲಿ ಪಾಲ್ಗೊಂಡು ಸುಶ್ರಾವ್ಯವಾಗಿ ಹಾಡಿದರು.
ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ನಿರ್ದೇಶನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೂ ಸ್ವಯಂ ಹಾಡಿದರು. “ಗಜವದನ ಬೇಡುವೆ…’, “ಬೇಗ ಬಾರೋ ನೀಲಮೇಘವರ್ಣ…’, “ಹರಿಕುಣಿದ ನಮ್ಮ ಹರಿ ಕುಣಿದ…’,”ಸಕಲಗ್ರಹ ಬಲ ನೀನೇ ಸರಸಿ ಜಾಕ್ಷ…’, “ಎಂದರೋ ಮಹಾನು ಭಾವಲು…’, “ಮುರಹರನಗದರ ಮುಕುಂದಮಾಧವ…’, “ಜೋಜೋ ಶ್ರೀಕೃಷ್ಣ…’ ಈ ಹಾಡುಗಳು ಏಕಕಂಠದಲ್ಲಿ ಮೂಡಿಬಂದವು.
ಅನಂತರ ಜರಗಿದ ಜಾಗತಿಕ ತಿಳಿವಳಿಕೆ ದಿನ, ವಿಶ್ವಶಾಂತಿ ಸಂದೇಶ, ರೋಟರಿ ಸಾರ್ವತ್ರಿಕ ಘನತೆ ಅನಾವರಣ ಕಾರ್ಯಕ್ರಮದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಬಾರಕೂರು ಸೈಂಟ್ ಪೀಟರ್ ಚರ್ಚ್ ಧರ್ಮಗುರು ರೆ| ಫಾ| ವಲೇರಿಯನ್ ಮೆಂಡೋನ್ಸ, ಹಂಗಾರಕಟ್ಟೆ ಎಚ್. ಇಬ್ರಾಹಿಂ ಸಾಹೇಬ್, ರೋಟರಿ ಜಿಲ್ಲಾ ಸಭಾಪತಿ ಡಾ| ಪಿ. ನಾರಾಯಣ, ರೋಟರಿ ಪ್ರಮುಖರಾದ ಸದಾನಂದ ಚಾತ್ರ, ಡಾ| ಭರತೇಶ್, ಅಭಿನಂದನ ಶೆಟ್ಟಿ, ಮಂಜುನಾಥ ಉಪಾಧ್ಯ, ಡಾ| ಭವಾನಿ ಶಂಕರ ಕೆ.ಆರ್., ಸುಬ್ರಹ್ಮಣ್ಯ ಬಾಸ್ರಿ, ಡಾ| ಜಿ.ಎಸ್.ಜೆ. ಭಟ್, ಸುರೇಶ ಬೀಡು, ಜಗದೀಶ ಕಾಮತ್, ಕರುಣಾಕರ ಶೆಟ್ಟಿ, ರಾಮಚಂದ್ರ ಉಪಾಧ್ಯ ಮೊದಲಾದವರು ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.