ಬಂದಿದ್ದು ದರೋಡೆಗೆ, ಮಾಡಿದ್ದು ಕೊಲೆ


Team Udayavani, Feb 24, 2017, 11:26 AM IST

murder.jpg

ಬೆಂಗಳೂರು: ಕಳೆದ ಎರಡು ವರ್ಷಗಳ ಹಿಂದೆ ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭಾರತೀಯ ನಿವೃತ್ತ ವಾಯುಸೇನೆ ಅಧಿಕಾರಿ ಕೊಲೆ ಪ್ರಕರಣ ಭೇದಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಸೂರ್ಯ ನಗರ ಠಾಣೆ ಪೊಲೀಸರು ಐವರು ಆರೋಪಿಗಳು ಸೇರಿದಂತೆ 12 ಮಂದಿ ತಂಡವನ್ನು ಬಂಧಿಸಿದ್ದಾರೆ.

2014ರ ನವೆಂಬರ್‌ 23 ರಂದು ನಿವೃತ್ತ ವಾಯು ಸೇನೆ ಅಧಿಕಾರಿ ಪರ್ವೇಜ್‌ ಕೋಕರ್‌ ಅವರ ಮನೆಗೆ ದರೋಡೆಗೆ ಬಂದಿದ್ದ ತಂಡ ಅವರನ್ನು ಕೊಲೆ ಮಾಡಿತ್ತು. ಬೇರೊಂದು ಪ್ರಕರಣದ ವಿಚಾರಣೆ ವೇಳೆ ಹಂತರಕರ ಅಧಿಕಾರಿ ಹತ್ಯೆಯ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. 

ಹುಸ್ಕೂರಿನ ಲಕ್ಷ್ಮೀನಾರಾಯಣಪುರದ ಶ್ರೀನಿವಾಸ್‌ ಅಲಿಯಾಸ್‌ ಸೀನ(21), ಕಾಚನಾಯಕನಹಳ್ಳಿಯ ಗಿರೀಶ್‌(33), ತಿರುಮಗೊಂಡನಹಳ್ಳಿಯ ಸುಬ್ರಮಣಿ(32), ಗೂಳಿಮಂಗಲದ ನಾಗರಾಜು, ಮಡಿವಾಳದ ಸತ್ಯನಾರಾಯಣ ಅಲಿಯಾಸ್‌ ನ್ಯಾನೋ ಸತ್ಯ(28) ಬಂಧಿತ ಆರೋಪಿಗಳು ಎಂದು ಗ್ರಾಮಾಂತರ ಎಸ್ಪಿ ಅಮಿತ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಬಂಧಿತರಿಂದ 1.25 ಕೋಟಿ ರೂ.ಮೌಲ್ಯದ ಚಿನ್ನಾಭರಣ, ಬೆಳ್ಳಿ, ಒಂದು ಪಿಸ್ತೂಲ್‌, ಬೆಲೆಬಾಳುವ ವಸ್ತುಗಳು ಹಾಗೂ 60 ಕೋಟಿ ಬೆಲೆಯ ಭೂ ದಾಖಲೆ ವಶಪಡಿಸಿಕೊಳ್ಳಲಾಗಿದೆ.

ದರೋಡೆ ಬಂದು ಭಯದಿಂದ ಕೊಲೆ ಮಾಡಿದ್ರು: 2014ರ ನವೆಂಬರ್‌ 23 ರಂದು ರಾತ್ರಿ ಹಂತಕರು ನಗರದ ಹೊರವಲಯದಲ್ಲಿರುವ ನಿವೃತ್ತ ವಾಯುಸೇನೆ ಅಧಿಕಾರಿ  ಪರ್ವೇಜ್‌ ಕೋಕರ್‌ ಇದ್ದ “ಎಸ್ಟೇಟ್‌ ಕ್ಲಬ್‌ನ ಸೆಲಿ ಗ್ರೀನ್‌ ಪ್ಲಾಂಟೇಷನ್‌’ನಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದರು. ದುಷ್ಕರ್ಮಿಗಳು ಕಾರಿನಲ್ಲಿ ಬಂದಿದ್ದರು. ಸತ್ಯನಾರಾಯಣ ಕಾರಿನಲ್ಲೆ ಇದ್ದರೆ, ನಾಗರಾಜು ಮನೆ ಹೊರಗಡೆ ಕಾವಲಿದ್ದ. ಉಳಿದ ಮೂವರು ಮನೆ ಪ್ರವೇಶಿಸಿದ್ದರು.

ಈ ವೇಳೆ ಎಚ್ಚರಗೊಂಡ ಪರ್ವೇಜ್‌ ಕೋಕರ್‌ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಸಿಕ್ಕಿ ಬೀಳುತ್ತೇವೆ ಎಂಬ ಆತಂಕದಿಂದ ದುಷ್ಕರ್ಮಿಗಳು ಫ‌ವೇಜ್‌ ಅವರ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು  ಘಟನೆ ನಡೆದ ವೇಳೆ ಮೃತ ವಾಯುಸೇನೆ ಅಧಿಕಾರಿ ಪತ್ನಿ ಮತ್ತೂಂದು ಕೊಠಡಿಯಲ್ಲಿ ಮಲಗಿದ್ದರು.

ಅಲ್ಲದೆ, ಕೃತ್ಯವೆಸಗಲು ಬಂದಿದ್ದ ದುಷ್ಕರ್ಮಿಗಳು ಅವರ ಕೊಠಡಿಯ ಬಾಗಿಲನ್ನು ಲಾಕ್‌ ಮಾಡಿದ್ದರು. ಹೀಗಾಗಿ ಹೊರಗಿನ ಯಾವುದೇ ಘಟನೆ ಅವರಿಗೆ ಗೊತ್ತಾಗಿರಲಿಲ್ಲ. ತನಿಖೆ ಕೈಗೊಂಡಿದ್ದ ಪೊಲೀಸರು ಮೊದಲಿಗೆ ಅಧಿಕಾರಿಯ ಪತ್ನಿಯ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದರು. 

ಮೂಲತಃ ಪಂಜಾಬ್‌ನವರಾದ ಮೃತ ಪರ್ವೇಜ್‌ ಭಾರತೀಯ ವಾಯುಸೇನೆಯಲ್ಲಿ ಡೆಕೋರೇಟೆಡ್‌ ಅಧಿಕಾರಿಕಾರಿಯಾಗಿ 1968ರಿಂದ 2003ರ ತನಕ 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. 1997ರಲ್ಲಿ ನಡೆದ ಭಾರತ -ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪರ್ವೇಜ್‌ ಉನ್ನತ ಹುದ್ದೆಯಲ್ಲಿದ್ದರು. 

60 ಕೋಟಿ ಮೌಲ್ಯದ ಆಸ್ತಿ ಪತ್ರ ಕದ್ದಿದ್ದರು
 ಆರೋಪಿಗಳು 2016ರ ಜುಲೈ 20ಕ್ಕೆ ಹುಸ್ಕೂರಿನ ಲಕ್ಷ್ಮೀನಾರಾಣಪುರದಲ್ಲಿರುವ  ರಿಯಲ್‌ ಎಸ್ಟೇಟ್‌ ಉದ್ಯಮಿ ಜುಬೇರ್‌ ಅಹ್ಮದ್‌ ಮನೆಯಲ್ಲಿ ದರೋಡೆ ಮಾಡಿದ್ದರು. ಈ ವೇಳೆ ಬೆಲೆಬಾಳುವ ವಸ್ತುಗಳು ಹಾಗೂ 60 ಕೋಟಿ ಮೌಲ್ಯದ ಭೂ ದಾಖಲೆಗಳನ್ನು ಕದಿದ್ದರು. 

ಫಾರ್ಮ್ಹೌಸ್‌ಗಳೇ ಟಾರ್ಗೆಟ್‌!
ಆರೋಪಿಗಳು ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಫಾರ್ಮ್ಹೌಸ್‌ ಮತ್ತು ಬಂಗಲೆಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದರು. ಈ ವರೆಗೆ ಸುಮಾರು 21 ಅಪರಾಧ ಕೃತ್ಯಗಳನ್ನು ನಡೆಸಿರುವ ತಂಡ, ತಮಿಳುನಾಡಿನ ವ್ಯಾಪ್ತಿಯಲ್ಲೂ ಕೃತ್ಯವೆಸಗಿದ್ದಾರೆ. ಆರೋಪಿಗಳು 35 ಲಕ್ಷ ರೂಮೌಲ್ಯದ ಚಿನ್ನಾಭರಣವನ್ನು ಹಟ್ಟಿಕಾ ಗೋಲ್ಡ್‌ ಕಂಪನಿಯಲ್ಲಿ ಅಡವಿಟ್ಟು 10 ಲಕ್ಷ ಪಡೆದಿದ್ದಾರೆ. ಹಣವನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ತನಿಖಾಧಿಕಾರಿ ತಿಳಿಸಿದರು.   

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.