ಕಾಸರಗೋಡು ಕ್ರೈಂ

Team Udayavani, Feb 24, 2017, 11:43 AM IST

Crime-New.jpg

500 ಬಾಟಲಿ ಮದ್ಯ ವಶಕ್ಕೆ
ಕಾಸರಗೋಡು
: ಕಾಸರಗೋಡು ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ 500 ಬಾಟಿಲಿ ಮದ್ಯ ವಶಪಡಿಸಿಕೊಂಡು ತಳಂಗರೆ ಕೊಪ್ಪಲ್‌ ಕಾಲನಿ ನಿವಾಸಿ ಮಾಧವನ್‌ ಅವರ ಪುತ್ರ ರಮೇಶನ್‌(39)ನನ್ನು ಬಂಧಿಸಲಾಗಿದೆ. ಈತನ ವಶದಲ್ಲಿದ್ದ 85 ಲೀಟರ್‌ ಮದ್ಯ ವಶಪಡಿಸಲಾಗಿದೆ. 500 ಬಾಟಿಲಿಗಳಲ್ಲಿ ಮದ್ಯ ತುಂಬಿಸಲಾಗಿತ್ತು.

ವಿದ್ಯಾರ್ಥಿನಿಗೆ ಕಿರುಕುಳ : ಸೆರೆ 
ಬೆಳ್ಳೂರು:
ಮೂರನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ಆಟೋ ರಿಕ್ಷಾ ಚಾಲಕ ನಾಟೆಕಲ್ಲು ಸಮೀಪದ ದಿನೇಶ್‌(26)ನನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಶಾಲೆಯಿಂದ ಮನೆಗೆ ಬಾಲಕಿಯನ್ನು ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದಾಗ ಕಿರುಕುಳ ನೀಡಿದ್ದಾಗಿ ದೂರು ನೀಡಲಾಗಿತ್ತು.

ರೈಲು ಢಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವು
ಕುಂಬಳೆ
: ರೈಲು ಗಾಡಿ ಢಿಕ್ಕಿ ಹೊಡೆದು ಶಿರಿಯ ರೈಲು ಹಳಿಯಲ್ಲಿ ಅಪರಿಚಿತ ವ್ಯಕ್ತಿ ಸಾವಿಗೀಡಾದ ಘಟನೆ ನಡೆದಿದೆ. ಸುಮಾರು 50 ವರ್ಷ ಪ್ರಾಯದ ಈ ವ್ಯಕ್ತಿ ಪ್ಯಾಂಟ್‌, ಶರ್ಟ್‌ ಧರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರಳು ಸಾಗಾಟ ಲಾರಿ ವಶಕ್ಕೆ
ಮಂಜೇಶ್ವರ
: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಉಪ್ಪಳ ಪರಿಸರದಿಂದ ವಶಪಡಿಸಿಕೊಂಡಿದ್ದು, ಈ ಸಂಬಂಧ ಚಾಲಕ ಮಂಗಳೂರು ಬಿ.ಸಿ.ರೋಡ್‌ ನಿವಾಸಿ ಅಬ್ದುಲ್‌ ರಝಾಕ್‌(46) ನನ್ನು ಬಂಧಿಸಿದ್ದಾರೆ.

ಮರದಿಂದ ಬಿದ್ದು ಸಾವು
ಕಾಸರಗೋ
ಡು: ಕಟ್ಟಡದಿಂದ ಬಿದ್ದು ಪೈಂಟಿಂಗ್‌ ಕಾರ್ಮಿಕ ಉತ್ತರ ಪ್ರದೇಶ ನಿವಾಸಿ, ವಿದ್ಯಾನಗರ ಪನ್ನಿಪ್ಪಾರದಲ್ಲಿ ವಾಸ್ತವ್ಯ ಹೂಡಿರುವ ರಾಜು(36) ಸಾವಿಗೀಡಾದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್‌ನಿಂದ ಮದ್ಯ ವಶಕ್ಕೆ
ಕುಂಬಳೆ
: ಮಂಗಳೂರಿನಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ 18 ಬಾಟಿÉ ಮದ್ಯವನ್ನು ಹೊಸಬೆಟ್ಟಿನಿಂದ ಅಬಕಾರಿ ದಳ ವಶಪಡಿಸಿದೆ. ಈ ಸಂಬಂಧ ಮಂಗಳೂರು ನಗರ ಕಟ್ಟೆ ನಿವಾಸಿ ನಾಗರಾಜ್‌(23)ನನ್ನು ಬಂಧಿಸಲಾಗಿದೆ.

ಅಪಘಾತದಲ್ಲಿ ಸಾವು : 18 ಲಕ್ಷ ರೂ. ನಷ್ಟ ಪರಿಹಾರ
ಕಾಸರಗೋಡು:
2015 ಎಪ್ರಿಲ್‌ 15 ರಂದು ಪೊಯಿನಾಚಿ ಜಂಕ್ಷನ್‌ನಲ್ಲಿ ಟಾಟಾ ವ್ಯಾಗ್ನರ್‌ ಢಿಕ್ಕಿ ಹೊಡೆದು ಸಾವಿಗೀಡಾದ ಪರವನಡ್ಕ ದೇಳಿ ಜಂಕ್ಷನ್‌ ನಿವಾಸಿ ಜಯಪ್ರಕಾಶ್‌(40) ಅವರ ಕುಟುಂಬಕ್ಕೆ 18 ಲಕ್ಷ ರೂ. ನಷ್ಟ ಪರಿಹಾರ ನೀಡುವಂತೆ ಕಾಸರಗೋಡು ಪ್ರಿನ್ಸಿಪಲ್‌ ಎಂಎಸಿಟಿ ನ್ಯಾಯಾಲಯ ತೀರ್ಪು ನೀಡಿದೆ.

ಗೂಡಂಗಡಿಗೆ ಬೆಂಕಿ : ಬಂಧನ
ಕಾಸರಗೋಡು
: ಚಟ್ಟಂಚಾಲ್‌ನಲ್ಲಿ ಐದು ಗೂಡಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಚಟ್ಟಂಚಾಲ್‌ ಘಟಕ ಅಧ್ಯಕ್ಷ ಅಬ್ದುಲ್‌ ಖಾದರ್‌ ಕಣ್ಣಂಬಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಬಂಧನವನ್ನು ಪ್ರತಿಭಟಿಸಿ ಚಟ್ಟಂಚಾಲ್‌ನಲ್ಲಿ ಹರತಾಳ ನಡೆಸಲಾಯಿತು.

ಟಾಪ್ ನ್ಯೂಸ್

00025

Shiroor landslide: ಕೊನೆಗೂ 71 ದಿನಗಳ ಬಳಿಕ ಅರ್ಜುನ್‌ ಲಾರಿ ಹಾಗೂ ಮೃತದೇಹ ಪತ್ತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಭೇಟೆಯಾಡಿದ ಚಿರತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

siddaramaiah

Siddaramaiah ಬೆಂಬಲಿಸಿ ಅಹಿಂದದಿಂದ ಹುಬ್ಬಳ್ಳಿ-ಬೆಂಗಳೂರು ಜಾಗೃತಿ ಜಾಥಾ

Kalaburagi: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಸರಕಾರಗಳ ಮೇಲೆ ಒತ್ತಡ, ಬೃಹತ್ ಸಮ್ಮೇಳನ

Kalaburagi: ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ಸರಕಾರಗಳ ಮೇಲೆ ಒತ್ತಡ, ಬೃಹತ್ ಸಮ್ಮೇಳನ

Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ದೂರು ದಾಖಲು

Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್‌ ಹರ್ಷ ಸಾಯಿ ವಿರುದ್ಧ ದೂರು ದಾಖಲು

“ದೇಶದ ಯಾವುದೇ ಭಾಗವನ್ನು ಪಾಕ್‌ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್‌ ಆದೇಶದಲ್ಲೇನಿದೆ?

“ದೇಶದ ಯಾವುದೇ ಭಾಗವನ್ನು ಪಾಕ್‌ ಎಂದು ಕರೆಯಬೇಡಿ: ಸುಪ್ರೀಂಕೋರ್ಟ್‌ ಆದೇಶದಲ್ಲೇನಿದೆ?

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

Chikkamagaluru: ಹಣ ಪಡೆದ ಆರೋಪ… ಪ್ರಾಂಶುಪಾಲ, ಪ್ರಥಮ ದರ್ಜೆ ಸಹಾಯಕ ಲೋಕಾಯುಕ್ತ ಬಲೆಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಅಮೀಬಿಕ್‌ ಎನ್ಸೆಫಾಲಿಟಿಸ್‌ ಬಗ್ಗೆ ಎಚ್ಚರದಿಂದಿರಿ’

Kasaragod: “ಅಮೀಬಿಕ್‌ ಎನ್ಸೆಫಾಲಿಟಿಸ್‌ ಬಗ್ಗೆ ಎಚ್ಚರದಿಂದಿರಿ’

Kasaragod: ಬಗೆದಷ್ಟು ಆಳವಾಗಿದೆ ಅಮಲು ಪದಾರ್ಥ ಜಾಲ

Kasaragod: ಬಗೆದಷ್ಟು ಆಳವಾಗಿದೆ ಅಮಲು ಪದಾರ್ಥ ಜಾಲ

Kasaragod ಇಲಿ ಜ್ವರ: ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

Kasaragod ಇಲಿ ಜ್ವರ; ಜಾಗ್ರತೆ ಪಾಲಿಸಿ : ಜಿಲ್ಲಾ ವೈದ್ಯಾಧಿಕಾರಿ

Kasaragod ಮಿದುಳನ್ನು ತಿನ್ನುವ ಅಮೀಬಾ ಸೋಂಕು: ಚಟ್ಟಂಚಾಲ್‌ ಯುವಕ ಸಾವು

Kasaragod ಮಿದುಳನ್ನು ತಿನ್ನುವ ಅಮೀಬಾ ಸೋಂಕು: ಚಟ್ಟಂಚಾಲ್‌ ಯುವಕ ಸಾವು

8

Virajpete: ಮನೆಯಂಗಳದಲ್ಲಿ ಕಾಡಾನೆ; ಗ್ರಾಮಸ್ಥರಲ್ಲಿ ಆತಂಕ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

00025

Shiroor landslide: ಕೊನೆಗೂ 71 ದಿನಗಳ ಬಳಿಕ ಅರ್ಜುನ್‌ ಲಾರಿ ಹಾಗೂ ಮೃತದೇಹ ಪತ್ತೆ

5(1)

Surathkal: ಹೊಸ ಆಕರ್ಷಣೆಗಳಿಲ್ಲದೆ ಸೊರಗುತ್ತಿವೆ ಬೀಚುಗಳು!

eshwarappa

Siddaramaiah ಪತ್ನಿ ಮುಗ್ದ, ಸಾತ್ವಿಕ ಹೆಣ್ಣು ಮಗಳು; ಅನ್ಯಾಯವಾಗಬಾರದು: ಈಶ್ವರಪ್ಪ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಭೇಟೆಯಾಡಿದ ಚಿರತೆ

Kota: ನೈಲಾಡಿಯಲ್ಲಿ ಹೊಂಚು ಹಾಕಿ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ

Dandeli:ದೂರು ನೀಡಿ ಎರಡುವರೆ ಗಂಟೆಯೊಳಗಡೆ ನಾಪತ್ತೆಯಾದ ಮಹಿಳೆಯನ್ನು ಪತ್ತೆ ಹಚ್ಚಿದ ಪೊಲೀಸರು

Dandeli:ದೂರು ನೀಡಿ ಎರಡುವರೆ ಗಂಟೆಯೊಳಗಡೆ ನಾಪತ್ತೆಯಾದ ಮಹಿಳೆಯನ್ನು ಪತ್ತೆ ಹಚ್ಚಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.